Mallikarjun Kharge:ಎಐಸಿಸಿ ಚುನಾವಣೆಗೆ ಯಾರೂ ಬೇಕಾದರೂ ಸ್ಪರ್ಧಿಸಬಹುದು: ಮಲ್ಲಿಕಾರ್ಜುನ್​ ಖರ್ಗೆ ಸ್ಪಷ್ಟನೆ

ಕಲಬುರಗಿ:Mallikarjun Kharge:ಎಐಸಿಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣದಲ್ಲಿರುವ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ವಿಚಾರವಾಗಿ ಮಾತನಾಡಿದ್ದು ಪಕ್ಷದ ಮುಖಂಡರು ಏನು ಸೂಚನೆ ನೀಡುತ್ತಾರೋ ಅದನ್ನೆಲ್ಲ ನಾನು ಪಾಲಿಸುತ್ತೇನೆ ಎಂದು ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ಪಕ್ಷದ ಎಲ್ಲಾ ಹಿರಿಯ ಮುಖಂಡರು, ಕಾರ್ಯಕರ್ತರು ಒತ್ತಾಯ ಮಾಡಿ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.

ರಾಹುಲ್​ ಗಾಂಧಿ ಎಐಸಿಸಿ ಅಧ್ಯಕ್ಷರಾಗಲು ತಯಾರಿಲ್ಲ. ಪ್ರಿಯಾಂಕಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಕೂಡ ಅಧ್ಯಕ್ಷರಾಗಲು ಒಪ್ಪುತ್ತಿಲ್ಲ. ನಮ್ಮ ಕುಟುಂಬದಿಂದ ಯಾರು ಅಧ್ಯಕ್ಷರಾಗುತ್ತಿಲ್ಲ. ನೀವು ಸ್ವತಂತ್ರವಾಗಿ ಚುನಾವಣೆ ಮಾಡಿ. ಯಾರೇ ಅಧ್ಯಕ್ಷರಾದರೂ ಅವರ ನಮ್ಮ ಪಕ್ಷದ ನಮ್ಮವರೇ ಆಗಿರುತ್ತಾರೆ ಎಂದು ಹೈಕಮಾಂಡ್ ಹೇಳಿದೆ. 17ರಂದು ಅಧ್ಯಕ್ಷ ಸ್ಥಾನದ ಚುನಾವಣೆ ಫಲಿತಾಂಶ ಹೊರ ಬೀಳಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಪಕ್ಷದಲ್ಲಿ ವನ್​ ಮ್ಯಾನ್​ ವನ್ ಪೋಸ್ಟ್​​ ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಕಾರಣಕ್ಕೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಬಳಿಕ ರಾಜ್ಯಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಸೋನಿಯಾ ಗಾಂಧಿ ನಿರ್ಣಯ ತೆಗೆದುಕೊಂಡಿದ್ದಾರೆ. ಯಾರನ್ನ ಅಧ್ಯಕ್ಷರಾಗಿ ಮಾಡ್ತಾರೋ ಗೊತ್ತಿಲ್ಲ. ಪಕ್ಷವನ್ನು ಚೆನ್ನಾಗಿ ಕಟ್ಟಲು ನಾನು ಕೆಲಸ ಮಾಡುತ್ತೇನೆ ಎಂದು ಖರ್ಗೆ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಐಡಿಯೋಲಜಿಯನ್ನು ಬೆಂಬಲಿಸುವವರು ನನ್ನ ನಿಲುವಿಗೆ ಸಪೋರ್ಟ್ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ. ಚುನಾವಣೆಯಲ್ಲಿ ನಿಲ್ಲುತ್ತೇನೆ ಎಂದವರಿಗೆ ನಿಲ್ಲಬೇಡಿ ಎಂದು ಹೇಳಲು ಆಗುವುದಿಲ್ಲ. ಅದೇ ರೀತಿ ಎಲ್ಲರೂ ನನಗೆ ಚುನಾವಣೆಗೆ ನಿಲ್ಲಿ ಎಂದು ಹೇಳಿದ ಮೇಲೂ ಹಿಂದೆ ಸರಿಯುವುದು ಕೂಡ ಸರಿ ಎನಿಸೋದಿಲ್ಲ. ನೆಹರೂ ತಮ್ಮ ಸರ್ವಸ್ವವನ್ನು ಕಳೆದುಕೊಂಡು ಜೈಲಿಗೆ ಹೋಗಿ ದೇಶ ಕಟ್ಟಲು ಬುನಾದಿ ಹಾಕಿದ್ದಾರೆ. ನೆಹರೂ ತತ್ವ ಯೋಜನೆಯ ಅಡಿಯಲ್ಲಿ ಪಂಚವಾರ್ಷಿಕ ಯೋಜನೆ ಹಾಕಿ ಪಕ್ಷ ಕಟ್ಟುವ ಕೆಲಸ ಮಾಡಲಾಗ್ತಿದೆ. ನೆಹರೂ ಬಡತನ ನಿರ್ಮೂಲನೆಗೆ ಚಿಂತನೆ ನಡೆಸಿ ಆ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ಆದರೆ ಈ ಬಿಜೆಪಿಯವರು ಬಡತನ ಹುಟ್ಟು ಹಾಕುವ ಕೆಲಸ ಮಾಡ್ತಿದ್ದಾರೆ ಎಂದು ಗುಡುಗಿದರು.

ಇದನ್ನು ಓದಿ : Mitchell Johnson Yusuf Pathan : ಲೆಜೆಂಡ್ಸ್ ಲೀಗ್ ಕ್ರಿಕೆಟ್: ಯೂಸುಫ್ ಪಠಾಣ್ ಮೇಲೆ ಮೈದಾನದಲ್ಲೇ ಹಲ್ಲೆ ನಡೆಸಿದ ಆಸೀಸ್ ವೇಗಿ ಜಾನ್ಸನ್

ಇದನ್ನೂ ಓದಿ : Rishabh Pant Birthday : ರಿಷಬ್‌ ಪಂತ್‌ಗೆ ಪ್ಲೈಯಿಂದ ಕಿಸ್‌ ಮೂಲಕ ಶುಭ ಕೋರಿದ ಊರ್ವಶಿ ರೌಟೇಲಾ

Anyone can contest AICC elections: Mallikarjun Kharge clarifies

Comments are closed.