ಟಿ.ಎನ್.ಸೀತಾರಾಮ್ ಸೀರಿಯಲ್ ಅಭಿಮಾನಿಗಳಿಗೆ ಸಿಹಿಸುದ್ದಿ…! ಮತ್ತೆ ಬರುತ್ತಿದೆ ಮಾಯಾಮೃಗ…!!

ಕನ್ನಡ ಕಿರುತೆರೆ ಲೋಕದಲ್ಲಿ ಟಿ.ಎನ್.ಸೀತಾರಾಮ ಧಾರಾವಾಹಿಗಳಿಗೇ ಅದರದ್ದೇ ಆದ ವೀಕ್ಷಕ ವರ್ಗವಿದೆ. ಅಲ್ಲದೇ ಅಪಾರ ಅಭಿಮಾನಿಗಳು ಇದ್ದಾರೆ. ಈ ಅಭಿಮಾನಿಗಳಿಗೆ ಲಾಕ್ ಡೌನ್ ಹೊತ್ತಲ್ಲೇ ಟಿ.ಎನ್.ಸೀತಾರಾಮ ಸಿಹಿಸುದ್ದಿಯೊಂದನ್ನು ನೀಡಿದ್ದು, ಮತ್ತೊಮ್ಮೆ ಮನೆ ಮನೆ ಮಾಯಾಮೃಗ ಬರಲಿದೆ ಎಂದಿದ್ದಾರೆ.

 ಟಿ.ಎನ್. ಸೀತಾರಾಮ ನಿರ್ದೇಶನದಲ್ಲಿ ಒಂದು ಕಾಲದಲ್ಲಿ ಮನೆ ಮನೆಯಲ್ಲೂ ಮನೆಮಾತಾಗಿದ್ದ ಧಾರಾವಾಹಿ ಮಾಯಾಮೃಗ.  ಈ ಧಾರಾವಾಹಿ ಇದೀಗ 5 ನೇ ಬಾರಿ ಮರುಪ್ರಸಾರವಾಗುತ್ತಿದ್ದು, ಜೂ.4 ರಿಂದ  ಭೂಮಿಕಾ ಟಾಕಿಸ್ ಯೂಟ್ಯೂಬ್ ನಲ್ಲಿ  ವೆಬ್ ಸೀರಿಸ್ ರೂಪದಲ್ಲಿ ಸೀರಿಯಲ್ ಪ್ರಸಾರವಾಗಲಿದೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿರುವ ನಿರ್ದೇಶಕ ಟಿ.ಎನ್.ಸೀತಾರಾಮ್,  ಒಂದು ವಾರದ ಎಪಿಸೋಡ್ ಗಳನ್ನು  ಒಟ್ಟಿಗೆ ಜೂನ್ 4 ರಂದು  ಬಿಡುಗಡೆ ಮಾಡುತ್ತಿದ್ದೇವೆ. ಅದಕ್ಕೂ ಮೊದಲು ಧಾರಾವಾಹಿಯ ಮುಖ್ಯ ಕಲಾವಿದರ ಜೊತೆ ಆನ್ ಲೈನ್ ಸಂವಾದ ನಡೆಯಲಿದೆ.

https://kannada.newsnext.live/bollywood-actress-aishwarya-rai-shenaullal-twins-beauty/

ಪ್ರತಿವಾರ ಐದು ಎಪಿಸೋಡ್ ಪ್ರಸಾರ ಮಾಡುವ ಚಿಂತನೆ ಇದ್ದು, ಎಪಿಸೋಡ್ ಗೂ ಮುನ್ನ ಆ ಎಪಿಸೋಡ್ ನಲ್ಲಿ ಬರುವ ಕಲಾವಿದರ ಜೊತೆ ಸಂವಾದ ಇರಲಿದೆ. ಈ ವಾರ ನನ್ನೊಂದಿಗೆ ಮಾಳವಿಕಾ,ಅವಿನಾಶ್ ಎಂಡಿ ಹಾಗೂ ಪಲ್ಲವಿ, ಮಂಜುಭಾಷಿಣಿ ಇರಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

https://kannada.newsnext.live/loan-recovery-not-permitted-udupi-dc-warning/

ಈಗಾಗಲೇ ಡಿಡಿ1,ಚಂದನ,ಈಟಿವಿಗಳಲ್ಲಿ  2 ಬಾರಿ ಮಾಯಾಮೃಗ ಪ್ರಸಾರವಾಗಿದ್ದು, ಅಪಾರ ಪ್ರೇಕ್ಷಕರನ್ನು ರಂಜಿಸಿದೆ. ಇದಲ್ಲದೇ ಜೀ ಕನ್ನಡದಲ್ಲೂ 50 ಕ್ಕೂ ಹೆಚ್ಚು ಮಾಯಾಮೃಗದ ಎಸಿಪೋಡ್ ಗಳು ಪ್ರಸಾರವಾಗಿದೆ.

https://kannada.newsnext.live/flight-ticket-charge-hike/

ಆದರೂ ಇದೀಗ ಮತ್ತೊಮ್ಮೆ ಪ್ರೇಕ್ಷಕರ ಒತ್ತಾಯ ಹಾಗೂ ಆಗ್ರಹದ ಮೇರೆಗೆ ಟಿ.ಎನ್.ಸಿ ಭೂಮಿಕಾ ಯೂ ಟ್ಯೂಬ್ ಚಾನೆಲ್ ನಲ್ಲಿ ಮತ್ತೊಮ್ಮೆ ಮಾಯಾಮೃಗ ಪ್ರಸಾರಕ್ಕೆ ಸಿದ್ಧವಾಗಿದ್ದಾರೆ. ಇದಲ್ಲದೇ ಲಾಕ್ ಡೌನ್ ಮುಗಿದು ಚಿತ್ರೀಕರಣ ಆರಂಭವಾಗುತ್ತಿದ್ದಂತೆ ಮತ್ತೊಮ್ಮೆ ಹೊಸ ಧಾರಾವಾಹಿ ಟಿ.ಎನ್.ಸೀತಾರಾಮ ಬತ್ತಳಿಕೆಯಿಂದ ಪ್ರೇಕ್ಷಕರ ಮನಗೆಲ್ಲಲು ಸಿದ್ಧವಾಗಿದೆ.

Comments are closed.