ಕನ್ನಡಿಗರ ಕ್ಷಮೆಯಾಚಿಸಿದ ಗೂಗಲ್ : ಅಷ್ಡಕ್ಕೂ ಗೂಗಲ್ ನದ್ದು ತಪ್ಪೇ ಇಲ್ಲ, ಹಾಗಾದ್ರೆ ಆಗಿದ್ದೇನು ಗೊತ್ತಾ ..?

ನವದೆಹಲಿ : ಗೂಗಲ್ ಸರ್ಚ್ ನಲ್ಲಿ ಕನ್ನಡ ಪದ‌ವನ್ನು ಕೊಳಕು‌‌‌ ಭಾಷೆ ಎಂದು ತೋರಿಸುತ್ತಿರುವುದು ಕನ್ನಡಿಗರನ್ನು ಕೆರಳಿಸಿತ್ತು. ಇದರ ಬೆನ್ನಲ್ಲೇ ಗೂಗಲ್‌ ಕನ್ನಡಿಗರಲ್ಲಿ ಕ್ಷಮೆಯಾಚಿಸಿದೆ. ಅಷ್ಟಕ್ಕೂ ಅದು ಗೂಗಲ್ ಮಾಡಿದ ತಪ್ಪಲ್ಲ.

ಗೂಗಲ್ ಸರ್ಚ್ ನಲ್ಲಿ ಅಗ್ಲಿ ಲಾಂಗ್ವೇಜ್ ಆಫ್ ಇಂಡಿಯಾ ಎಂದು ಸರ್ಚ್ ಮಾಡಿದಾಗ ವೆಬ್‍ಸೈಟ್ ಒಂದು ಕನ್ನಡ ಎಂಬ ಫಲಿತಾಂಶ ತೋರಿಸುತ್ತಿದ್ದ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಗೂಗಲ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ವೆಬ್‍ಸೈಟ್ ಪೇಜ್ ಅನ್ನು ಗೂಗಲ್ ತನ್ನ ಸರ್ಚ್‍ನಿಂದಲೇ ತೆಗೆದು ಹಾಕಿತ್ತು. ಅಲ್ಲದೇ ಕ್ಷಮೆ ಕೋರಿದೆ.

ಅಷ್ಡಕ್ಕೂ ಗೂಗಲ್ ಕನ್ನಡಿಗರನ್ನು ಅವಮಾನಿಸಿಲ್ಲ. ಸಾಮಾನ್ಯವಾಗಿ ಬಳಕೆದಾರರು ಯಾವುದೇ ಮಾಹಿತಿ ಹುಡುಕಿದಾಗ ಅದಕ್ಕೆ ಸಂಬಂಧಿಸಿದ ಹತ್ತಿರದ ಮಾಹಿತಿಯನ್ನು ಗೂಗಲ್ ತನ್ನ ಸರ್ಚ್ ರಿಸಲ್ಟ್ ನಲ್ಲಿ ತೋರಿಸುತ್ತದೆ. Which is the ugliest language in India ಎಂದು ಸರ್ಚ್ ಮಾಡಿದಾಗ ಕನ್ನಡ ಎಂದು ತೋರಿಸಿದೆ. ಅಷ್ಡಕ್ಕೂ www.debtconsolidationsquad.com ವೆಬ್‍ಸೈಟ್ ನಲ್ಲಿ ಪ್ರಶ್ನೆಯೇ ಇದೀಗ ಎಡವಟ್ಟಿಗೆ ಕಾರಣವಾಗಿದೆ. ಆದರೆ ಗೂಗಲ್‌ ಸರ್ಚ್ ಮಾಡಿದ ವಿಷಯಕ್ಕೆ ಫಲಿತಾಂಶ ನೀಡುವ ಕಾರ್ಯವನ್ನು ಮಾಡುತ್ತದೆ. ಆದರೆ ಯಾವುದೇ ಭಾಷೆಯನ್ನೂ ಗೂಗಲ್ ಅವಮಾನಿಸಲ್ಲ ಎಂದಿದೆ ಗೂಗಲ್ ಸಂಸ್ಥೆ.

ಒಂದೊಮ್ಮೆ ಗೂಗಲ್‌ನಲ್ಲಿ ಇಂತಹ ಮಾಹಿತಿ ಲಭ್ಯವಾದ್ರೆ ಕೂಡಲೇ ರಿಪೋರ್ಟ್ ಮಾಡಿ. ಗೂಗಲ್ ಸರ್ಚ್ ಕೊನೆಯಲ್ಲಿ send feedback ನಲ್ಲಿ ಅತೀ ಹೆಚ್ಚು ಮಂದಿ ರಿಪೋರ್ಟ್ ಮಾಡಿದ್ರೆ ಗೂಗಲ್ ಅಂತಹ ಮಾಹಿತಿಯನ್ನು ತೆಗೆದು ಹಾಕುತ್ತದೆ.

Comments are closed.