Husband seeks Amit Shah’s help:ಪತ್ನಿಯನ್ನು ಸೆಕ್ಸ್​ ದಂಧೆಯಿಂದ ಕಾಪಾಡಿ ಎಂದು ಅಮಿತ್​ ಶಾ ಬಳಿ ಮನವಿ ಮಾಡಿದ ಪತಿ..!

Husband seeks Amit Shah’s help:ತನ್ನ ಪತ್ನಿಗೆ ಹಣದ ಆಮಿಷ ನೀಡಿದ ದುಷ್ಕರ್ಮಿಗಳು ಆಕೆಯನ್ನು ಸೆಕ್ಸ್​ ರಾಕೆಟ್​ ಜಾಲದಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿಸಿದ ಪತಿಯೊಬ್ಬ ನ್ಯಾಯ ಬೇಕೆಂದು ಗೃಹ ಸಚಿವ ಅಮಿತ್​ ಶಾ ಬಳಿಯಲ್ಲಿ ಮನವಿ ಮಾಡಿದ ಘಟನೆಯು ಗ್ವಾಲಿಯರ್​ನ ಮಧ್ವಗಂಜ್​ ಪ್ರದೇಶದಲ್ಲಿ ನಡೆದಿದೆ.

ಪತ್ನಿ ಸೆಕ್ಸ್​ ರಾಕೆಟ್​​ನಲ್ಲಿ ತೊಡಗಿರುವ ಬಗ್ಗೆ ಸಾಕ್ಷ್ಯಾಧಾರಗಳನ್ನೂ ಈ ವ್ಯಕ್ತಿ ಹೊಂದಿದ್ದಾನೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಕೇಸು ದಾಖಲಿಸಿರುವ ವ್ಯಕ್ತಿಯು ನಾನು ಈ ಸಂಬಂಧ ಡಿಜಿಪಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​ ಶಾವರೆಗೂ ಪತ್ರ ಬರೆದಿರುವ ವ್ಯಕ್ತಿಯು ಸೆಕ್ಸ್​ ರಾಕೆಟ್​ ವಿರುದ್ಧ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಜಿಲ್ಲಾ ವರಿಷ್ಠಾಧಿಕಾರಿಗಳಿಗೂ ಈ ಸಂಬಂಧ ಮಾಹಿತಿ ನೀಡಿರುವ ವ್ಯಕ್ತಿಯು ಅವರಿಗೂ ಸೆಕ್ಸ್​ ರಾಕೆಟ್​ನಲ್ಲಿ ತನ್ನ ಪತ್ನಿ ತೊಡಗಿರುವ ಬಗ್ಗೆ ಸಾಕ್ಷ್ಯಾಧಾರಗನ್ನು ನೀಡಿದ್ದಾನೆ.

ನನ್ನ ಪತ್ನಿ ಮನೆಕೆಲಸದಾಕೆಯಾಗಿ ಕೆಲಸ ಮಾಡುತ್ತಿದ್ದಳು. ಆದರೆ ನಮ್ಮ ಬಡತನದ ಲಾಭ ಪಡೆದ ಕೆಲ ದುಷ್ಕರ್ಮಿಗಳು ಪತ್ನಿಯ ಬಳಿ ಸೆಕ್ಸ್​ ದಂಧೆಯಲ್ಲಿ ಭಾಗಿಯಾದರೆ ಕೈ ತುಂಬಾ ಹಣ ಸಿಗುತ್ತದೆ ಎಂದು ಆಮಿಷವೊಡ್ಡಿದ್ದಾರೆ. ಹಣದಾಸೆಗಾಗಿ ನನ್ನ ಪತ್ನಿ ಇದಕ್ಕೆ ಒಪ್ಪಿದ್ದಾಳೆ. ಪತ್ನಿ ಸೆಕ್ಸ್​ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಹರಿದಾಡಿದ ಬಳಿಕ ನನಗೂ ಈ ವಿಚಾರ ತಿಳಿದಿದೆ. ಇದಾದ ಬಳಿಕ ನಾನು ಪತ್ನಿ ಬಳಿ ಈ ವಿಚಾರವಾಗಿ ಪ್ರಶ್ನೆ ಮಾಡಿದೆ ಎಂದು ವ್ಯಕ್ತಿಯು ಹೇಳಿದ್ದಾನೆ.

ಈ ಸೆಕ್ಸ್​ ರಾಕೆಟ್​ ದಂಧೆಯಲ್ಲಿ ಹತ್ತಿರದ ಏರಿಯಾದ ಕೆಲ ಕಿಡಿಗೇಡಿಗಳು ಹಾಗೂ ಸೈಬರ್​ ಠಾಣೆ ಪೊಲೀಸರೂ ಭಾಗಿಯಾಗಿದ್ದಾರೆ ಎಂದು ಆತ ಆರೋಪಿಸಿದ್ದಾನೆ. ಇದೇ ಕಾರಣಕ್ಕಾಗಿಯೇ ಸೆಕ್ಸ್​ ರಾಕೆಟ್​ ಬಗ್ಗೆ ಇಷ್ಟೆಲ್ಲ ಸಾಕ್ಷ್ಯಾಧಾರಗಳನ್ನು ಒದಗಿಸಿದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಪತಿಯ ಆರೋಪವಾಗಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರು ಎಎಸ್​ಪಿ ರಾಜೇಶ್​ ದಂಡೋಟಿಯಾ ಸೈಬರ್​ ಸೆಲ್​ ವತಿಯಿಂದ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತದೆ. ಈ ವ್ಯಕ್ತಿಯ ಆರೋಪಗಳು ಸತ್ಯವಾಗಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಶೀಘ್ರದಲ್ಲೇ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇದನ್ನು ಓದಿ : Pushpa-The Rise : ದೇಶ ಮಾತ್ರವಲ್ಲ ವಿದೇಶದಲ್ಲೂ ಪುಷ್ಪ ಹವಾ: ಒಂದೇ ವಾರಕ್ಕೆ 229 ಕೋಟಿ ಗಳಿಸಿದ ಸಿನಿಮಾ

ಇದನ್ನೂ ಓದಿ : Gangrape Instagram Friend: ಚಲಿಸುತ್ತಿದ್ದ ಕಾರಿನಲ್ಲಿ 18 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ ಇನ್‌ಸ್ಟಾಗ್ರಾಂ ಗೆಳೆಯ

Husband accuses wife of acting in porn movies, seeks Amit Shah’s help

Comments are closed.