Hyderabad’s name will be change : ಭಾಗ್ಯನಗರ ಎಂದು ಬದಲಾಗುತ್ತಾ ಹೈದರಾಬಾದ್​ : ಸುಳಿವು ನೀಡಿದ ಬಿಜೆಪಿ ನಾಯಕ

ತೆಲಂಗಾಣ : Hyderabad’s name will be change : ಬಿಜೆಪಿ ಆಡಳಿತವಿರುವ ದೇಶದ ಬಹುತೇಕ ರಾಜ್ಯಗಳಲ್ಲಿ ಊರಿನ ಹೆಸರುಗಳನ್ನು ಹಾಗೂ ಹಣ್ಣಿನ ಹೆಸರುಗಳನ್ನು ಬದಲಾಯಿಸುತ್ತಿರುವ ಅನೇಕ ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಡ್ರ್ಯಾಗನ್​​ ಫ್ರೂಟ್​​ನ ಹೆಸರು ಬದಲಾಯಿಸಿದ್ದು, ಉತ್ತರ ಪ್ರದೇಶದಲ್ಲಿ ಸಾಕಷ್ಟು ನಗರಗಳಿಗೆ ಮರುನಾಮಕರಣ ಮಾಡಿದ್ದು ಹೀಗೆ ಸಾಕಷ್ಟು ಕೆಲಸಗಳನ್ನು ಬಿಜೆಪಿ ಮಾಡುತ್ತಲೇ ಇರುತ್ತದೆ. ಇದೀಗ ಬಿಜೆಪಿಯ ಕಣ್ಣು ಹೈದರಬಾದ್​ ಮೇಲೆ ಬಿದ್ದಿದ್ದು ಇದರ ಹೆಸರನ್ನು ಭಾಗ್ಯ ನಗರ ಎಂದು ಬದಲಾಯಿಸಲು ಪ್ಲಾನ್​ ಮಾಡಿದಂತೆ ತೋರುತ್ತಿದೆ.


ಹೈದರಾಬಾದ್​ನ ಚಾರ್ಮಿನಾರ್​ ಭಾಗ್ಯಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಜಾರ್ಖಂಡ್​ ಮಾಜಿ ಸಿಎಂ ಹಾಗೂ ಬಿಜೆಪಿ ನಾಯಕ ರಘುಬರ್​ ದಾಸ್​ ಹೈದರಾಬಾದ್​ ಹೆಸರನ್ನು ಭಾಗ್ಯ ನಗರ ಎಂದು ಬದಲಾಯಿಸುತ್ತೇವೆ ಎಂಬ ಸುಳಿವನ್ನು ನೀಡಿದ್ದಾರೆ. ಒಂದು ವೇಳೆ ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಯಶಸ್ವಿಯಾದರೆ ಹೈದರಾಬಾದ್​ ಮರು ನಾಮಕರಣಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ತೆಲಂಗಾಣದಲ್ಲಿರುವ ಟಿಆರ್​ಎಸ್​ ಸರ್ಕಾರದ ಬಗ್ಗೆ ಶ್ರೀ ಸಾಮಾನ್ಯರಿಗಾಗಲಿ ಅಥವಾ ದೊಡ್ಡ ಉದ್ಯಮಿಗಳಿಗಾಗಲಿ ಯಾರಿಗೂ ಸಮಾಧಾನವಿರುವಂತೆ ತೋರುತ್ತಿಲ್ಲ. ಈ ಸರ್ಕಾರಕ್ಕೆ ಸಾರ್ವಜನಿಕರ ಹಿತಕ್ಕಿಂತ ಕುಟುಂಬ ರಾಜಕಾರಣವೇ ದೊಡ್ಡದಾಗಿ ತೋರುತ್ತಿದೆ. ಈ ಸರ್ಕಾರವು ಜನರ ಕಾಳಜಿ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಇಲ್ಲಿನ ಜನರು ಬಿಜೆಪಿ ಕಡೆಗೆ ವಾಲುತ್ತಿದ್ದಾರೆ. ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲು ಪ್ರಧಾನಿ ಮೋದಿ ಇಲ್ಲಿ ಎಂಟ್ರಿ ನೀಡುತ್ತಾರ ಎಂದು ಹೇಳಿದರು.


ಉದಯಪುರದಲ್ಲಿ ಕನ್ಹಯ್ಯಲಾಲ್​ ಶಿರಚ್ಛೇದ ಪ್ರಕರಣದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು , ಕನ್ಹಯ್ಯಲಾಲ್​ ಒಬ್ಬ ಬಡ ಕುಟುಂಬದ ವ್ಯಕ್ತಿಯಾಗಿದ್ದು ಈತನನ್ನು ಐಸಿಸ್​ ಹಾಗೂ ಪಾಕಿಸ್ತಾನದ ಜೊತೆಯಲ್ಲಿ ಲಿಂಕ್​ ಹೊಂದಿದ್ದ ಕೊಲೆಗಾರರು ಕೊಂದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್​ ಶಾ ಈ ಬಗ್ಗೆ ಸಮಗ್ರ ತನಿಖೆಗೆ ಸೂಚನೆ ನೀಡಿದ್ದಾರೆ. ಸಹೋದರತ್ವವನ್ನು ಬಿಜೆಪಿ ಎಂದಿಗೂ ಪಾಲಿಸುತ್ತದೆ ಎಂದು ಹೇಳಿದರು.
ಜಾರ್ಖಂಡ್​​ನ ಜನತೆ ಹಾಗೂ ಇಲ್ಲಿನ ಮುಸ್ಲಿಂ ಸಮುದಾಯವೇ ಒವೈಸಿಯನ್ನು ತಿರಸ್ಕರಿಸಿದ್ದಾರೆ. ಜಾರ್ಖಂಡ್​ನಲ್ಲಿ ಒಂದು ಸೀಟು ಗೆಲ್ಲಲ್ಲು ಸಹ ಒವೈಸಿಗೆ ಸಾಧ್ಯವಾಗಲಿಲ್ಲ. ಜನರನ್ನು ವಿಭಜಿಸಲು ಪ್ರಯತ್ನಿಸುವ ಶಕ್ತಿಗಳಿಗೆ ಪ್ರಧಾನಿ ಮೋದಿಯವರ ಆಡಳಿತದಲ್ಲಿ ಭಾರತದ ರಾಜಕೀಯದಲ್ಲಿ ಸ್ಥಾನವಿಲ್ಲ ಎಂದು ಅವರು ಹೇಳಿದರು.

ಇದನ್ನು ಓದಿ : Ravi Shastri : ಒಂದೇ ಸರಣಿ… 2 ಟೂರ್… ಹೊಸ ಅವತಾರದಲ್ಲಿ ಟೀಮ್ ಇಂಡಿಯಾ ಮಾಜಿ ಕೋಚ್ ಶಾಸ್ತ್ರಿ !

ಇದನ್ನೂ ಓದಿ : ಬೆನ್ನು ಬಿಡದೆ ಫಾಲೋ ಮಾಡಿದ ಕ್ಯಾಮರಾಮೆನ್‌ಗೆ ಸೀರಿಯಸ್ ಲುಕ್ ಕೊಟ್ಟ ಕಿಂಗ್ ಕೊಹ್ಲಿ

Hyderabad’s name will be changed to Bhagyanagar if BJP comes to power: Raghubar Das

Comments are closed.