Sputnik Light : ರಷ್ಯಾದ ʼಸ್ಪುಟ್ನಿಕ್ ಲೈಟ್ʼ ಲಸಿಕೆ ರಫ್ತಿಗೆ ಕೇಂದ್ರ ಸರ್ಕಾರದಿಂದ ಗ್ರೀನ್‌ ಸಿಗ್ನಲ್

ನವದೆಹಲಿ :  ಭಾರತದಲ್ಲಿ ಉತ್ಪಾದಿಸಲಾದ ರಷ್ಯಾದ ಏಕ ಡೋಸ್ (Russia’s single-dose) ಕೋವಿಡ್-19 ಲಸಿಕೆ ಸ್ಪುಟ್ನಿಕ್ ಲೈಟ್ (Sputnik Light) ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಭಾರತೀಯ ಔಷಧ ಸಂಸ್ಥೆ ಹೆಟೆರೊ ಬಯೋಫಾರ್ಮಾ ಲಿಮಿಟೆಡ್ (Hetero Biopharma Limited) ಗೆ 40 ಲಕ್ಷ ಡೋಸ್ ಸ್ಪುಟ್ನಿಕ್ ಲೈಟ್ʼನ್ನ ರಷ್ಯಾಕ್ಕೆ ರಫ್ತು ಮಾಡಲು ಅನುಮತಿ ನೀಡಲಾಗಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: Expo Dubai : ನಟಿ ಐಶ್ವರ್ಯ ರೈ ಬಚ್ಚನ್ ದುಬೈ ಎಕ್ಸ್‌ಪೋಗೆ ಭೇಟಿ

ಸ್ಪುಟ್ನಿಕ್ ಲೈಟ್ ರಷ್ಯಾದ ಲಸಿಕೆ ಸ್ಪುಟ್ನಿಕ್ ವಿಯ ಘಟಕ-1 ರಂತಯೇ ಇದೆ, ಇದನ್ನು ಏಪ್ರಿಲ್ʼನಲ್ಲಿ ಭಾರತದ ಔಷಧ ನಿಯಂತ್ರಕರಿಂದ ತುರ್ತು ಬಳಕೆಯ ದೃಢೀಕರಣವನ್ನ ಪಡೆದ ನಂತರ ಭಾರತದ ಕೋವಿಡ್-ವಿರೋಧಿ ಇನಾಕ್ಯುಲೇಶನ್ ಕಾರ್ಯಕ್ರಮದಲ್ಲಿ ಬಳಸಲಾಗುತ್ತಿದೆ.

ಜಬ್ ಉತ್ಪಾದನೆಯಲ್ಲಿ ರಷ್ಯಾದ ನೇರ ಹೂಡಿಕೆ ನಿಧಿಯ (RDIF) ಪಾಲುದಾರರಲ್ಲಿ ಒಬ್ಬರಾದ ಹೆಟೆರೊ ಬಯೋಫಾರ್ಮಾ ಉತ್ಪಾದಿಸಿದ ಸ್ಪುಟ್ನಿಕ್ ಲೈಟ್ ಅನ್ನು ಭಾರತದ ಔಷಧ ನಿಯಂತ್ರಕರಿಂದ ತುರ್ತು ಬಳಕೆಯ ದೃಢೀಕರಣ ಪಡೆಯುವವರೆಗೆ ತಮ್ಮ ದೇಶಕ್ಕೆ ರಫ್ತು ಮಾಡಲು ಅನುಮತಿ ನೀಡುವಂತೆ ರಷ್ಯಾ ರಾಯಭಾರಿ ಭಾರತ ಸರ್ಕಾರವನ್ನು ಒತ್ತಾಯಿಸಿದ್ದರು.

ಕೇಂದ್ರಕ್ಕೆ ನೀಡಿದ ಸಂವಹನದಲ್ಲಿ, ರಷ್ಯಾದ ರಾಯಭಾರಿ ನಿಚೋಲೆ ಕುಡಾಶೆವ್ ಅವರು ಹೆಟೆರೊ ಬಯೋಫಾರ್ಮಾ ಲಿಮಿಟೆಡ್ ಈಗಾಗಲೇ ಸ್ಪುಟ್ನಿಕ್ ವಿಯ ಒಂದು ಮಿಲಿಯನ್ ಡೋಸ್ ಮತ್ತು ಸ್ಪುಟ್ನಿಕ್ ಲೈಟ್ʼನ ಎರಡು ಮಿಲಿಯನ್ ಡೋಸ್ʼಗಳನ್ನು ತಯಾರಿಸಿದೆ. ಆದ್ರೆ, ಲಸಿಕೆಯ ಆರು ತಿಂಗಳ ಶೆಲ್ಫ್ ಲೈಫ್ ಅದರ ನೋಂದಣಿಗೆ ಮೊದಲು ಅವಧಿ ಮೀರಬಹುದು, ಇದು ಲಸಿಕೆಯ ಡೋಸ್ʼಗಳನ್ನು ವ್ಯರ್ಥ ಮಾಡುತ್ತೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ :ಕೋವಿಡ್‌ ವೈರಸ್‌ ಹುಟ್ಟಿದ್ದು ವುಹಾನ್‌ ಲ್ಯಾಬ್‌ನಲ್ಲಿ : ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟಿದೆ ಶಾಕಿಂಗ್ ವರದಿ

ಭಾರತೀಯ ಔಷಧ ಸಂಸ್ಥೆ ಹೆಟೆರೊ ಬಯೋ ಫಾರ್ಮಾಗೆ 40 ಲಕ್ಷ ಡೋಸ್ ಸ್ಪುಟ್ನಿಕ್ ಲೈಟ್ ಅನ್ನು ರಷ್ಯಾಕ್ಕೆ ರಫ್ತು ಮಾಡಲು ಸರ್ಕಾರ ಅನುಮತಿ ನೀಡಿದೆ. ವಿವರವಾದ ಚರ್ಚೆಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.

(Green signal from Russian government for export of Russian Sputnik Lightʼ vaccine)

Comments are closed.