Marriage Age : ಬೇರೆ ಬೇರೆ ದೇಶಗಳಲ್ಲಿ ಎಷ್ಟು ವರ್ಷಕ್ಕೆ ಮದುವೆಯಾಗಬಹುದು?

ಭಾರತದ ಕೇಂದ್ರ ಸಂಪುಟ ಸಭೆಯು ಕೊನೆಗೂ ಮಹಿಳೆಯರ ವಿವಾಹದ ವಯಸ್ಸನ್ನು 18 ರಿಂದ 21ಕ್ಕೆ ಏರಿಸಲು ಒಪ್ಪಿಗೆ ನೀಡಿದೆ. ಇಂದಿಗೂ ವಿವಾಹ ಮಾಡುವ ಸಂಪ್ರದಾಯ ಇಂದಿಗೂ ಇದೆ. ಒಂದೊಂದು ದೇಶದಲ್ಲಿ ಒಂದೊಂದು ಪ್ರಾಯವನ್ನು ಮದುವೆಗೆ ನಿಗದಿಸಲಾಗಿದೆ. ಹಾಗಿದ್ರೆ ಮದುವೆಯ ವಯಸ್ಸು ( Women Legal Marriage Age) ಯಾವ ದೇಶದಲ್ಲಿ ಹೇಗಿದೆ ಅಂತ ಈ ಸ್ಟೋರಿ ಓದಿ ನೋಡಿ. ಹಲವು ದೇಶಗಳಲ್ಲಿ ಪುರುಷರ ಮದುವೆ ವಯಸ್ಸು 17 ಹಾಗೂ ಮಹಿಳೆಯರ ಮದುವೆ ವಯಸ್ಸು 16 ಆಗಿದೆ. ಬಹುತೇಕ ದೇಶಗಳಲ್ಲಿ ಇದು ಚಾಲ್ತಿಯಲ್ಲಿದೆ.

ಯುರೋಪಿನ ಎಸ್ಟೋನಿಯದಲ್ಲಿ 15 ವರ್ಷಕ್ಕೇ ಮದುವೆ ಆಗಬಹುದಂತೆ!
ಹೌದು! ಇದು ಅಚ್ಚರಿ ಆದ್ರು ನಿಜ. ಹೆತ್ತವರ ಸಮ್ಮತಿ ಇದ್ದರೆ, ಟೀನೇಜ್‌ನಲ್ಲಿ ಮದುವೆ ಆಗಬಹುದು.

ಬ್ರಿಟನ್
ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ 18 ಮದುವೆಯ ವಯಸ್ಸಾಗಿದೆ. ಆದರೆ ತಂದೆ ತಾಯಿಯ ಒಪ್ಪಿಗೆ ಪಡೆದು 16/17 ವಯಸ್ಸಿಗೇ ಸಹ ವಿವಾಹವಾಗಬಹುದು.

ಟ್ರಿನಿಡಾಡ್ ಹಾಗೂ ಟೊಬ್ಯಾಗೊದಲ್ಲಿ? 12 ವರ್ಷಕ್ಕೇ ಮದ್ವೆ
ಯುಎಸ್ ಹ್ಯುಮನ್ ರೈಟ್ಸ್ 2014ರ ವರದಿ ಪ್ರಕಾರ, ಟ್ರಿನಿಡಾಡ್ ಹಾಗೂ ಟೊಬ್ಯಾಗೊದಲ್ಲಿ ಅಧಿಕೃತ ಮದುವೆ ವಯಸ್ಸು18. ಇಲ್ಲಿ ಮುಸ್ಲಿಂ ಹಾಗೂ ಹಿಂದುಗಳಿಗೆ ಅವರದ್ದೇ ಆದ ಮದುವೆ ನಿಯಮ ಇದೆ. ಮುಸ್ಲಿಂ ಯುವಕರು 16 ಹಾಗೂ ಮಹಿಳೆಯರು12ನೆ ವಯಸ್ಸಿನಲ್ಲಿ ಮದುವೆ ಆಗಬಹುದು. ಹಿಂದೂಗಳಲ್ಲಿ ಇದು 18 ಮತ್ತು14 ಆಗಿದೆ.

ಅಮೆರಿಕಾ
ಅಮೆರಿಕಾದಲ್ಲಿ ದೇಶದಲ್ಲಿ ಪ್ರತಿಯೊಂದು ರಾಜ್ಯಕ್ಕೂ ಬೇರೆ ಬೇರೆ ಮದುವೆ ನಿಯಮಗಳಿವೆ. ಹೆಚ್ಚಿನ ರಾಜ್ಯಗಳಲ್ಲಿ 18 ಹಾಗೂ ನೆಬರಸ್ಕದಲ್ಲಿ 19 ಆಗಿದೆ.

ಚೀನಾ
ಚೀನಾದಲ್ಲಿ ಮದುವೆ ರಿಜಿಸ್ಟ್ರೇಷನ್ ಮಾಡಲು ವಿಭಿನ್ನ ನಿಯಮವಿದೆ. ಪ್ರಸ್ತುತ ಅಲ್ಲಿ ಪುರುಷರಿಗೆ ಮದುವೆ ವಯಸ್ಸು 22 ಹಾಗೂ ಮಹಿಳೆಯರಿಗೆ 20 ಆಗಿದೆ. ಇದನ್ನು ಕಡಿಮೆ ಮಾಡಬೇಕೆಂದು ಸಾಕಷ್ಟು ಅಭಿಪ್ರಾಯಗಳಿವೆ.

ನೈಗರ್‌ನಲ್ಲಿ ಬಾಲ್ಯ ವಿವಾಹಕ್ಕೆ ಅಸ್ತು
ಇಲ್ಲಿನ 76% ಹುಡುಗಿಯರು 18 ವರ್ಷಕ್ಕೆ ಮೊದಲೇ, 28% 15 ವರ್ಷಕ್ಕೆ ಮೊದಲೇ ವಿವಾಹವಾಗುತ್ತಾರೆ. ಯುನಿಸೆಫ್ ರಿಪೋರ್ಟ್ ಪ್ರಕಾರ ನೈಗರ್ ಪ್ರಪಂಚದಲ್ಲೇ ಅತಿ ಹೆಚ್ಚು ಬಾಲ್ಯ ವಿವಾಹ ಹೊಂದಿರುವ ದೇಶವಾಗಿದೆ. ಪಟ್ಟಣಗಳಿಗೆ ಹೋಲಿಸಿದರೆ, ಹಳ್ಳಿಯ ಮಕ್ಕಳು ಬಾಲ್ಯ ವಿವಾಹಕ್ಕೆ ಜಾಸ್ತಿ ಬಲಿಯಾಗುತ್ತಿದ್ದಾರೆ. ವಿದ್ಯಾಭ್ಯಾಸದ ಹಾಗೂ ಹಣದ ಕೊರತೆ ಎಳೆಯ ಪ್ರಾಯದಲ್ಲೇ ಮದುವೆ ಮಾಡಲು ಮುಖ್ಯ ಕಾರಣವಾಗಿದೆ.

ಭಾರತದಲ್ಲಿ ಈ ಹಿಂದೆ ವಿವಾಹವಾಗಲು ಕನಿಷ್ಟ ಪ್ರಾಯ ಪುರುಷರಿಗೆ 21 ಹಾಗೂ ಮಹಿಳೆಯರಿಗೆ 18 ಆಗಿತ್ತು. ಈಗ ಮಹಿಳೆಯರಿಗೆ 21 ವಯಸ್ಸು ಆಗಿ ಏರಿಸಲಾಗಿದೆ. ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳ ಕುರಿತು ಕಾಳಜಿ ಹೊಂದಿದ್ದು, ಬಾಲ್ಯ ವಿವಾಹ ನಿಷೇಧ ಕಾಯ್ದೆ, ವಿಶೇಷ ವಿವಾಹ ಕಾಯ್ದೆ ಹಾಗೂ ಹಿಂದೂ ವಿವಾಹ ಕಾಯ್ದೆಗಳಲ್ಲಿ ಬದಲಾವಣೆ ತರಲು ಮುಂದಾಗಿದೆ. ಹೆಣ್ಣು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಮೋದಿ 2020ರ ಸ್ವಾತಂತ್ರೋತ್ಸವ ಭಾಷಣದ ಸಂದರ್ಭದಲ್ಲಿ ಹೇಳಿದ್ದರು.

ಈ ಸುದ್ದಿ ಹೊರಬಿದ್ದಂತೆ, ದೇಶದಲ್ಲಿ ಸಾಕಷ್ಟು ಚರ್ಚೆ ಶುರುವಾಗಿದೆ.ಎಐಎಂಪಿಎಲ್ ಬಿ ಸದಸ್ಯ ಖಾಲಿದ್ ರಶೀದ್ ಫಿರಂಗಿ ಮಹಾಲಿ ” ಈ ನಿರ್ಧಾರ ಸರಿಯಲ್ಲ. ಇದು ಭಾರತೀಯ ಸಂಸ್ಕೃತಿಗೆ ವಿರುದ್ದವಾಗಿದೆ. ಇದಕ್ಕೆ ನನ್ನ ತೀವ್ರ ಅಸಮಾಧಾನ ಇದೆ” ಎಂದಿದ್ದಾರೆ

ಇದನ್ನೂ ಓದಿ: marriage age of women : ಮಹಿಳೆಯರ ಮದುವೆಯ ಕನಿಷ್ಟ ವಯಸ್ಸು 18 ರಿಂದ 21 ವರ್ಷಕ್ಕೆ ಏರಿಸಲು ಸಂಪುಟ ಅಸ್ತು..!

ಇದನ್ನೂ ಓದಿ: Perfume City : ಒಂದಾನೊಂದು ಕಾಲದಲ್ಲಿ ಭಾರತದ ಈ ನಗರದ ಚರಂಡಿಯಲ್ಲೂ ಸುಗಂಧ ದ್ರವ್ಯ ಹರಿಯುತ್ತಿತ್ತಂತೆ!

(India Moves to Raise Ceiling for Women Legal Marriage Age Across Globe)

Comments are closed.