ಸಾರಿಗೆ ಮುಷ್ಕರ : ನೇಣು ಬಿಗಿದು ಸಾರಿಗೆ ನೌಕರ ಆತ್ಮಹತ್ಯೆ

ಬೆಳಗಾವಿ : ಸಾರಿಗೆ ನೌಕರರು ಅರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ನಡೆಸುತ್ತಿರುವ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದೆ‌. ಈ ನಡುವಲ್ಲೇ ಸಾರಿಗೆ ನೌಕರನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಳಗಾವಿಯ ಸವದತ್ತಿ ನಿವಾಸಿ ಸಾರಿಗೆ ನೌಕರ ಶಿವಕುಮಾರ್ ನೀಲಗಾರ (40 ವರ್ಷ) ಎಂಬವರೆ ಆತ್ಮಹತ್ಯೆ ಮಾಡಿಕೊಂಡವರು. ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ‌ ಮೂರ ದಿನಗಳಿಂದಲೂ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಇದೀಗ ಶಿವಕುಮಾರ್ ನೀಲಗಾರ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು  ಅತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಆರೋಪ ಕೇಳಿಬಂದಿದೆ.

Comments are closed.