ನಿತ್ಯಭವಿಷ್ಯ : 09-04-2021

ಮೇಷರಾಶಿ
ಅಧಿಕ ಖರ್ಚು, ಆರೋಗ್ಯ ಸಮಸ್ಯೆ ಕಾಡುವುದು, ಎಡರು ತೊಡರುಗಳ ನಡುವೆ ಹಂತ ಹಂತವಾಗಿ ಅಭಿವೃದ್ಧಿ ಗೋಚರ, ಮನೆಯಲ್ಲಿ ಅತಿಥಿ  ಆಗಮನದಿಂದ ಸಂತಸ, ವ್ಯವಹಾರದಲ್ಲಿ ಚೇತರಿಕೆ.

ವೃಷಭರಾಶಿ
ಧನವ್ಯಯವಿದ್ದರೂ ಮನಸಿಗೆ ಸಂತೃಪ್ತಿ. ಮಕ್ಕಳು ದೂರ, ಆಕಸ್ಮಿಕ ಬಂಧುಗಳ ಆಗಮನ. ವ್ಯಾಪಾರ, ಹೂಡಿಕೆಯ ಅಭಿವೃದ್ಧಿ ತರುವುದು. ವಿದ್ಯಾಭ್ಯಾದಲ್ಲಿ ಪ್ರಗತಿ ದಿನಾಂತ್ಯ ಶುಭವಿದೆ.

ಮಿಥುನರಾಶಿ
ಅಧಿಕ ಧನಾಗಮನ, ಮನೆಯವರ ಆರೋಗ್ಯದ ಬಗ್ಗೆ ಸ್ವಲ್ಪ ಗಮನವಿರಲಿ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಬದಲಾವಣೆ ಚಿಂತನೆ. ಶ್ರೀದೇವರ ದರ್ಶನದಿಂದ ನೆಮ್ಮದಿ.

ಕರ್ಕಾಟಕರಾಶಿ
ಕೆಲಸಕಾರ್ಯಗಳು ಪೂರ್ಣತೆ ಪಡೆಯಲಿದೆ. ಆರ್ಥಿಕ ವಾಗಿ ಹೆಚ್ಚಿನ ಸಮಸ್ಯೆ ಪರಿಹಾರ, ದೂರ ದೇಶದಲ್ಲಿ ಉದ್ಯೋಗ ಲಾಭ, ತಂದೆಯಿಂದ ಅನುಕೂಲ, ಗೆಳೆಯ ರೊಂದಿಗೆ ವಿರಸ.

ಸಿಂಹರಾಶಿ
ಮಕ್ಕಳಿಂದ ಲಾಭ, ಮಿತ್ರರು ದೂರ, ನಿರುದ್ಯೋಗಿ ಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ, ಉದ್ವೇಗ, ಬೇಸರ, ಭಯ ಮೂಡಲಿದೆ,  ಆತ್ಮವಿಶ್ವಾಸ ಹೆಚ್ಚಿಸಿ ಕೊಳ್ಳಿ, ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶವಿದೆ.

ಕನ್ಯಾರಾಶಿ
ಹಿರಿಯರ ಮಾತಿಗೆ ಬೆಲೆ ಕೊಡಿ, ಭೂಮಿ ಮತ್ತು ವಾಹನ ಯೋಗ, ತಾಯಿಯಿಂದ ಲಾಭ, ಛಲ, ಹಠವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗ ಮಾಡಿ, ತನ್ನದೇ ಸರಿ‌ ಅನ್ನೋ ಹಠ ಒಳ್ಳೆಯದಲ್ಲ, ಆರೋಗ್ಯ ದಲ್ಲಿ ಚೇತರಿಕೆ.

ತುಲಾರಾಶಿ
ಕುಟುಂಬದಲ್ಲಿ ಆಕ್ಷೇಪ, ಮನಸ್ತಾಪಗಳಿಂದ ಮನಸಿಗೆ ಬೇಸರ, ಬಂಧುಗಳಿಂದ ನಿಂದನೆ, ಉದ್ಯೋಗಕ್ಕಾಗಿ ಓಡಾಟ, ನಿದ್ರಾಭಂಗ. ಸಿಡುಕುತನದಿಂದ ಕಾರ್ಯ ಸಾಧನೆಯ ಅಡ್ಡಿಯನ್ನು ನಿವಾರಿಸಿಕೊಳ್ಳಿ.

ವೃಶ್ಚಿಕರಾಶಿ
ಉತ್ತಮ ಅವಕಾಶಗಳು, ಶುಭಕಾರ್ಯಗಳಿಗೆ ಕಾಲ ಕೂಡಿ ಬರುವುದು, ಉದ್ಯೋಗಿಗಳು, ವ್ಯಾಪಾರಸ್ಥರಿಗೆ ಎಚ್ಚರಿಕೆ ಅಗತ್ಯ, ಸಹಕಾರ ಮನೋಭಾವಗಳಿಂದ ನೀವು ಕೈಗೊಳ್ಳುವ ಕಾರ್ಯಕಲಾಪಗಳು ಪೂರ್ಣ ಗೊಳ್ಳಲಿದೆ.

ಧನುರಾಶಿ
ಉದ್ಯೋಗದಲ್ಲಿ ಮುಂಭಡ್ತಿ, ವರ್ಗಾವಣೆ ತೋರಿ ಬಂದೀತು. ಆಸೆಗಳು ಆಕಾಂಕ್ಷೆಗಳು ಈಡೇರುವುದು, ಮಾನಸಿಕ ನೆಮ್ಮದಿ ಪ್ರಾಪ್ತಿ, ಇಷ್ಟಮಿತ್ರರ ಪ್ರೀತಿ, ವಿಶ್ವಾಸ, ಸಹಕಾರ ಹೆಚ್ಚಲಿದೆ, ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿ.

ಮಕರರಾಶಿ
ಉದ್ಯೋಗ ಸ್ಥಳ ಬದಲಾವಣೆ, ಸ್ವಯಂಕೃತಾ ಅಪರಾಧದಿಂದ ತೊಂದರೆ, ಶುಭ ಕಾರ್ಯಗಳಿಗೆ ಸಿದ್ಧತೆ, ದೂರ ಪ್ರವಾಸ, ತೀರ್ಥಯಾತ್ರೆ,  ಉದ್ಯೋಗ ಕ್ಷೇತ್ರದಲ್ಲಿ ತುಸು ಲಾಭ, ಆತ್ಮೀಯರಿಂದ ಸಿಗುವ ನೆರವು, ಶುಭವಿದೆ.

ಕುಂಭರಾಶಿ
ವ್ಯಾಪಾರ, ವ್ಯವಹಾರದಲ್ಲಿ ಅಧಿಕ ಲಾಭ, ಮಾನಸಿಕ ಚಿಂತೆ, ಮಕ್ಕಳ ಬೌದ್ಧಿಕ ಮಟ್ಟ ಕುಸಿತ, ಆರೋಗ್ಯ ಸಮಸ್ಯೆ, ದೇವತಾಕಾರ್ಯಗಳು ನೆರವೇರಲಿದೆ, ಇತರರ ಭಾವನೆಗಳಿಗೆ ಸ್ಪಂದಿಸುವ ನಿಮಗೆ ಒಳ್ಳೆಯ ಅವಕಾಶ ದೊರಕಲಿದೆ. ಮುನ್ನಡೆಯಿರಿ.

ಮೀನರಾಶಿ
ವ್ಯವಹಾರ ಕ್ಷೇತ್ರದಲ್ಲಿ ಪ್ರಗತಿ, ಉದ್ಯೋಗ ಲಾಭ, ವಾಹನ ಖರೀದಿ, ಗೃಹದಲ್ಲಿ ಶುಭಮಂಗಲ ಕಾರ್ಯ ಗಳಿಗೆ ಅನುಕೂಲ, ಒಳ್ಳೆಯ ಮನೋಭಾವ, ಕಾರ್ಯ ಭಾಗದಲ್ಲಿ ಉತ್ಸಾಹವು ಕಂಡುಬರುವುದು.

Comments are closed.