Bikaner Express derails : ಪಶ್ಚಿಮ ಬಂಗಾಳದಲ್ಲಿ ಹಳಿ ತಪ್ಪಿದ ರೈಲು: ಮೂವರು ದಾರುಣ ಸಾವು

Bikaner Express derails : ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಬಿಕಾನೇರ್​ ಎಕ್ಸ್​ಪ್ರೆಸ್​​ನ ಬಹುಬೋಗಿಗಳು ಹಳಿತಪ್ಪಿದ ಪರಿಣಾಮ ಅಪಘಾತದಲ್ಲಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ರೈಲಿನ ಸುಮಾರು 12 ಬೋಗಿಗಳು ಹಾನಿಗೊಳಗಾಗಿವೆ ಎನ್ನಲಾಗಿದೆ.

ರಾಜಸ್ಥಾನದ ಬಿಕಾನೇರ್‌ನಿಂದ ಹೊರಟಿದ್ದ ರೈಲು ಪಾಟ್ನಾ ಮೂಲಕ ಅಸ್ಸಾಂನ ಗುವಾಹಟಿಗೆ ತೆರಳುತ್ತಿದ್ದಾಗ ಜಲ್ಪೈಗುರಿಯ ಮೈನಾಗುರಿ ಬಳಿ ಗುರುವಾರ ಸಂಜೆ 5.15 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಘಟನೆಯ ಸಮಯದಲ್ಲಿ ರೈಲಿಗೆ ಯಾವುದೇ ನಿಲುಗಡೆ ಇರಲಿಲ್ಲ . ಈ ರೈಲು ಮೈನಾಗೂರಿ ಮೂಲಕ ಹಾದು ಹೋಗುತ್ತಿತ್ತು ಎಂದು ತಿಳಿದು ಬಂದಿದೆ. ರೈಲು ಒಮ್ಮೆಲೆ ಜರ್ಕ್​ ಆಯಿತು. ಇದಾಗಿ ಕೆಲವೇ ಹೊತ್ತಿನಲ್ಲಿ ರೈಲಿನ ಬೋಗಿಗಳು ಒಂದೊದಾಗಿಯೇ ಪಲ್ಟಿಯಾದವು ಎಂದು ಪ್ರಯಾಣಿಕರೊಬ್ಬರು ಮಾಹಿತಿ ನೀಡಿದರು.

ಹಳಿತಪ್ಪಿದ ಬೋಗಿಯಲ್ಲಿದ್ದ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಗಾಯಾಳುಗಳನ್ನು ಮೈನಾಗುರಿ ಹಾಗೂ ಜಲಪೈಗುರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ರೈಲ್ವೆ ಪೊಲೀಸರು ಪ್ರಕರಣ ಸಂಬಂಧ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಎನ್​ಡಿಆರ್​ಎಫ್​ ಕೂಡ ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಇನ್ನು ರೈಲ್ವೆ ಇಲಾಖೆಯು 8134054999 ಸಹಾಯವಾಣಿಯನ್ನು ನೀಡಿದ್ದು ಗಾಯಾಳುಗಳನ್ನು ಸಾಗಿಸಲು 20 ಆ್ಯಂಬುಲೆನ್ಸ್​ಗಳನ್ನು ರವಾನಿಸಲಾಗಿದೆ.

ಬಂಗಾಳದ ಉತ್ತರ ಭಾಗದಲ್ಲಿರುವ ಆಸ್ಪತ್ರೆಗಳಿಗೆ ಎಲ್ಲಾ ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿ ಎಂದು ಸೂಚನೆ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯು ಪಶ್ಚಿಮ ಬಂಗಾಳ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿಗೆ ಕರೆ ಮಾಡಿದ್ದು ಘಟನೆ ಬಗ್ಗೆ ಇಂಚಿಂಚೂ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಹಾಗೂ ರಕ್ಷಣಾ ಕಾರ್ಯಾಚರಣೆಗೆ ಎಲ್ಲಾ ರೀತಿಯ ನೆರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ : PM Modi emergency meeting : ಭಾರತದಲ್ಲಿ ಕೋವಿಡ್‌ ಆರ್ಭಟ : ಪ್ರಧಾನಿ ಮೋದಿ ನೇತೃತ್ವದಲ್ಲಿ ಎಲ್ಲಾ ಸಿಎಂಗಳ ಜೊತೆ ತುರ್ತು ಸಭೆ

ಇದನ್ನೂ ಓದಿ : Mekedatu Government Order : ಮೇಕೆದಾಟು ಪಾದಯಾತ್ರೆಯನ್ನು ತಕ್ಷಣವೇ ನಿಲ್ಲಿಸಿ : ಸರಕಾರದ ಅಧಿಕೃತ ಆದೇಶ

ಇದನ್ನೂ ಓದಿ : ಮಕರ ಸಂಕ್ರಾಂತಿಗೆ ಎಳ್ಳು–ಬೆಲ್ಲದ ಸವಿ; ಮನೆಯಲ್ಲೇ ಸಿಹಿಸಿಹಿಯಾದ ಖಾದ್ಯ ಮಾಡುವ ವಿಧಾನ ತಿಳಿಯಿರಿ

Three dead as Guwahati-bound Bikaner Express derails in WB’s Jalpaiguri; rescue ops on

Comments are closed.