ಲಾಕ್ ಡೌನ್ ಆದೇಶವನ್ನು ಕಠಿಣಗೊಳಿಸಿ ಎಂದ WHO

0

ಜಿನೀವಾ : ಇಡೀ ವಿಶ್ವದಲ್ಲೇ ‌ಕೊರೊನಾ ಸೋಂಕು ಆರ್ಭಟಕ್ಕೆ ತತ್ತರಿಸಿ ಹೋಗಿದೆ. ದಿನೇ ದಿನೇ ಸೋಂಕಿತ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದೀಗ ವಿಶ್ಚ ಆರೋಗ್ಯ ಸಂಸ್ಥೆ ಕೊರೊನಾ ವಿಚಾರದಲ್ಲಿ ಮತ್ತೊಂದು ಬಾಂಬ್ ಸಿಡಿಸಿದೆ.

ಕೊರೊನಾ ಸೋಂಕಿನಿಂದ ಇಡೀ ಜಗತ್ತೇ ಅಪಾಯಕಾರಿ ಅಂಚಿಗೆ ತಲುಪಿದೆ‌ ಎಂದು ವಿಶ್ಚ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧಾನೋಮ್ ಎಚ್ಚರಿಕೆ ನೀಡಿದ್ದಾರೆ. ಕೊರೊನಾ ಸೋಂಕಿನ ಹರಡುವಿಕೆ ವೇಗ ಹೆಚ್ಚಾಗುತ್ತಿದೆ. ಇದನ್ನ ನಿಯಂತ್ರಿಸಲು ಲಾಕ್‌ಡೌನ್ ಕ್ರಮಗಳು ಮತಷ್ಟು ಕಠಿಣಗೊಳಿಸಬೇಕು ಎಂದಿದ್ದಾರೆ.

ಇಡೀ ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 87,50,479 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ 4,61,813 ಮಂದಿಯನ್ನು ಮಹಾಮಾರಿ ಬಲಿ ಪಡೆದಿದೆ. ಇನ್ನು ಜೂನ್ 18ರಂದು ಒಂದೇ ದಿನ ಬರೋಬ್ಬರಿ 1.50 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ಬಾಧಿಸಿದೆ. ಕೊರೊನಾ ಸೋಂಕು ಆರಂಭದಿಂದ ಇದೇ ಮೊದಲ‌‌ ಬಾರಿಗೆ ಅತೀ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿದೆ ಎಂದಿದ್ದಾರೆ.

ದಕ್ಷಿಣ ಏಷ್ಯಾ ಮತ್ತು ಮಿಡಲ್ ಈಸ್ಟ್‌ನಲ್ಲಿ ಅತೀ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಅಂತಾ ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

Leave A Reply

Your email address will not be published.