ವಾಟ್ಸಾಪ್ ನಲ್ಲಿ ಕಾಣಿಸುತ್ತಿಲ್ಲ ಲಾಸ್ಟ್ ಸೀನ್, ಟೈಪಿಂಗ್, ಆನ್ ಲೈನ್ ಫೀಚರ್ಸ್ ! ಅಷ್ಟಕ್ಕೂ ಆಗಿದ್ದೇನು ?

0

ವಿಶ್ವದ ಪ್ರಸಿದ್ದ ಚಾಟಿಂಗ್ ಪ್ಲಾಟ್ ಫಾರ್ಮ್ ವಾಟ್ಸಾಪ್ ಬಳಕೆದಾರರರಿಗೆ ಟೆನ್ಶನ್ ಶುರುವಾಗಿದೆ. ನಿನ್ನೆಯಿಂದ ವಾಟ್ಸಾಪ್ ನಲ್ಲಿ ಲಾಸ್ಟ್ ಸೀನ್, ಟೈಪಿಂಗ್, ಆನ್ ಲೈನ್ ಸ್ಟೇಟಸ್ ತೋರಿಸುತ್ತಿಲ್ಲ. ವಾಟ್ಸಾಪ್ ಗೆ ಏನಾಗಿದೆ ಅಂತಾ ಬಳಕೆದಾರರು ತಲೆ ಕೆಡಿಸಿಕೊಂಡಿದ್ದಾರೆ.

ಸಾಮಾನ್ಯವಾಗಿ ವಾಟ್ಸಾಪ್ ನಲ್ಲಿ ಟೈಪ್ ಮಾಡುವಾಗ ಯಾರೊಂದಿಗೆ ಚಾಟ್ ಮಾಡ್ತೇವೋ ಆ ವ್ಯಕ್ತಿಯ ಕೊನೆಯದಾಗಿ ಯಾವಾಗ ವಾಟ್ಸಾಪ್ ನೋಡಿದ್ದಾರೆ. ವ್ಯಕ್ತಿ ಆನ್ ಲೈನ್ ನಲ್ಲಿ ಇದ್ದಾರೋ, ಇಲ್ಲವೋ ? ಅನ್ನುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿತ್ತು. ಇನ್ನು ಆನ್ ಲೈನ್ ನಲ್ಲಿ ಮೆಸೆಜ್ ಟೈಪ್ ಮಾಡುವಾಗ ಟೈಪಿಂಗ್ ಅಂತಾ ತೋರಿಸುತ್ತಿತ್ತು. ಆದರೆ ವಾಟ್ಸಾಪ್ ನಲ್ಲಿ ನಿನ್ನೆಯಿಂದ ಈ ಮೂರು ಫೀಚರ್ಸ್ ಕಾಣಿಸುತ್ತಿಲ್ಲ. ವಾಟ್ಸಾಪ್ ತನ್ನ ಪ್ರೈವೆಸಿ ಸೆಟ್ಟಿಂಗ್ ನಲ್ಲಿ ಬದಲಾವಣೆಯನ್ನು ಮಾಡಿದೆಯಾ ? ಇಲ್ಲಾ ಮೊಬೈಲ್ ಹಾಳಾಗಿದೆಯಾ ? ಇಂಟರ್ ನೆಟ್ ಸ್ಲೋ ಇದೆಯಾ ಅಂತೆಲ್ಲಾ ಗ್ರಾಹಕರು ಪರೀಕ್ಷಿಸುತ್ತಿದ್ದಾರೆ.

ವಾಟ್ಸಾಪ್ ಈಗಾಗಲೇ ಹಲವು ಬದಲಾವಣೆಗಳನ್ನು ಮಾಡಿಕೊಂಡಿದೆ. ಪ್ರೈವೆಸಿ ಸೆಟ್ಟಿಂಗ್ ನಲ್ಲಿಯೂ ಹಲವು ಬದಲಾವಣೆಗಳನ್ನು ಮಾಡಿಕೊಳ್ಳುವುದಾಗಿಯೂ ಹೇಳಿಕೊಂಡಿದೆ. ಅದರಂತೆಯೇ ಇನ್ಮುಂದೆ ಈ ಮೂರು ಫೀಚರ್ಸ್ ಗಳು ವಾಟ್ಸಾಪ್ ನಿಂದ ಮರೆಯಾಗಲಿದೆ ಅನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ವಾಟ್ಸಾಪ್ ಈ ಕುರಿತು ಗ್ರಾಹಕರಿಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡದೆ ಗ್ರಾಹಕರ ತಲೆಗೆ ಹುಳಬಿಟ್ಟಿದೆ.

ಆದರೆ ವಾಟ್ಸಾಪ್ ನಲ್ಲಿ ಮರೆಯಾಗಿರುವ ಮೂರು ಫೀಚರ್ಸ್ ಹಲವರಿಗೆ ನಷ್ಟವಾದ್ರೆ, ಕೆಲವರಿಗೆ ಲಾಭವಾಗಿ ಪರಿಣಮಿಸಿರುವುದಂತೂ ಸುಳ್ಳಲ್ಲ.

Leave A Reply

Your email address will not be published.