Congress five guarantee : ಮುಂದಿನ ಸಂಪುಟ ಸಭೆಯಲ್ಲಿ 5 ಗ್ಯಾರಂಟಿ ಜಾರಿ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕರ್ನಾಟಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ರಚನೆ ಬೆನ್ನಲ್ಲೇ ಕಾಂಗ್ರೆಸ್ ಚುನಾವಣೆ ವೇಳೆಯಲ್ಲಿ ನೀಡಿದ ಭರವಸೆಯನ್ನು (Congress five guarantee) ಈಡೇರಿಸಲು ಸಜ್ಜಾಗಿದೆ. ಮುಂದಿನ ಸಂಪುಟ ಸಭೆಯಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಹೊಸದಾಗಿ ಸಂಪುಟಕ್ಕೆ ಹೊಸ ಸಚಿವರ ಪ್ರಮಾಣವಚನದ ನಂತರ, ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇದೀಗ ಸಂಪುಟಕ್ಕೆ 24 ಸಚಿವರು ಸೇರ್ಪಡೆಯಾಗಿದ್ದು, ಪೂರ್ಣ ಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಈ ಕಡೆಯಿಂದ ಚುನಾವಣೆ ಪ್ರಚಾರ ವೇಳೆಯಲ್ಲಿ ಹೇಳಿದ ಐದು ಗ್ಯಾರಂಟಿಗಳ ಜಾರಿ ಬಗ್ಗೆಯೂ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಲಾಗಿದ್ದು, ಅವರು ಸಹ ಮುಂದಿನ ಸಂಪುಟ ಸಭೆಯಲ್ಲಿ ಎಲ್ಲಾ ದಾಖಲೆಗಳನ್ನು ಜಾರಿಗೊಳಿಸುವ ಬಗ್ಗೆ ನಿರ್ಧಾರವನ್ನು ಅದೇ ಸಭೆಯಲ್ಲೇ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಸಿಎಂ ಸಿದ್ದರಾಮಯ್ಯ ಅವರು ಒಂದು ವಾರದೊಳಗೆ ಕರೆಯಲಾಗುವ ಮುಂದಿನ ಸಂಪುಟ ಸಭೆಯ ನಂತರ ಎಲ್ಲವೂ ಜಾರಿಯಾಗಲಿದೆ ಎಂದು ಮಾಧ್ಯಮದವರಿಗೆ ತಿಳಿಸಿದರು. ಆದರೆ ಇಂದು ಕರ್ನಾಟಕದಲ್ಲಿ ಹೊಸದಾಗಿ ರಚನೆಯಾದ 24 ಮಂದಿ ಸಚಿವರು ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೇ ಮುಂದಿನ ಸಂಪುಟ ಸಭೆಯಲ್ಲಿ ಈ ಕೆಳಗೆ ತಿಳಿಸಲಾದ ಐದು ಗ್ಯಾರಂಟಿ ಜಾರಿಗೊಳಿಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ : Karnataka Cabinet 2023 : ಸಚಿವರ ಪ್ರಮಾಣ ವಚನದ ಬೆನ್ನಲ್ಲೇ ಖಾತೆ ಹಂಚಿಕೆ : ಯಾರಿಗೆ ಯಾವ ಖಾತೆ

ಐದು ಪ್ರಮುಖ ಗ್ಯಾರಂಟಿಗಳ ವಿವರ :

  • ಎಲ್ಲಾ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ (ಗೃಹ ಜ್ಯೋತಿ)
  • ಪ್ರತಿ ಕುಟುಂಬದ ಮಹಿಳೆಯ ಮುಖ್ಯಸ್ಥರಿಗೆ ರೂ. 2,000 ಮಾಸಿಕ ನೆರವು (ಗೃಹ ಲಕ್ಷ್ಮಿ)
  • ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿ ಉಚಿತ (ಅನ್ನ ಭಾಗ್ಯ)
  • ನಿರುದ್ಯೋಗಿ ಪದವೀಧರ ಯುವಕರಿಗೆ ಪ್ರತಿ ತಿಂಗಳು ರೂ. 3,000 ಮತ್ತು ನಿರುದ್ಯೋಗಿ ಡಿಪ್ಲೊಮಾ ಹೊಂದಿರುವವರಿಗೆ ರೂ. 1,500 (ಇಬ್ಬರೂ 18-25 ವರ್ಷ ವಯಸ್ಸಿನವರು) ಎರಡು ವರ್ಷಗಳವರೆಗೆ (ಯುವ ನಿಧಿ)
  • ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ (ಉಚಿತ ಪ್ರಯಾಣ).

Congress five guarantee : Implementation of 5 guarantee in the next cabinet meeting : CM Siddaramaiah

Comments are closed.