ಲೋಕಭವನಕ್ಕೆ ರಾಜ್ಯಪಾಲ ಗೆಹ್ಲೋಟ್​ ಆಗಮನ : ಇಂದೇ ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರ ಸಾಧ್ಯತೆ

ರಾಜ್ಯ ಕಂಡ ಅತ್ಯಂತ ಬಲಿಷ್ಠ ಮುಖ್ಯಮಂತ್ರಿಗಳ ಪೈಕಿ ಒಬ್ಬರಾದ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನ ತ್ಯಜಿಸುವ ಸಂದರ್ಭದಲ್ಲಿ ನಡೆದುಕೊಂಡ ರೀತಿ, ಅವರ ರಾಜಕೀಯ ಪ್ರಬುದ್ಧತೆ ಎಲ್ಲರಿಗೂ ಮಾದರಿ ಎನಿಸಿದೆ. ರಾಜಕೀಯ ಹೈಡ್ರಾಮಾಗಳ ಮೂಲಕ ವಿಪಕ್ಷಗಳ ಬಾಯಿಗೆ ಆಹಾರವಾಗಬಹುದು ಎಂದುಕೊಂಡಿದ್ದವರ ನಿರೀಕ್ಷೆಗಳನ್ನು ಸುಳ್ಳು ಮಾಡಿ, ಬಹಿರಂಗವಾಗಿ ಎಲ್ಲಿಯೂ ತಮ್ಮ ದುಃಖ ತೋರ್ಪಡಿಸದೇ ಸಿಎಂ ಸಿದ್ದರಾಮಯ್ಯ ಪದತ್ಯಾಗ ಮಾಡಿದ್ದಾರೆ.

ರಾಜ್ಯ ಕಂಡ ಅತ್ಯಂತ ಬಲಿಷ್ಠ ಮುಖ್ಯಮಂತ್ರಿಗಳ ಪೈಕಿ ಒಬ್ಬರಾದ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನ ತ್ಯಜಿಸುವ ಸಂದರ್ಭದಲ್ಲಿ ನಡೆದುಕೊಂಡ ರೀತಿ, ಅವರ ರಾಜಕೀಯ ಪ್ರಬುದ್ಧತೆ ಎಲ್ಲರಿಗೂ ಮಾದರಿ ಎನಿಸಿದೆ. ರಾಜಕೀಯ ಹೈಡ್ರಾಮಾಗಳ ಮೂಲಕ ವಿಪಕ್ಷಗಳ ಬಾಯಿಗೆ ಆಹಾರವಾಗಬಹುದು ಎಂದುಕೊಂಡಿದ್ದವರ ನಿರೀಕ್ಷೆಗಳನ್ನು ಸುಳ್ಳು ಮಾಡಿ, ಬಹಿರಂಗವಾಗಿ ಎಲ್ಲಿಯೂ ತಮ್ಮ ದುಃಖ ತೋರ್ಪಡಿಸದೇ ಸಿಎಂ ಸಿದ್ದರಾಮಯ್ಯ ಪದತ್ಯಾಗ ಮಾಡಿದ್ದಾರೆ. ಲೋಕಭವನದಲ್ಲಿ ರಾಜ್ಯಪಾಲರ ಅನುಪಸ್ಥಿತಿಯ ನಡುವೆಯೂ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸುವ ಮೂಲಕ ಹೈಕಮಾಂಡ್​ ಮಾತಿಗೆ ಬದ್ಧರಾಗಿ ನಿಂತಿದ್ದಾರೆ.

ಇನ್ನು ಮಧ್ಯಪ್ರದೇಶದ ಇಂದೋರ್​ಗೆ ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​ ಅವರು ಪ್ರಯಾಣ ಬೆಳೆಸಿದ ಹಿನ್ನೆಲೆಯಲ್ಲಿ ನಿನ್ನೆಯೇ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ರೂ ಸಹ, ರಾಜೀನಾಮೆ ಪತ್ರ ಅಂಗೀಕಾರವಾಗಿರಲಿಲ್ಲ. ಆದರೆ ಇದೀಗ ಇಂದೋರ್​ನಿಂದ ಗೆಹ್ಲೋಟ್​​ ಬೆಂಗಳೂರಿಗೆ ಮರಳಿದ್ದು ಇಂದೇ ಸಿಎಂ ಸಿದ್ದರಾಮಯ್ಯರ ರಾಜೀನಾಮೆ ಪತ್ರಕ್ಕೆ ಅಧಿಕೃತ ಅಂಕಿತ ಬೀಳುವ ಸಾಧ್ಯತೆಯಿದೆ.

Also Read: ಕೌಜಲಗಿ ಮನೆತನದ ಮೂರನೇ ತಲೆಮಾರು, ಶಾಸಕ ಮಹಾಂತೇಶ್ ಕೌಜಲಗಿಗೆ ಒಲಿಯುತ್ತಾ ಸಚಿವ ಸ್ಥಾನ ?

ಕರ್ನಾಟಕ ಅದೆಷ್ಟೋ ರಾಜಕೀಯ ಅಧಿಕಾರ ಹಸ್ತಾಂತರಗಳನ್ನು ಕಂಡಿದೆ. ಆದರೆ ಈ ಮಟ್ಟದ ರಾಜಕೀಯ ಪ್ರಬುದ್ಧತೆ ಕಂಡುಬಂದಿದ್ದು ಸಿಎಂ ಸಿದ್ದರಾಮಯ್ಯರಲ್ಲಿ ಮಾತ್ರ ಎಂದು ಕರುನಾಡು ಮಾತನಾಡಿಕೊಳ್ಳುತ್ತಿದೆ. ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಅಲ್ಲಲ್ಲಿ ಭಾವುಕರಾದಂತೆ ಕಂಡುಬಂದರೂ ಸಹ ಎಲ್ಲಿಯೂ ಅದನ್ನು ತೋರ್ಪಡಿಸದೇ ವಿದಾಯದ ಭಾಷಣವನ್ನು ಮಾಡಿದ ಸಿದ್ದರಾಮಯ್ಯರ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇಂದು ಸಿದ್ದರಾಮಯ್ಯರ ರಾಜೀನಾಮೆ ಪತ್ರ ಅಂಗೀಕಾರಗೊಂಡಲ್ಲಿ, ಕರ್ನಾಟಕ ಕಂಡ ಸುದೀರ್ಘ ಅವಧಿಯ ಸಿಎಂ ಅಧಿಕಾರವು ಅಧಿಕೃತ ಯುಗಾಂತ್ಯ ಕಾಣಲಿದೆ.

Governors surprise visit to Lok Bhavan Will Siddaramaiahs resignation be accepted today

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories