ಸಚಿವ ಸ್ಥಾನ ವಂಚಿತ ಬಿ.ಕೆ ಹರಿಪ್ರಸಾದ್ಗೆ ಡಬಲ್ ಧಮಾಕಾ : ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನೇಮಕ
ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಎಂದೇ ಗುರುತಿಸಿಕೊಂಡಿರುವ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಸಿದ್ದರಾಮಯ್ಯ ಸಂಪುಟದಿಂದಲೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಡಿ.ಕೆ ಶಿವಕುಮಾರ್ ನೂತನ ಸಂಪುಟದಲ್ಲಿ ಬಿ.ಕೆ ಹರಿಪ್ರಸಾದ್ಗೆ ಸಚಿವ ಸ್ಥಾನ ಫಿಕ್ಸ್ ಎಂದೇ ಹೇಳಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸಂಪುಟದಿಂದ ಬಿ.ಕೆ ಹರಿಪ್ರಸಾದ್ ಹೆಸರು ಕೈಬಿಟ್ಟಾಗಿತ್ತು. ಇದರಿಂದ ನಿರಾಶೆಗೊಂಡಿದ್ದ ಬಿ.ಕೆಹರಿಪ್ರಸಾದ್ಗೆ ಕಾಂಗ್ರೆಸ್ ಹೈಕಮಾಂಡ್ ಡಬಲ್ ಧಮಾಕಾ ನೀಡಿದೆ.

ಬಿ.ಕೆ ಹರಿಪ್ರಸಾದ್ರನ್ನು ಕೆಪಿಸಿಸಿ ನೂತನ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿದೆ. ಡಿ.ಕೆ ಶಿವಕುಮಾರ್ ರಾಜ್ಯದ ನೂತನ ಮುಖ್ಯಮಂತ್ರಿಯಾದ ಬೆನ್ನಲ್ಲೇ ತೆರವಾಗಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಇದೀಗ ಬಿ.ಕೆ ಹರಿಪ್ರಸಾದ್ ಆಯ್ಕೆಯಾಗಿದ್ದಾರೆ. ಈ ಸಂಬಂಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
Also Read: ಬಿಕೆ ಹರಿಪ್ರಸಾದ್ಗೆ ಖುಲಾಯಿಸಿದ ಲಕ್: ಕರ್ನಾಟಕ ಕಾಂಗ್ರೆಸ್ಗೆ ಹೊಸ ಸಾರಥಿ ?
ಇದರ ಜೊತೆಯಲ್ಲಿ ಮತ್ತೊಂದು ಗುಡ್ನ್ಯೂಸ್ ಕೂಡ ಬಿ.ಕೆ ಹರಿಪ್ರಸಾದ್ಗೆ ಒಲಿದುಬಂದಿದೆ. ವಿಧಾನಪರಿಷತ್ ಪ್ರವೇಶಕ್ಕೆ ಮತ್ತೊಮ್ಮೆ ದಾರಿ ಮಾಡಿಕೊಟ್ಟಿರುವ ಕಾಂಗ್ರೆಸ್ ಹೈಕಮಾಂಡ್ , ಅವರಿಗೆ ಪಕ್ಷದಿಂದ ಎಂಎಲ್ಸಿ ಟಿಕೆಟ್ ಕೂಡ ಘೋಷಣೆ ಮಾಡಿದೆ.
ಇನ್ನು ಡಿ.ಕೆ ಶಿವಕುಮಾರ್ ರಾಜೀನಾಮೆ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆಯಲು ಸತೀಶ್ ಜಾರಕಿಹೊಳಿ ಶತಾಯಗತಾಯ ಪ್ರಯತ್ನ ಮಾಡಿದ್ದರು. ಸಚಿವ ಸ್ಥಾನದ ಜೊತೆಯಲ್ಲಿ ಕೆಪಿಸಿಸಿ ಅಧ್ಯಕ್ಷಗಾದಿ ಮೇಲೂ ಕಣ್ಣಿಟ್ಟಿದ್ದ ಸತೀಶ್ ಜಾರಕಿಹೊಳಿಗೆ ,ಕಾಂಗ್ರೆಸ್ ಹೈಕಮಾಂಡ್ ಎರಡರಲ್ಲಿ ಒಂದನ್ನು ಮಾತ್ರ ಆಯ್ಕೆಮಾಡಿಕೊಳ್ಳುವಂತೆ ಕಡಾಖಂಡಿತವಾಗಿ ಹೇಳಿತ್ತು. ಹೀಗಾಗಿ ಸತೀಶ್ ಜಾರಕಿಹೊಳಿ ಬೇರೆ ವಿಧಿ ಇಲ್ಲದೇ, ಸಚಿವ ಸ್ಥಾನವನ್ನು ಮಾತ್ರ ಆಯ್ಕೆಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಕಾಂಗ್ರೆಸ್ ಹೈಕಮಾಂಡ್ ಬಿ.ಕೆ ಹರಿಪ್ರಸಾದ್ರ ಬೇಸರ ತಣಿಸಲು ಎರಡೆರಡು ಗಿಫ್ಟ್ಗಳನ್ನು ನೀಡಿದೆ.
Double blow to BK Hariprasad who was deprived of ministerial post appointed as new KPCC president