ತೀವ್ರ ನಿಗಾ ಘಟಕದಲ್ಲಿ ರಾಜಣ್ಣ : ಸೊಲ್ಲೆತ್ತಿದರೆ ಪಕ್ಷದಿಂದ ಗೇಟ್ ಪಾಸ್ !

Rajanna Karnataka minister : ಬೆಂಗಳೂರು :ಸಚಿವ ಸಂಪುಟದಿಂದ ವಜಾಗೊಂಡಿರುವ ಕೆ.ಎನ್.ರಾಜಣ್ಣ ಈಗ ಹೈಕಮಾಂಡ್ ನ ತೀವ್ರ ನಿಗಾ ಘಟಕದ ಕಣ್ಗಾವಲಿನಲ್ಲಿದ್ದಾರೆ. ಪಕ್ಷದ ವಿದ್ಯಮಾನಗಳ ಬಗ್ಗೆ ವ್ಯತಿರಿಕ್ತವಾಗಿ ಸೊಲ್ಲೆತ್ತಿದರೆ ಕಾಂಗ್ರೆಸ್ ನಿಂದಲೇ ಗೇಟ್ ಪಾಸ್ ನೀಡುವುದಕ್ಕೆ ನಿರ್ಧರಿಸಲಾಗಿದೆ.
ಈ ಸಂದೇಶವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೋಮವಾರ ಬೆಳಗ್ಗೆಯೇ ರವಾನಿಸಿದ್ದು, ಕೆಲ ದಿನಗಳ ಕಾಲ ಯಾವುದೇ ಮಾತನಾಡದಂತೆ ಅವರು ರಾಜಣ್ಣಗೆ ಸಲಹೆ ನೀಡಿದ್ದಾರೆ.
ಈ ಘಟನೆ ಬಳಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಭೇಟಿಯಾಗಿರುವ ಕೆ.ಎನ್.ರಾಜಣ್ಣ ತಮ್ಮ ಮನದಾಳದ ಅಳಲನ್ನು ತೋಡಿಕೊಂಡಿದ್ದಾರೆ. ಎಂದಿನಂತೆ ಮಾತಿನ ಓಘದಲ್ಲಿ ಮತಗಳ್ಳತನದ ವಿರುದ್ಧ ಮಾತಾಡಿಬಿಟ್ಟೆ.
ಅದು ಈ ಹಂತ ತಲುಪುತ್ತದೆ ಎಂಬ ನಿರೀಕ್ಚೆ ಇರಲಿಲ್ಲ. ನನ್ನನ್ನು ಕಾಪಾಡಿಕೊಳ್ಳುವುದಕ್ಕೆ ಸಿದ್ದರಾಮಯ್ಯ ಅವರಿಗೂ ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಟಿಕೆಟ್ ಖರೀದಿಸಿ ಮೆಟ್ರೋದಲ್ಲಿ ಮೋದಿ ಪ್ರಯಾಣ
ಇದೊಂದು ಷಡ್ಯಂತ್ರ ಎಂದು ರಾಜಣ್ಣ ರಾಜೀನಾಮೆ ಬಳಿಕ ಹೇಳಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಬಿಜೆಪಿ ಶಾಸಕರು ಸದನದಲ್ಲಿ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ.
ರಾಹುಲ್ ಗಾಂಧಿ ಕೆಣಕಿ ಸಚಿವ ಸಂಪುಟದಿಂದ ಔಟ್
ರಾಹುಲ್ ಗಾಂಧಿ ಮಾಡಿದ್ದ ಮತಗಳ್ಳತನ ಆರೋಪದ ಬಗ್ಗೆಸಹಕಾರ ಸಚಿವ ಕೆ.ಎನ್.ರಾಜಣ್ಣ ಆಕ್ಷೇಪ ವ್ಯಕ್ತಪಡಿಸಿದ್ದ ಅವರನ್ನು ಸಚಿವ ಸಂಪುಟದಿಂದಲೇ ವಜಾಗೊಳಿಸಲಾಗಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಿಂದ ಎರಡನೇ ವಿಕೆಟ್ ಪತನ ಆಗಿದೆ.
ಸಚಿವ ರಾಜಣ್ಣ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಸಿಎಂ ಸಿದ್ದರಾಮಯ್ಯ ಅವರ ಕಚೇರಿಯಿಂದ ಕಳುಹಿಸಿದ್ದ ಪತ್ರವನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ.
ಅಷ್ಟೇ ಅಲ್ಲಾ ಸೆಪ್ಟೆಂಬರ್ ಕ್ರಾಂತಿಯ ಕುರಿತು ರಾಜಣ್ಣ ನೀಡಿರುವ ಹೇಳಿಕೆ, ಕಾಂಗ್ರೆಸ್ ಪಕ್ಷದಲ್ಲಿ ಬಹುದೊಡ್ಡ ಚರ್ಚೆ ಹುಟ್ಟು ಹಾಕಿತ್ತು. ಆದರೆ ಅವರು ಅಗಸ್ಟ್ ತಿಂಗಳಿನಲ್ಲಿಯೇ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಖುದ್ದು ರಾಹುಲ್ ಗಾಂಧಿಯೇ ರಾಜಣ್ಣ ಅವರನ್ನು ಕಿತ್ತು ಹಾಕುವಂತೆ ಸೂಚಿಸಿದ್ದರು.
ಇದನ್ನೂ ಓದಿ : ಗೃಹಲಕ್ಷ್ಮೀ ಫಲಾನುಭವಿಗಳಿಗೆ ಗುಡ್‌ನ್ಯೂಸ್ : ಖಾತೆಗೆ ಜಮೆ ಆಗಲಿದೆ 4000 ರೂ.
ಆದರೆ ಸಿದ್ದರಾಮಯ್ಯ ಈ ಬಗ್ಗೆ ಒಲ್ಲದ ಮನಸಿನಿಂದ ಒಪ್ಪಿಗೆ ನೀಡಿದ್ದಾರೆ. ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡುತ್ತಿದ್ದ ರಾಜಣ್ಣ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಮೂಲಕ ಹೈಕಮಾಂಡ್ ವಿರುದ್ಧ ಹೇಳಿಕೆ ನೀಡುತ್ತಿದ್ದವರಿಗೆಲ್ಲ ವರಿಷ್ಠರು ಎಚ್ಚರಿಕೆ ನೀಡಿದ್ದಾರೆ.



