allegation by yatnal : 2500 ಕೋಟಿ ರೂ.ಗಳಿಗೆ ಸಿಎಂ ಆಫರ್​ ನೀಡಿದ್ರು : ಹೊಸ ಬಾಂಬ್​ ಸಿಡಿಸಿದ ಯತ್ನಾಳ್​

ರಾಮದುರ್ಗ :allegation by yatnal: ಸ್ವಪಕ್ಷದವರ ವಿರುದ್ಧ ಆಗಾಗ ಅಸಮಾಧಾನಗಳನ್ನು ಹೊರಹಾಕುವ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಇದೀಗ ಸಿಎಂ ಸ್ಥಾನದ ಕುರಿತಂತೆ ಹೊಸದೊಂದು ಬಾಂಬ್​ ಸಿಡಿಸಿದ್ದಾರೆ. ರಾಮದುರ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​, ದೆಹಲಿಯಿಂದ ಬಂದಿದ್ದ ಕೆಲವರು 2500 ಕೋಟಿ ರೂಪಾಯಿಗಳನ್ನು ನೀಡಿದರೆ ನಿಮ್ಮನ್ನು ಸಿಎಂ ಮಾಡುತ್ತೀವಿ ಎಂದು ಹೇಳಿದರು. ರಾಜಕಾರಣದಲ್ಲಿ ಈ ರೀತಿಯ ಮೋಸಗಳು ನಡೆಯುತ್ತಿರುತ್ತವೆ . ಆದರೆ ನಾವು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.


ರಾಜಕಾರಣದಲ್ಲಿ ಇಂತಹ ಆಫರ್​ಗಳನ್ನೆಲ್ಲ ನಂಬಿ ಹಾಳಾಗಬೇಡಿ. ದೆಹಲಿಗೆ ಕರೆದುಕೊಂಡು ಹೋಗುತ್ತೇವೆ. ಜೆ.ಪಿ ನಡ್ಡಾರನ್ನು ಭೇಟಿ ಮಾಡಿಸ್ತೇವೆ, ಸೋನಿಯಾ ಗಾಂಧಿ ಜೊತೆ ಮಾತನಾಡಿಸುತ್ತೇವೆ, ನಿಮ್ಮನ್ನೇ ಸಿಎಂ ಮಾಡುತ್ತೇವೆ ಅಂತೆಲ್ಲ ಹೇಳಿಕೊಂಡು ಬರುತ್ತಾರೆ. ನನ್ನನ್ನು ಕೂಡ ದೆಹಲಿಯಿಂದ ಬಂದ ಕೆಲವರು ಭೇಟಿಯಾಗಿದ್ದರು. 2500 ಕೋಟಿ ರೂಪಾಯಿ ಕೊಟ್ಟರೆ ನಿಮ್ಮನ್ನು ಸಿಎಂ ಮಾಡುತ್ತೇವೆ ಎಂದು ಹೇಳಿದರು. 2500 ಕೋಟಿ ರೂಪಾಯಿ ಅಂದರೆ ಏನು ಎಂದು ತಿಳಿದಿದ್ದಾರೆ..? ಅಷ್ಟೆಲ್ಲ ಹಣವನ್ನು ಎಲ್ಲಿ ಇಡೋದು..? ಕೋಣೆಯಲ್ಲಿ ಇಡಬೇಕೋ..? ಇಲ್ಲ ಗೋದಾಮಿನಲ್ಲೋ..? ಇಂತಹ ಮಾತುಗಳನ್ನು ಹೇಳಿಕೊಂಡು ಅನೇಕರು ಬರುತ್ತಾರೆ. ಆದರೆ ಇಂತವರಿಗೆ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದಲ್ಲಿ ರಾಜಕೀಯದಲ್ಲಿ ಹಾಳಾಗುತ್ತೀರಿ ಎಂದು ಹೇಳಿದರು.


ಯಡಿಯೂರಪ್ಪ ಮೊದಲು ಪಂಚಮಸಾಲಿ ಸಮುದಾಯದ ಓರ್ವನಿಗೆ ಮಂತ್ರಿ ಗಿರಿ ನೀಡಲು ಮುಂದಾಗಿದ್ದರು. ಆದರೆ ನಮ್ಮ ನಮ್ಮ ನಡುವಿನ ಹೊಡೆದಾಟದಿಂದಾಗಿ ಮೂವರು ಪಂಚಮಸಾಲಿ ಸಮುದಾಯದವರು ಸಚಿವರಾಗಿದ್ದಾರೆ. ಬೆಲ್ಲದ್​ ಮಂತ್ರಿ ಆಗಬಾರದು ಅಂತಾ ಮುನೇನಕೊಪ್ಪನಿಗೆ ಸ್ಥಾನ ನೀಡಿದ್ರು. ಬಸನಗೌಡನಿಗೆ ಮಂತ್ರಿ ಮಾಡಬಾರದೆಂದು ಸಿಸಿ ಪಾಟೀಲ್​ರನ್ನು ಸಚಿವ ಸ್ಥಾನಕ್ಕೆ ಏರಿಸಿದ್ರು. ಮತ್ತೊಂದು ಕ್ಯಾಶ್​ ಕ್ಯಾಂಡಿಡೇಟ್​​ ಆಗಿ ಮುರುಗೇಶ್​ ನಿರಾಣಿ ಆಯ್ಕೆಯಾದರು ಎಂದು ಹೇಳುವ ಮೂಲಕ ನಿರಾಣಿ ವಿರುದ್ಧ ಲಂಚ ನೀಡಿದ ಆರೋಪವನ್ನು ಹೊರಿಸಿದ್ರು.


ನಾನು ಯಡಿಯೂರಪ್ಪ ಸಿಎಂ ಆಗಿರುವವರೆಗೆ ಸಿಎಂ ಕಚೇರಿಗೆ ಭೇಟಿ ನೀಡೋದಿಲ್ಲ ಅಂತಾ ಹೇಳಿದ್ದೆ. ಅದರಂತೆ ಬೊಮ್ಮಾಯಿ ಸಿಎಂ ಆದ ಬಳಿಕ ಸಿಎಂ ಕಚೇರಿಗೆ ಭೇಟಿ ನೀಡಿದೆ. ಬೊಮ್ಮಾಯಿ ನಾನು ನಿಮ್ಮಿಂದ ಸಿಎಂ ಆಗಿದ್ದೇನೆ ಎಂದು ಹೇಳ್ತಾರೆ. ಆದರೆ ನಾನು ನಾಟಕ ಮಾಡೋ ಮಗನಲ್ಲ. ಪಂಚಮಸಾಲಿ ಮೀಸಲಾತಿ ಕೊಡಿ, ನನಗೆ ಮಂತ್ರಿಗಿರಿಯೆಲ್ಲ ಬೇಕಾಗಿಲ್ಲ ಎಂದಿದ್ದೇನೆ ಎಂದು ಹೇಳಿದ್ರು .

ಇದನ್ನು ಓದಿ : Akshaya Tritiya : ಧರ್ಮಸಂಘರ್ಷಕ್ಕೆ ಕ್ಯಾರೇ ಎನ್ನದ ಜನರು : ರಾಜ್ಯದಲ್ಲಿ 1680 ಕೋಟಿ ರೂ. ಮೌಲ್ಯದ ಚಿನ್ನ ಮಾರಾಟ

ಇದನ್ನೂ ಓದಿ : MI vs GT IPL 2022 : ಮುಂಬೈ ಇಂಡಿಯನ್ಸ್‌ ಪರ ಕಣಕ್ಕೆ ಇಳಿಯಲಿದ್ದಾರೆ ಅರ್ಜುನ್ ತೆಂಡೂಲ್ಕರ್

keep 2500 crore rupees we will make you cm serious allegation by yatnal

Comments are closed.