MLC Ayanur Manjunath: MLC ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಆಯನೂರು ಮಂಜುನಾಥ್

ಶಿವಮೊಗ್ಗ : (MLC Ayanur Manjunath) ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಪಕ್ಷಗಳು ಟಿಕೆಟ್‌ ಹಂಚಿಕೆಯ ಗೊಂದಲದಲ್ಲಿದ್ದಾರೆ. ಈ ಹೊತ್ತಲ್ಲೇ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದ್ದು, ಬಿಜೆಪಿಯ ಎಂಎಲ್ ಸಿ ಆಯನೂರು ಮಂಜುನಾಥ್ ಅವರು ತಮ್ಮ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಈಗಾಗಲೇ ಟಿಕೆಟ್‌ ಹಂಚಿಕೆಗೆ ಹೆಣಗಾಡುತ್ತಿರುವ ಬಿಜೆಪಿ ಗೆ ಚುನಾವಣೆ ಹೊತ್ತಲ್ಲಿ ದೊಡ್ಡ ತಲೆನೋವಾಗಿದೆ.

ಇಂದು ರಾಜ್ಯ ಬಿಜೆಪಿ ಪಕ್ಷದ ಸುದ್ದಿಗೋಷ್ಠಿ ನಡೆದಿದ್ದು, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್‌ ಅವರು, ಸದ್ಯದಲ್ಲೇ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಶಿವಮೊಗ್ಗದಲ್ಲಿ ಬಡವರ ಪ್ರತಿನಿಧಿಯಾಗಿ ಸ್ಪರ್ಧೆ ಮಾಡುತ್ತೇನೆ. ಕೆ.ಎಸ್. ಈಶ್ವರಪ್ಪ ಪ್ರಚೋದನೆ ಮೂಲಕ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದ್ದಾರೆ. ಪಕ್ಷದ ನಾಯಕರ ಎದುರೇ ಮಂಜುನಾಥ್‌ ಈ ತೀರ್ಮಾನವನ್ನು ಕೈಗೊಂಡಿದ್ದು, ಪಕ್ಷಕ್ಕೆ ಇನ್ನೊಂದು ಹೊಡೆತ ಬಿದ್ದಿದೆ.

” ಶಿವಮೊಗ್ಗ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಇಚ್ಛೆ ಇದೆ. ಆಸೆಗೆ ಪೂರಕವಾಗಿ ಬಿಜೆಪಿ ಟಿಕೆಟ್ ನೀಡುವ ಲಕ್ಷಣ ಕಂಡುಬಂದಿಲ್ಲ. ಹೀಗಾಗಿ ಬಡವರ ಪ್ರತಿನಿಧಿಯಾಗಿ ಶಿವಮೊಗ್ಗದಲ್ಲಿ ಸ್ಪರ್ಧಿಸುತ್ತೇನೆ. ಈಶ್ವರಪ್ಪ, ಮಕ್ಕಳ ಹೆಸರು ಓಡಾಡುತ್ತಿದೆ ಎಂದಿದ್ದಾರೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಡಿದ ಮಾತು ನನಗೆ ಇಷ್ಟ ಆಗಲಿಲ್ಲ. ನನ್ನ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಚಿವರ ಸವಾಲನ್ನು ಸ್ವೀಕರಿಸಿದ್ದೇನೆ. ಈಶ್ವರಪ್ಪ ಸಮರ್ಥರಿದ್ದರೆ ನನ್ನ ಎದುರಿಸಲಿ. ಕೆ.ಎಸ್. ಈಶ್ವರಪ್ಪ ಅಭಿವೃದ್ಧಿ ಮಾಡಿಲ್ಲ. ಪ್ರಚೋದನೆಯೇ ಬಂಡವಾಳ ಮಾಡಿಕೊಂಡಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : Criminal defamation case : ಸೂರತ್ ಕೋರ್ಟ್ ಗೆ ರಾಹುಲ್ ಗಾಂಧಿ ಆಗಮನ : ಕಾಂಗ್ರೆಸ್‌ ವಿರುದ್ದ ಬಿಜೆಪಿ ವಾಗ್ದಾಳಿ

ಇದನ್ನೂ ಓದಿ : ಶಿಗ್ಗಾಂವಿ, ಚನ್ನಗಿರಿ, ಚಿಕ್ಕಬಳ್ಳಾಪುರ : ಸಿಎಂ ಬಸವರಾಜ್ ಬೊಮ್ಮಾಯಿಗೆ ಬಿಜೆಪಿಯಲ್ಲಿ ಭರ್ಜರಿ ಆಫರ್

ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಕೆಲವು ಶಾಸಕರು ಬಿಜೆಪಿ ತೊರೆದಿದ್ದರು. ದಿನಾಂಕ ಘೋಷಣೆಯಾದ ಬಳಿಕವೂ ಹಲವು ನಾಯಕರು ಬಿಜೆಪಿ ತೊರೆಯುವ ನಿರ್ಧಾರಗಳನ್ನು ಮಾಡಿದ್ದಾರೆ. ಬಿಜೆಪಿ ಪಕ್ಷಗಳ ನಡುವೆಯೇ ಒಮ್ಮತವಿಲ್ಲದ ಕಾರಣ ತಾನು ಪಕ್ಷ ಬಿಡಲಿದ್ದೇನೆ ಎಂದು ಪರೋಕ್ಷವಾಗಿ ಆಯನೂರು ಮಂಜುನಾಥ್‌ ಕೆ.ಎಸ್.‌ ಈಶ್ವರಪ್ಪ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

MLC Ayanur Manjunath: BJP MLC Ayanur Manjunath announced his resignation as MLC

Comments are closed.