Pramod Muthalik : ಹಿಂದುತ್ವಕ್ಕಾಗಿ ಹೊಸ ಪಕ್ಷ, ಯೋಗಿ ಮಾದರಿ ಆಡಳಿತ : ಬಿಜೆಪಿಗೆ ಶಾಕ್‌ ಕೊಟ್ಟ ಪ್ರಮೋದ್‌ ಮುತಾಲಿಕ್‌

ಬೆಂಗಳೂರು : (Political party for Hindutva) ರಾಜ್ಯದಲ್ಲಿ ಹಿಂದುತ್ವ ಎಂಬ ಶಬ್ದ ಸದ್ಯ ಸಂಚಲನವನ್ನೇ ಮೂಡಿಸುತ್ತಿದೆ. ಹೀಗೆ ಹಿಂದುತ್ವ ಎಂಬ ಶಬ್ದವೇ ರಾಜಕೀಯ ಹಾಗೂ ಸಾಮಾಜಿಕ ಸಂಚಲನ ಮೂಡಿಸುತ್ತಿರುವ ಹೊತ್ತಿನಲ್ಲೇ ಕಟ್ಟರ್ ಹಿಂದುತ್ವದ ಮೂಲಕವೇ ಗುರುತಿಸಿಕೊಂಡ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಮತ್ತೊಂದು ಸ್ಫೋಟಕ ಸಂಗತಿ ಬಿಚ್ಚಿಟ್ಟಿದ್ದಾರೆ. ಆ ಮೂಲಕ ಹಿಂದುತ್ವದ ಅಜೆಂಡಾವನ್ನೇ ಮೂಲವಾಗಿಸಿಕೊಂಡ ಬಿಜೆಪಿಗೆ ಪ್ರಮೋದ್ ಮುತಾಲಿಕ್ ಸಖತ್ ಶಾಕ್ ನೀಡಲು ಸಿದ್ಧವಾಗಿದ್ದಾರೆ.

ಹೌದು ರಾಜ್ಯದಲ್ಲಿ ಲವ್ ಜಿಹಾದ್, ಗೋಮಾಂಸ ಭಕ್ಷಣೆ ಸೇರಿದಂತೆ ಹಿಂದುತ್ವಕ್ಕಾಗಿ ಬೀದಿಗಿಳಿದು ಹೋರಾಟ ಮಾಡುವ ಪ್ರಮೋದ್‌ಮುತಾಲಿಕ್ ಇಷ್ಟು ವರ್ಷಗಳ ಕಾಲ ಬೆಂಬಲಿಸಿಕೊಂಡು ಬಂದಿದ್ದ ಬಿಜೆಪಿಯ ವಿರುದ್ಧ ಮುನಿಸಿಕೊಂಡಿದ್ದಾರೆ.‌ ಮಾತ್ರವಲ್ಲ ಬಿಜೆಪಿಗೆ ಸೆಡ್ಡು ಹೊಡೆಯಲು ಸ್ವತಂತ್ರ ರಾಜಕೀಯ ಪಕ್ಷ ಸ್ಥಾಪಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಈಗಾಗಲೇ ಪ್ರಮೋದ್ ಮುತಾಲಿಕ್ ನಾಡಿನ ಹಲವು ಸಂತರ ಜೊತೆ ಮಾತುಕತೆ ನಡೆಸಿದ್ದಾರಂತೆ. ಈ ಪೈಕಿ ಬಹುತೇಕ ಮಠಾಧೀಶರು ಇನ್ನು ಬಿಜೆಪಿಯಿಂದ ಹಿಂದುತ್ವಕ್ಕೆ ಬೆಲೆ ಹಾಗೂ ಹಿಂದೂ ಕಾರ್ಯಕರ್ತರಿಗೆ ನ್ಯಾಯ ಸಿಗೋದು ಅನುಮಾನ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರಂತೆ. ಹೀಗಾಗಿ ಕಾರ್ಯಕರ್ತರೊಂದಿಗೆ ಚರ್ಚಿಸಿ ಅಗಸ್ಟ್ ತಿಂಗಳ ಅಂತ್ಯದ ವೇಳೆಗೆ ಪ್ರಮೋದ್ ಮುತಾಲಿಕ್ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದು ಬಹುತೇಕ ಖಚಿತ ಎನ್ನಲಾಗ್ತಿದೆ.

ಕೇವಲ ಪಕ್ಷ ಸ್ಥಾಪನೆ ಮಾತ್ರವಲ್ಲ ಮುಂಬರುವ ಚುನಾವಣೆಯಲ್ಲಿ ಹಿಂದುತ್ವದ ಅಜೆಂಡಾವನ್ನು ಇಟ್ಟುಕೊಂಡು ಮತ ಗಳಿಸಿ ಹಿಂದೂಗಳನ್ನು ಮರೆತು ಬಿಡುವ ಬಿಜೆಪಿಯ ವಿರುದ್ಧ ಎಲ್ಲ ಕ್ಷೇತ್ರಗಳಲ್ಲೂ ಚುನಾವಣೆಗೂ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರಂತೆ. ಕನ್ನಡದ ಖ್ಯಾತ ಸುದ್ದಿವಾಹಿನಿಗೆ ಸಂದರ್ಶನ ನೀಡಿರುವ ಮುತಾಲಿಕ್‌ ಹಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ತಾವು ಅಧಿಕಾರಕ್ಕೆ ಬಂದ್ರೇ ಉತ್ತರ ಪ್ರದೇಶದ ಸಿಎಂ ಯೋಗಿ ಮಾದರಿಯಲ್ಲಿ ಆಡಳಿತ ನೀಡೋದಾಗಿ ಕೂಡ ಪ್ರಮೋದ್‌ ಮುತಾಲಿಕ ಭರವಸೆ ನೀಡಿದ್ದಾರೆ. ಲವ್ ಜಿಹಾದ್ ಸೇರಿದಂತೆ ಎಲ್ಲ ಅಕ್ರಮಗಳಿಗೂ ಬ್ರೇಕ್ ಹಾಕ್ತೇವೆ. ಬುಲ್ಡೋಜರ್ ಮಾದರಿಯನ್ನು ಜಾರಿಗೆ ತರ್ತೇವೆ ಎಂದು ಮುತಾಲಿಕ್ ಭರವಸೆ ನೀಡಿದ್ದಾರೆ.

ಪ್ರಮೋದ್ ಮುತಾಲಿಕ್ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ‌ ಮಾಡಿದ್ದು, ತೀವ್ರ ವಾಗ್ದಾಳಿ ಕೂಡ ನಡೆಸಿದ್ದಾರೆ. ಬೆಳಗಾವಿಯಲ್ಲಿ ಸಚಿವ ಸುರೇಶ್ ಅಂಗಡಿ‌ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ‌ ಚುನಾವಣೆಗೆ ಬಿಜೆಪಿಯಿಂದ ಪ್ರಮೋದ್ ಮುತಾಲಿಕ್ ಟಿಕೇಟ್ ಆಕಾಂಕ್ಷಿಯಾಗಿದ್ದರು. ಇದಕ್ಕಾಗಿ ಪ್ರಮೋದ್ ಮುತಾಲಿಕ್ ಖುದ್ದು ಆರ್.ಎಸ್.ಎಸ್ ಸೇರಿದಂತೆ ಎಲ್ಲ ಬಿಜೆಪಿ ಪ್ರಮುಖರ ಕೈಕಾಲು ಹಿಡಿದು ಬೇಡಿಕೊಂಡಿದ್ದರಂತೆ. ಆದರೆ ಬಿಜೆಪಿ ಮಾತ್ರ ಸುರೇಶ್ ಅಂಗಡಿ ಯವರ ನಿಧನದ ಅನುಕಂಪವನ್ನು ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಮಂಗಳಾ ಅಂಗಡಿಯವರನ್ನು ನಿಲ್ಲಿಸಿ ಗೆಲ್ಲಿಸಿತ್ತು.

ಇದೇ ವಿಚಾರಕ್ಕೆ ಪ್ರಮೋದ್ ಮುತಾಲಿಕ್ ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದು, ಅಂದಿನಿಂದಲೂ ಬಿಜೆಪಿಯೊಂದಿಗೆ ಪ್ರಮೋದ್ ಮುತಾಲಿಕ್ ಅಂತರ ಕಾಯ್ದುಕೊಳ್ಳುತ್ತಲೇ ಬಂದಿದ್ದರು. ಈಗ ಪರೋಕ್ಷವಾಗಿ ಪ್ರಮೋದ್ ಮುತಾಲಿಕ್ ಪಕ್ಷ ಸ್ಥಾಪಿಸುವ ಹಾಗೂ ಚುನಾವಣೆಗೆ ಸ್ಪರ್ಧಿಸುವ ಮುನ್ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : Nalin Kumar Change : ಪ್ರವೀಣ್, ಹರ್ಷ ಹತ್ಯೆಗೆ ನಳಿನ್ ಕುಮಾರ್ ತಲೆದಂಡ : ವಾರದಲ್ಲೇ ಹೊಸ ರಾಜ್ಯಾಧ್ಯಕ್ಷರ ನೇಮಕ

ಇದನ್ನೂ ಓದಿ : praveen nettaru murder case : ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುವಂತೆ ಎನ್​ಐಎಗೆ ಕೇಂದ್ರದ ಆದೇಶ

New Political party for Hindutva Yogi model administration Pramod Muthalik gave a shock to BJP

Comments are closed.