Udupi : ಉಡುಪಿ ಕಾಲೇಜಿನ ಶೌಚಾಲಯದಲ್ಲಿ ಹಿಡನ್‌ ಕ್ಯಾಮೆರಾ ಇಟ್ಟಿರುವುದು ಘೋರ ಅಪರಾಧ: ತೇಜಸ್ವಿನಿ

ಬೆಂಗಳೂರು (Udupi) : ಉಡುಪಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಹಿಡನ್‌ ಕ್ಯಾಮರಾ ಇಟ್ಟಿರುವುದು ಘೋರ ಅಪರಾಧ ಎಂದು ವಿಧಾನಪರಿಷತ್‌ ಸದಸ್ಯ ತೇಜಸ್ವಿನಿ ಗೌಡ ಅವರು ಆರೋಪಿಸಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹೆಣ್ಣು ಮಕ್ಕಳ ಮರ್ಯಾದೆ, ಶೀಲ, ವ್ಯಕ್ತಿತ್ವದ ಜೊತೆ ಆಟವಾಡಲು ಯಾವ ಸರಕಾರವೂ ಕೂಡ ಅವಕಾಶ ನೀಡಬಾರದು. ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ದ ತತ್‌ ಕ್ಷಣ ಕ್ರಮವನ್ನು ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಅವರು ಒತ್ತಾಯಿಸಿದ್ದಾರೆ.

ಹೆಣ್ಣು ಮಕ್ಕಳು ಹಿಂದೂ ವಿದ್ಯಾರ್ಥಿನಿಯರ ವಿಡಿಯೋಗಳನ್ನು ಸೆರೆ ಹಿಡಿದು ಮುಸಲ್ಮಾನ ಹುಡುಗರಿಗೆ ಕಳುಹಿಸಿಕೊಟ್ಟಿದ್ದಾರೆ. ಶೌಚಾಲಯದಲ್ಲಿ ಹಿಡನ್‌ ಕ್ಯಾಮರಾ ಇಟ್ಟಿರುವುದು, ವಿಡಿಯೋ ಚಿತ್ರೀಕರಣ ಮಾಡಿರುವುದು, ವಿಡಿಯೋವನ್ನು ಶೇರ್‌ ಮಾಡಿರುವುದು ಕಣ್ತಪ್ಪಿನಿಂದ ಆಗಿರುವುದಲ್ಲ. ಇದರ ಹಿಂದೆ ದೊಡ್ಡ ಜಾಲವಿದೆ. ಇಂತಹ ಅಪರಾಧವನ್ನು ಎಸಗಿರುವ ವಿದ್ಯಾರ್ಥಿನಿಯರಿಗೆ ನ್ಯಾಯಲಯದಲ್ಲಿ ತ್ವರಿತಗತಿಯಲ್ಲಿ ಶಿಕ್ಷೆ ಆಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೃತ್ಯದ ಹಿಂದೆ ಜಿಹಾದಿ ಸಂಘಟನೆಗಳ ಕೈವಾಡ : ಶಾಸಕ ಯಶಪಾಲ್‌ ಸುವರ್ಣ ಆರೋಪ

ಇನ್ನು ಉಡುಪಿ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯದ ಹಿಂದೆ ಜಿಹಾದಿ ಸಂಘಟನೆಗಳ ಕೈವಾಡವಿದೆ. ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮಕ್ಕೆ ಉಡುಪಿ ಶಾಸಕ ಯಶಪಾಲ್‌ ಸುವರ್ಣ ಆಗ್ರಹಿಸಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ನಾನು ಅಧಿವೇಶದಲ್ಲಿದ್ದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದೇನೆ. ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ಸಾಧನೆಯನ್ನು ಮಾಡಿದೆ. ಮಹಿಳೆಯರಿಗೆ ಅತೀ ಹೆಚ್ಚು ಗೌರವ ನೀಡುವ ಜಿಲ್ಲೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಆದರೆ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರು ಇಂತಹ ಕೃತ್ಯ ಎಸಗುವ ಮೂಲಕ ಎಲ್ಲರೂ ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ. ಈ ಕೃತ್ಯದ ಹಿಂದೆ ಯಾರೇ ಇರಲಿ. ಅವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮವನ್ನು ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : Udupi News : ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ : ಎಸ್ಪಿ ಸ್ಪಷ್ಟನೆ

ಇದನ್ನೂ ಓದಿ : Dr. K. Vidyakumari : ಉಡುಪಿ : ಬೀಚ್, ಜಲಪಾತಗಳಲ್ಲಿ ಸೆಲ್ಪಿ ನಿಷೇಧ : ಡಿಸಿ ಡಾ.ಕೆ. ವಿದ್ಯಾಕುಮಾರಿ

Comments are closed.