ಇರಾನ್‌ ಬುಡಕ್ಕೆ ಬೆಂಕಿಯಿಟ್ಟ ಬ್ಲಾಕ್‌ ಲೇಡಿ! ಇಸ್ರೇಲ್ ಯಶಸ್ಸಿಗೆ ಕಾರಣ ಕ್ಯಾಥರೀನ್ ಪೆರೆಜ್ ಶಾಕ್ಡಮ್!

Catherine Perez Shakdam | Israel Mossad Agent: ಇರಾನ್ ಮತ್ತು ಇಸ್ರೇಲ್ ನಡುವಿನ ಸುದೀರ್ಘ ಸಂಘರ್ಷದಲ್ಲಿ ಇಸ್ರೇಲ್‌ನ ಗುಪ್ತಚರ ಸಂಸ್ಥೆ ‘ಮೊಸಾದ್’ ಮೇಲುಗೈ ಸಾಧಿಸಲು ಒಬ್ಬ ಮಹಿಳಾ ಏಜೆಂಟ್ ಪ್ರಮುಖ ಕಾರಣ ಎಂಬ ಸ್ಫೋಟಕ ಮಾಹಿತಿ ಹೊರಬಂದಿದೆ. ಆಕೆಯನ್ನು ಇರಾನ್ ಅಧಿಕಾರಿಗಳು ‘ಬ್ಲ್ಯಾಕ್ ಲೇಡಿ’ ಎಂದು ಕರೆಯುತ್ತಿದ್ದು, ಆಕೆಯ ನಿಜವಾದ ಹೆಸರು ಕ್ಯಾಥರೀನ್ ಪೆರೆಜ್ ಶಾಕ್ಡಮ್.

ಯಾರು ಈ ಕ್ಯಾಥರೀನ್? ಇರಾನ್ ಬುಡಕ್ಕೆ ಆಕೆ ಇಟ್ಟಿದ್ದು ಹೇಗೆ?

ಕ್ಯಾಥರೀನ್ ಪೆರೆಜ್ ಶಾಕ್ಡಮ್ ಮೂಲತಃ ಫ್ರೆಂಚ್ ಪ್ರಜೆ. ಮೊಸಾದ್‌ನಿಂದ ವಿಶೇಷ ತರಬೇತಿ ಪಡೆದಿದ್ದ ಈಕೆ, ಇರಾನ್‌ನೊಳಗೆ ನುಸುಳಲು ಬಳಸಿದ್ದು ‘ಧರ್ಮ’ ಮತ್ತು ‘ಸ್ನೇಹ’ದ ಹಾದಿಯನ್ನು.

ಇಸ್ಲಾಂಗೆ ಮತಾಂತರದ ನಾಟಕ: ಇಸ್ಲಾಂ ಧರ್ಮದ ಬಗ್ಗೆ ತೀವ್ರ ಆಸಕ್ತಿ ಇದೆ ಎಂದು ತೋರಿಸಿಕೊಂಡ ಕ್ಯಾಥರೀನ್, ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಳು. ಇದು ಆಕೆಗೆ ಇರಾನ್‌ನ ಪ್ರಭಾವಿ ವಲಯಗಳಲ್ಲಿ ಸುಲಭವಾಗಿ ಪ್ರವೇಶ ಸಿಗುವಂತೆ ಮಾಡಿತು.

ಅಧಿಕಾರಿಗಳ ಪತ್ನಿಯರೊಂದಿಗೆ ಸ್ನೇಹ: ಇರಾನ್‌ನ ಸೇನಾಧಿಕಾರಿಗಳು ಮತ್ತು ಪ್ರಮುಖ ವಿಜ್ಞಾನಿಗಳ ಪತ್ನಿಯರೊಂದಿಗೆ ನಿಕಟ ಸ್ನೇಹ ಬೆಳೆಸಿದ ಆಕೆ, ಅವರ ಮನೆಗಳಿಗೂ ಭೇಟಿ ನೀಡುವಷ್ಟು ವಿಶ್ವಾಸ ಗಳಿಸಿದಳು.

ರಹಸ್ಯ ಮಾಹಿತಿ ಸೋರಿಕೆ: ಹೀಗೆ ಅವರ ಮನೆಗಳಿಗೆ ಹೋದಾಗ ಮತ್ತು ಸ್ನೇಹದ ಸಂಭಾಷಣೆಯ ನಡುವೆ ಇರಾನ್‌ನ ಪರಮಾಣು ಕೇಂದ್ರಗಳು, ಕ್ಷಿಪಣಿ ಸಂಗ್ರಹಾಗಾರಗಳು ಮತ್ತು ಸೇನಾ ಕಮಾಂಡರ್‌ಗಳ ನಿಖರವಾದ ಸ್ಥಳದ ಮಾಹಿತಿಯನ್ನು ಪಡೆದು ಇಸ್ರೇಲ್‌ಗೆ ರವಾನಿಸುತ್ತಿದ್ದಳು.

ಇಸ್ರೇಲ್ ದಾಳಿಗಳ ಯಶಸ್ಸಿಗೆ ಈಕೆಯೇ ಕಾರಣ!

ಇತ್ತೀಚಿನ ವರ್ಷಗಳಲ್ಲಿ ಇರಾನ್‌ನ ಪ್ರಮುಖ ಸೇನಾ ಕಮಾಂಡರ್‌ಗಳು ಮತ್ತು ಪರಮಾಣು ವಿಜ್ಞಾನಿಗಳ ಸರಣಿ ಹತ್ಯೆಗಳು ನಡೆದಿದ್ದವು. ಈ ಎಲ್ಲಾ ದಾಳಿಗಳಿಗೆ ಬೇಕಾದ ನಿಖರವಾದ ಲೊಕೇಶನ್ ಮಾಹಿತಿಯನ್ನು ಈ ಮಹಿಳಾ ಏಜೆಂಟ್ ನೀಡಿದ್ದಳು ಎಂದು ವರದಿಯಾಗಿದೆ. ಈಕೆಯ ಮಾಹಿತಿಯ ಆಧಾರದ ಮೇಲೆಯೇ ಇಸ್ರೇಲ್ ವಾಯುಪಡೆ ಇರಾನ್‌ನ ರಹಸ್ಯ ನೆಲೆಗಳ ಮೇಲೆ ನಿಖರ ದಾಳಿ ನಡೆಸಲು ಸಾಧ್ಯವಾಯಿತು.

ಇಸ್ರೇಲ್-ಇರಾನ್ ಯುದ್ಧ: ಇನ್ನಷ್ಟು ಹೆಚ್ಚುತ್ತಾ ಚಿನ್ನ, ಬೆಳ್ಳಿ ಬೆಲೆ? ಇಲ್ಲಿದೆ ಸಂಪೂರ್ಣ ವಿವರ

ಎಚ್ಚೆತ್ತ ಇರಾನ್ – ಬೇಟೆ ಆರಂಭ:

ತಮ್ಮ ದೇಶದ ಮಾಹಿತಿಯು ಶತ್ರು ರಾಷ್ಟ್ರಕ್ಕೆ ಸೋರಿಕೆಯಾಗುತ್ತಿರುವುದನ್ನು ಅರಿತ ಇರಾನ್ ಗುಪ್ತಚರ ಸಂಸ್ಥೆ, ಮೊಸಾದ್ ಏಜೆಂಟ್‌ಗಳ ಪತ್ತೆಗೆ ಬೃಹತ್ ಕಾರ್ಯಾಚರಣೆ ಆರಂಭಿಸಿದೆ. ಇತ್ತೀಚೆಗೆ ಕಾರಾಜ್ ಎಂಬಲ್ಲಿ ಪ್ರವಾಸಿಗರ ಸೋಗಿನಲ್ಲಿ ಬಂದಿದ್ದ ಇಬ್ಬರು ಜರ್ಮನ್ ಪ್ರಜೆಗಳನ್ನು (ಮೊಸಾದ್ ಏಜೆಂಟ್ ಎಂಬ ಶಂಕೆಯ ಮೇಲೆ) ಬಂಧಿಸಲಾಗಿದೆ. ಅವರು ರಹಸ್ಯ ಸೇನಾ ನೆಲೆಗಳ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಸರಣಿ ಎಚ್ಚರಿಕೆ:
ಇರಾನ್ ಸರ್ಕಾರವು ತನ್ನ ದೇಶದೊಳಗೆ ಕೆಲಸ ಮಾಡುತ್ತಿರುವ ಮೊಸಾದ್ ಏಜೆಂಟ್‌ಗಳಿಗೆ ಜೂನ್ 23ರ ಒಳಗಾಗಿ ಶರಣಾಗುವಂತೆ ಗಡುವು ನೀಡಿತ್ತು. ಯಾರು ಶರಣಾಗುವುದಿಲ್ಲವೋ ಅವರಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆ ವಿಧಿಸುವುದಾಗಿ ಎಚ್ಚರಿಸಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories