ಮನೆಯ ಮುಖ್ಯ ದ್ವಾರದ ಬಳಿ ಯಾವ ಗಿಡಗಳನ್ನು ನೆಡುವುದು ಶುಭ ಮತ್ತು ಅಶುಭ? ವಾಸ್ತು ನಿಯಮ ತಿಳಿದು ಗಿಡ ಬೆಳೆಸಿ
ವಾಸ್ತು ಪ್ರಕಾರ ಮನೆಯ ಮುಖ್ಯ ದ್ವಾರದ ಬಳಿ ಸಸ್ಯಗಳನ್ನು ಬೆಳೆಸುವುದು ಶುಭವೆಂದು ಪರಿಗಣಿಸಲಾಗಿದೆ. ಆದರೆ ಕೆಲವು ಸಸ್ಯಗಳನ್ನು ಬೆಳೆಸುವುದರಿಂದ ಧನಾತ್ಮಕ ಶಕ್ತಿ ದೂರವಾಗಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಅಂತಹ ಗಿಡಗಳು ಯಾವುವು? ಇಲ್ಲಿದೆ ಓದಿ.
ವಾಸ್ತು ಶಾಸ್ತ್ರವು ಕೇವಲ ವಾಸ್ತುಶಿಲ್ಪ ಮತ್ತು ವಿನ್ಯಾಸಕ್ಕಷ್ಟೇ ಸಂಬಂಧಿಸಿಲ್ಲ. ಇದು ಮನುಷ್ಯ ಮತ್ತು ಪ್ರಕೃತಿಯ ನಡುವೆ ಸಾಮರಸ್ಯವನ್ನು ಸೃಷ್ಟಿಸುತ್ತದೆ. ಧನಾತ್ಮಕ ಶಕ್ತಿಯನ್ನು ತುಂಬುತ್ತಾ ಸುಖ, ಶಾಂತಿ, ಸಮೃದ್ಧಿಯ ಜೀವನಕ್ಕೆ ದಾರಿ ಮಾಡಿ ಕೊಡುತ್ತದೆ. ವಾಸ್ತು ಶಾಸ್ತ್ರದಲ್ಲಿ ಹಲವಾರು ಸಲಹೆ, ನಿಯಮಗಳನ್ನು ಹೇಳಲಾಗಿದೆ. ಅವುಗಳಲ್ಲಿ ಸಸ್ಯ ಮತ್ತು ಮರಗಳಿಗೂ ನಿಯಮಗಳನ್ನು ಹೇಳಿದ್ದಾರೆ. ವಾಸ್ತು ಪ್ರಕಾರ ಕೆಲವು ಸಸ್ಯ ಅಥವಾ ಮರಗಳನ್ನು ನಾವು ವಾಸಿಸುವ ಜಾಗದ ಸುತ್ತ ನೆಡಬಾರದು ಎನ್ನಲಾಗಿದೆ. ಕೆಲವರಿಗೆ ಮನೆಯ ಸುತ್ತ ಗಿಡಗಳನ್ನು ಬೆಳೆಸುವ ಹವ್ಯಾಸವಿರುತ್ತದೆ. ಹಾಗೆಂದು ಸಿಕ್ಕಸಿಕ್ಕ ಕಡೆ ಅದೇ ರೀತಿ ಮನೆಯ ಮುಖ್ಯ ದ್ವಾರದ ಬಳಿಯೂ ಕೆಲವು ಗಿಡಗಳನ್ನು ಬೆಳೆಸುವುದು ಸರಿಯಲ್ಲ ಎಂದು ಹೇಳಿದೆ.
ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಗಿಡಗಳು ಮನೆಗೆ ಸಕಾರಾತ್ಮಕ ಶಕ್ತಿಯನ್ನು ತರುತ್ತವೆ. ಆದರೆ ಅವುಗಳನ್ನು ಶಾಸ್ತ್ರದಲ್ಲಿ ಹೇಳಿದ ದಿಕ್ಕಿನಲ್ಲಿಯೇ ನೆಡಬೇಕು ಎಂದು ಹೇಳಿದೆ. ಸರಿಯಾದ ದಿಕ್ಕಿನಲ್ಲಿ ಸಸ್ಯಗಳನ್ನು ಬೆಳೆಸುವುದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಆರೋಗ್ಯ, ಸಂಪತ್ತು ಆಕರ್ಷಿಸುತ್ತದೆ.
ಗಿಡಗಳನ್ನು ಮನೆಯ ಯಾವ ದಿಕ್ಕಿನಲ್ಲಿ ಬೆಳೆಸಬೇಕು?
ವಾಸ್ತು ಶಾಸ್ತ್ರದಲ್ಲಿ ಗಿಡಗಳನ್ನು ನೆಡಲು ದಿಕ್ಕುಗಳನ್ನು ಹೇಳಿದ್ದಾರೆ. ಅದರ ಪ್ರಕಾರ ಹೆಚ್ಚಿನ ಗಿಡಗಳನ್ನು ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ನೆಡಬೇಕು. ಈ ದಿಕ್ಕುಗಳಲ್ಲಿ ಸಾಕಷ್ಟು ಸೂರ್ಯನ ಬೆಳಕು ಸಿಗುತ್ತದೆ. ಇದರಿಂದ ಧನಾತ್ಮಕ ಶಕ್ತಿ ಹೆಚ್ಚಾಗಿ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ. ವಾಸ್ತು ಪ್ರಕಾರ, ಮನೆಯ ನೈಋತ್ಯ ದಿಕ್ಕಿನಲ್ಲಿ ಮುಳ್ಳಿನ ಗಿಡವನ್ನು ನೆಡುವುದರಿಂದ ನಕಾರಾತ್ಮಕ ಶಕ್ತಿಯನ್ನು ದೂರವಿಡಲು ಸಹಾಯ ಮಾಡುತ್ತದೆ. ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಸಕಾರಾತ್ಮಕ ಶಕ್ತಿ ಉಳಿಯುತ್ತದೆ.
ಇದನ್ನೂ ಓದಿ : ಶನಿ ಹಿಮ್ಮುಖ ಚಲನೆ 2026 : ಈ 4 ರಾಶಿಯವರಿಗೆ ಸಿಗಲಿದೆ ಕರ್ಮಫಲದಾತನ ಕೃಪಾಕಟಾಕ್ಷ
ವಾಸ್ತು ಪ್ರಕಾರ ಮನೆಯ ಮುಖ್ಯ ದ್ವಾರದ ಬಳಿ ಯಾವ ಗಿಡವಿದ್ದರೆ ಶುಭ?
ತುಳಸಿ ಗಿಡ
ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ತುಳಸಿ ಗಿಡವನ್ನು ನೆಡುವುದನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಿಂದೂ ಸಂಸ್ಕೃತಿಯಲ್ಲಿ, ತುಳಸಿಯನ್ನು ಶಾಂತಿಯನ್ನು ತರುವ, ಗಾಳಿಯನ್ನು ಶುದ್ಧೀಕರಿಸುವ ಮತ್ತು ಸಕಾರಾತ್ಮಕ ಶಕ್ತಿಯನ್ನು ಒದಗಿಸುವ ಸಸ್ಯವೆಂದು ಪರಿಗಣಿಸಲಾಗಿದೆ.
ಮನಿ ಪ್ಲಾಂಟ್
ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ಮನಿ ಪ್ಲಾಂಟ್ ನೆಡುವುದರಿಂದ ಆರ್ಥಿಕ ಸ್ಥಿರತೆ ಖಚಿತವಾಗಿ ಸಿಗುತ್ತದೆ. ಮುಖ್ಯ ದ್ವಾರದ ಆಗ್ನೇಯ ಮೂಲೆಯಲ್ಲಿ ನೆಡುವುದು ಶುಭವೆಂದು ಪರಿಗಣಿಸಲಾಗುತ್ತದೆ.
ಅರೆಕಾ ಪಾಮ್
ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ಅರೆಕಾ ಪಾಮ್ ಮರವನ್ನು ನೆಡುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಈ ಸಸ್ಯವನ್ನು ಮುಖ್ಯ ದ್ವಾರದಲ್ಲಿ ನೆಡುವುದರಿಂದ ಗಾಳಿಯ ಗುಣಮಟ್ಟ ಸುಧಾರಿಸುತ್ತದೆ ಮತ್ತು ಮನೆಯೊಳಗೆ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ.
ಬಿದಿರಿನ ಗಿಡ
ವಾಸ್ತು ಶಾಸ್ತ್ರದಲ್ಲಿ, ಬಿದಿರು ಅದೃಷ್ಟ ತರುವ ಗಿಡವಾಗಿದೆ. ಇದನ್ನು ಮನೆಯ ಒಳಗೆ ಅಥವಾ ಮುಖ್ಯ ದ್ವಾರದಲ್ಲಿ, ಪೂರ್ವ ಅಥವಾ ಆಗ್ನೇಯಕ್ಕೆ ಎದುರಾಗಿ ನೆಡುವುದು ಸೂಕ್ತವೆಂದು ಪರಿಗಣಿಸಲಾಗಿದೆ.
ಜೇಡ್ ಸಸ್ಯ
ವಾಸ್ತು ಪ್ರಕಾರ, ಜೇಡ್ ಸಸ್ಯವನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮುಖ್ಯ ದ್ವಾರದಲ್ಲಿ ಪೂರ್ವ ದಿಕ್ಕಿನಲ್ಲಿ ಈ ಸಸ್ಯವನ್ನು ನೆಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ಸ್ನೇಕ್ ಪ್ಲಾಂಟ್
ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ಸ್ನೇಕ್ ಪ್ಲಾಂಟ್ ಅನ್ನು ನೆಡುವುದು ಸಹ ಉತ್ತಮ ಆಯ್ಕೆಯಾಗಿದೆ. ವಾಸ್ತು ಪ್ರಕಾರ, ಈ ಸಸ್ಯವು ಗಾಳಿಯನ್ನು ಶುದ್ಧೀಕರಿಸುವುದಲ್ಲದೆ, ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ಸಹಾಯ ಮಾಡುತ್ತದೆ. ನಿಮ್ಮ ಮನೆಯಲ್ಲಿ ಈ ಸಸ್ಯವನ್ನು ನೆಡುವುದರಿಂದ ನಕಾರಾತ್ಮಕ ಶಕ್ತಿಯ ಸಮಸ್ಯೆಗಳನ್ನು ನಿವಾರಿಸಬಹುದು.
ಇದನ್ನೂ ಓದಿ: ನಿಮ್ಮ ಅಂಗಡಿಯಲ್ಲಿ ಕ್ಯಾಶ್ ಕೌಂಟರ್ ತಪ್ಪು ದಿಕ್ಕಿನಲ್ಲಿದೆಯಾ ? ವ್ಯಾಪಾರದಲ್ಲಿ ಲಾಭ ಗಳಿಸಲು ಈ ವಾಸ್ತು ಸಲಹೆ ಪಾಲಿಸಿ
ವಾಸ್ತು ಪ್ರಕಾರ ಮನೆಯ ಮುಖ್ಯ ದ್ವಾರದ ಬಳಿ ಯಾವ ಸಸ್ಯ ನೆಡುವುದು ಅಶುಭ?
ಕ್ಯಾಕ್ಟಸ್ ಗಿಡ
ಕ್ಯಾಕ್ಟಸ್ ಅಥವಾ ಯಾವುದೇ ರೀತಿಯ ಮುಳ್ಳಿನ ಸಸ್ಯವು ನಕಾರಾತ್ಮಕ ಶಕ್ತಿ ಉತ್ತೇಜಿಸುತ್ತದೆ. ಆದ್ದರಿಂದ ಅವುಗಳನ್ನು ಮನೆಯಲ್ಲಿ ಮುಖ್ಯ ದ್ವಾರದ ಬಳಿ ನೆಡುವುದನ್ನು ನಿಷೇಧಿಸಲಾಗಿದೆ.
ಹುಣಸೆ ಗಿಡ ಮತ್ತು ಮದರಂಗಿ ಗಿಡ
ವಾಸ್ತು ಪ್ರಕಾರ, ಮನೆಯ ಮುಖ್ಯ ದ್ವಾರದ ಬಳಿ ಹುಣಸೆ ಅಥವಾ ಗೋರಂಟಿ (ಮದರಂಗಿ) ಗಿಡಗಳನ್ನು ನೆಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಅವು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ.
ಅಕೇಶಿಯ ಮರ
ವಾಸ್ತು ಮತ್ತು ಧಾರ್ಮಿಕ ಗ್ರಂಥಗಳ ಪ್ರಕಾರ, ಮನೆಯಲ್ಲಿ ಅಕೇಶಿಯಾ ಮರವನ್ನು ನೆಡುವುದು ಅತ್ಯಂತ ಅಶುಭವೆಂದು ಪರಿಗಣಿಸಲಾಗಿದೆ. ಮುಖ್ಯ ದ್ವಾರದ ಬಳಿ ಈ ಸಸ್ಯವನ್ನು ನೆಡುವುದರಿಂದ ಕೌಟುಂಬಿಕ ಘರ್ಷಣೆಗಳು ಮತ್ತು ಉದ್ವಿಗ್ನತೆ ಉಂಟಾಗುತ್ತದೆ.
ಹತ್ತಿ ಗಿಡ
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರದಲ್ಲಿ ಹತ್ತಿ ಗಿಡಗಳನ್ನು ನೆಡಬಾರದು. ಈ ಗಿಡಗಳನ್ನು ಮನೆಯಲ್ಲಿ ನೆಡುವುದರಿಂದ ಆರ್ಥಿಕ ತೊಂದರೆಗಳು ಮತ್ತು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.



