Apple Iphone:ಐಫೋನ್ ಗ್ರಾಹಕರಿಗೆ ಸಿಹಿಸುದ್ದಿ : 5G ಸೇವೆ ಆರಂಭ ಘೋಷಿಸಿದ ಆಪಲ್

(Apple Iphone)ಟೆಕ್‌ ದೈತ್ಯ ಆಪಲ್‌ ಮುಂದಿನ ವಾರದಿಂದ ಭಾರತದಲ್ಲಿ 5G ನೇಟ್ ವರ್ಕ್ ಸೇವೆಯನ್ನು ಒದಗಿಸಲು ಮುಂದಾಗಿದೆ. ಇದಕ್ಕಾಗಿ ಬೀಟಾ ಸಾಫ್ಟ್‌ವೇರ್ ಅಪ್‌ ಗ್ರೇಡ್‌ಗಳನ್ನು ತನ್ನ ಬಳಕೆದಾರರಿಗೆ ಹೊರತರಲಿದೆ. ಆಪಲ್‌ ತನ್ನ iOS 16 ಬೀಟಾ ಸಾಫ್ಟ್‌ ವೇರ್‌ ಅಪ್‌ ಡೇಟ್‌ ಮಾಡುತ್ತಿದ್ದಂತೆ ಜನರಿಗೆ ಈ ಸೇವೆ ಲಭ್ಯವಿರುತ್ತದೆ. ಏರ್ ಟೆಲ್‌ ಮತ್ತು ರಿಲಾಯನ್ಸ್‌ ಜಿಯೋ ಗ್ರಾಹಕರು, iPhone 14, iPhone 13, iPhone12,iPhone SE ಬಳಕೆದಾರರು 5G ಸೇವೆ ಯನ್ನು ಬಳಸಲು iOS 16 ಬೀಟಾ ಸಾಫ್ಟ್ ವೇರ್‌ ಪೋಗ್ರಾಂ ಅನ್ನು ಬಳಸಬಹುದಾಗಿದೆ.

(Apple Iphone)ಆಪಲ್‌ ಐಒಎಸ್ 16 ಬೀಟಾ ಸಾಫ್ಟ್‌ವೇರ್ ಅಪ್‌ಡೇಟ್ ಅನ್ನು ಡೌನ್‌ಲೋಡ್ ಮಾಡುವ ಏರ್‌ಟೆಲ್ ಮತ್ತು ಜಿಯೋ ಗ್ರಾಹಕರು ಆಪಲ್ ಬೀಟಾ ಸಾಫ್ಟ್‌ವೇರ್ ಪ್ರೋಗ್ರಾಂ ನ ಕುರಿತು ಕಂಪನಿಗೆ ಮನವಿಯನ್ನು ಕಳುಹಿಸಬಹುದಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಹೊಸ ಸಾಫ್ಟ್ ವೇರ್ ಲಭ್ಯವಾಗಲಿದೆ. ಆಪಲ್ ಬೀಟಾ ಸಾಫ್ಟ್‌ವೇರ್ ಪ್ರೋಗ್ರಾಂ ಅನ್ನು ಬಳಕೆದಾರರಿಗೆ ಈಗಾಗಲೇ ಕಂಪೆನಿ ಬಿಡುಗಡೆ ಮಾಡಿದೆ. ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದರೂ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ ಅನ್ನೋದು ಲೆಕ್ಕಾಚಾರವಾಗಿದೆ.ಆಪಲ್‌ (Apple) ಸಾಫ್ಟ್‌ವೇರ್ ಅನ್ನು ಇನ್ನಷ್ಟು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಐಫೋನ್‌ ಬಳಕೆದಾರರಿಗೆ ಪೋಗ್ರಾಂ ಮತ್ತು ಸಾಫ್ಟವೇರ್‌ ಎರಡೂ ಉಚಿತವಾಗಿ ದೋರೆಯುತ್ತದೆ ಎಂದು ಆಪಲ್‌ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ:Mayank Agarwal lost Punjab Captaincy : ಪಂಜಾಬ್ ತಂಡದಲ್ಲಿ ಕನ್ನಡಿಗ ಮಯಾಂಕ್ ನಾಯಕತ್ವಕ್ಕೆ ಕುತ್ತು, ಶಿಖರ್ ಧವನ್ ಹೊಸ ನಾಯಕ

ಇದನ್ನೂ ಓದಿ:Bad Weather : ಬೆಂಗಳೂರಲ್ಲಿ ಹೆದಗೆಟ್ಟ ಹವಾಮಾನ : ಶೀತ, ಜ್ವರ, ಕೆಮ್ಮಿಗೆ ತತ್ತರಿಸಿದ ಮಕ್ಕಳು

ಆಪಲ್ ಕಂಪೆನಿಯು ಅಕ್ಟೋಬರ್ ತಿಂಗಳಲ್ಲಿ ನೀಡಿದ ಹೇಳಿಕೆಯಲ್ಲಿ, ಐಪೋನ್ ಬಳಕೆದಾರರಿಗೆ ಅತ್ಯುತ್ತಮ 5G ನೆಟ್ ಸೇವೆಯನ್ನು ಒದಗಿಸಲಿದೆ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲೀಗ ಡಿಸೆಂಬರ್ ತಿಂಗಳಲ್ಲಿ ಬಳಕೆದಾರರಿಗೆ ಸಂಪೂರ್ಣ ಸೇವೆಯನ್ನು ಒದಗಿಸಲಿದೆ. ಅಕ್ಟೋಬರ್ 1 ರಂದು ದೆಹಲಿಯ ಪ್ರಗತಿ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 5G ಸೇವೆಗಳಿಗೆ ಚಾಲನೆ ನೀಡಿದ್ದಾರೆ. ಕೇಂದ್ರ ಸರ್ಕಾರವು 2 ವರ್ಷಗಳಲ್ಲಿ ದೇಶಾದ್ಯಂತ 5G ಸೇವೆಗಳನ್ನು ನೀಡುವುದಕ್ಕೆ ಉದ್ದೇಶಿಸಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಅದರಂತೆ ಅಕ್ಟೋಬರ್‌ನಲ್ಲಿ, ಭಾರ್ತಿ ಏರ್‌ಟೆಲ್ ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಸಿಲಿಗುರಿ, ನಾಗ್ಪುರ ಮತ್ತು ವಾರಣಾಸಿ ಎಂಬ ಎಂಟು ನಗರಗಳಲ್ಲಿ ಏರ್‌ಟೆಲ್ 5G ಪ್ಲಸ್ ಸೇವೆಗಳನ್ನು ಪ್ರಾರಂಭಿಸಿದೆ. ಇನ್ನು 2023 ರ ಸಮಯಕ್ಕೆ ಭಾರತದ ಎಲ್ಲಾ ನಗರಗಳಲ್ಲೂ ಕೂಡ 5G ನೆಟ್‌ ವರ್ಕ್‌ ಸೇವೆಯನ್ನು ಪ್ರಾರಂಭಿಸುವುದಕ್ಕೆ ಚಿಂತನೆ ನಡೆಸಿದೆ.

apple iphone user india good news 5g service start date announced

Comments are closed.