Aprameya swamy temple Channapatna : ಕೃಷ್ಣ ಹಲವರ ಪಾಲಿನ ಆರಾಧ್ಯ ದೈವ. ಕೆಲವರಿಗೆ ಬಾಲ ಕೃಷ್ಣ ಇಷ್ಟವಾದ್ರೆ ಇನ್ನು ಕೆಲವರಿಗೆ ಪ್ರಬುದ್ಧ ಕೃಷ್ಣ ಇಷ್ಟ ಆಗ್ತಾನೆ. ನಮ್ಮ ಮನೆಗಳಂತು ಮುದ್ದು ಮಕ್ಕಳನ್ನು ನೋಡಿದ್ರೆ ಕೃಷ್ಣ ಅಂತಾನೆ ಕರಿಯೋ ರೂಢಿ ಇದೆ . ಆದ್ರೆ ಈ ದೇವಾಲಯದಲ್ಲಿ ಮಾತ್ರ ಈ ಕೃಷ್ಣನೇ ಮನೆಗೆ ಮುದ್ದಾದ ಕಂದ ಬರಲಿ ಅಂತ ವರ ನೀಡ್ತಾನೆ. ಈತನಿಗೆ ಬೆಣ್ಣೆ ನೀಡಿದ್ರೆ ನಿಮ್ಮ ಮನೆಗೆ ಮುದ್ದಾದ ಶ್ರೀ ಕೃಷ್ಣ ಬರುತ್ತಾನಂತೆ.

ಹೌದು ಕೃಷ್ಣ ಅನ್ನೋ ಹೆಸರೇ ಭಾರತೀಯರನ್ನು ರೋಮಾಂಚನಗೊಳಿಸುತ್ತೆ. ಆತನ ಬಾಲ ಲೀಲೆಯಿಂದ ಎಂಥವರಿಗಾದರೂ ತನಗೊಬ್ಬ ಈ ಥರದ ಮಗುವಿರಬೇಕಪ್ಪ ಅಂತ ಅನಿಸದೇ ಇರದು. ಅಂತಹದೇನಾದ್ರು ಆಸೆ ನಿಮಗಿದ್ರೆ ನೀವು ಈ ದೇವಾಲಯಕ್ಕೆ ಹೋಗಲೇ ಬೇಕು. ಇಲ್ಲಿ ಬೇಡಿಕೊಂಡ್ರೆ ಸಂತಾನ ಭಾಗ್ಯ ಒಲಿದು ಬರುತ್ತೆ ಅನ್ನೋ ನಂಬಿಕೆ ಇದೆ.

ಹೌದು ದೇವಾಲಯಕ್ಕೆ ಸುಮಾರು 3000 ವರ್ಷಗಳ ಇತಿಹಾಸವಿದೆ. ಇಲ್ಲಿ ಶ್ರೀರಾಮ ಯಜ್ಞ ಯಾಗಾದಿಗಳನ್ನು ಮಾಡಿದ್ದನಂತೆ .ಅದಕ್ಕೆ ಇದನ್ನು ದಕ್ಷಿಣ ಭಾರತದ ಅಯೋಧ್ಯ ಅಂತಾನು ಕರೆಯುತ್ತಾರೆ. ಇನ್ನು ಇಲ್ಲಿ ಚತುರ್ವೇಧಗಳ ಪಠಣ ಕೂಡಾ ನಡೆಯುತ್ತಿತಂತೆ. ಹೀಗಾಗಿ ಇದನ್ನು “ಚತುರ್ವೇದ ಮಂಗಳಪುರ” ಅಂತಾನು ಕರೆಯುತ್ತಾರೆ. ದಾಸ ಪರಂಪರೆ ಬಂದಾಗ ಪುರಂದರ ದಾಸರು ಇಲ್ಲಿಗೆ ಆಗಮಿಸಿದ್ದರಂತೆ. ಆಗ ಇಲ್ಲಿನ ಶಾಂತತೆ ಹಾಗೂ ಬಾಲ ಕೃಷ್ಣನನ್ನು ಕಂಡು “ಜಗದೊದ್ದಾರನ ಆಡಿಸಿದಳೆಶೋದೆ “ ಕೀರ್ತನೆಯನ್ನು ರಚಿಸಿದ್ರು ಅಂತ ಹೇಳಲಾಗುತ್ತೆ.
ಇದನ್ನೂ ಓದಿ :ಭಕ್ತರಿಗಾಗಿ ಕಣ್ಣೀರು ಸುರಿಸ್ತಾನೆ ಆಂಜನೇಯ – ಇಲ್ಲಿ ಬಂದ್ರೆ ಕಷ್ಟವೆಲ್ಲಾ ಆಗುತ್ತೆ ನಿವಾರಣೆ
ಇನ್ನು ಇಲ್ಲಿಗೆ ಹೆಚ್ಚಿನ ಭಕ್ತರು ಬರೋದಕ್ಕೆ ಕಾರಣ ಇಲ್ಲಿರುವ ನವನೀತ ಕೃಷ್ಣ . ಇಲ್ಲಿ ಮದುವೆಯಾದ ಹಲವು ದಂಪತಿಗಳು ಆಗಮಿಸಿ ಸಂತಾನಕ್ಕಾಗಿ ಬೇಡಿಕೊಳ್ಳುತ್ತಾರೆ. ಇಲ್ಲಿನ ನವನೀತ ಕೃಷ್ಣನಿಗೆ ಬೆಣ್ಣೆ ಅಲಂಕಾರ ಮಾಡಿದ್ರೆ ಮಕ್ಕಳಾಗುತ್ತೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ದೂರದೂರುಗಳಿಂದ ಇಲ್ಲಿಗೆ ಭಕ್ತರು ಆಗಮಿಸಿ ಸೇವೆಯನ್ನು ಸಲ್ಲಿಸುತ್ತಾರೆ . ಹರಕೆ ತೀರಿದ ನಂತರ ಮಕ್ಕಳ ಸಮೇತರಾಗಿ ಬಂದು ದೇವರ ದರ್ಶನ ಪಡೆಯುತ್ತಾರೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದ ಹೊಸ ರೂಲ್ಸ್ : ಅನರ್ಹರ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದ್ಯಾ ? ಚೆಕ್ ಮಾಡಿ
ಇನ್ನು ಇಲ್ಲಿ ಗರ್ಭಗುಡಿಯಲ್ಲಿರೋದು ನವನೀತ ಕೃಷ್ಣ ನಲ್ಲ ಬದಲಾಗಿ ಅಪ್ರಮೇಯ ರೂಪದ ಕೃಷ್ಣ . ದೇವಾಲಯ ಪ್ರಂಗಣದಲ್ಲಿ ಈ ನವನೀತ ಕೃಷ್ಣನ್ನು ಸ್ಥಾಪಿಸಲಾಗಿದೆ . ಇದರ ಜೊತೆಯಲ್ಲಿ ಹನುಮಾನ್ . ಗಣೇಶ , ರಾಮಾನುಜಾಚಾರ್ಯ ವಿಗ್ರಹಗಳಿವೆ. ಆದ್ರೆ ಇಲ್ಲಿಗೆ ಭಕ್ತರು ಹೆಚ್ಚಾಗಿ ಬರೋದು ನವ ನೀತ ಕೃಷ್ಣನಲ್ಲಿ ಆರಾಧಿಸೋಕೆ. ದೇವಾಲಯಕ್ಕೆ ಬರುವ ಭಕ್ತರು ಮೊದಲು ಅಪ್ರಮೇಯ ಸ್ವಾಮಿಯ ದರ್ಶನ ಮಾಡಿ ನಂತರ ನವನಿತ ಕೃಷ್ಣ ನ ದರ್ಶನ ಪಡಿತಾರೆ.
ಇದನ್ನೂ ಓದಿ : ಒರಳು ಕಲ್ಲಿನಿಂದ ಉಕ್ಕುತ್ತೆ ಪವಾಡದ ನೀರು– ಜನರ ಕಷ್ಟಕ್ಕೆ ದಾರಿ ತೋರುತ್ತಾನೆ ಇಲ್ಲಿನ ಕಮಂಡಲ ಗಣಪತಿ ದೇವರು
ಅಂದಹಾಗೆ ಈ ಅಪರೂಪದ ದೇವಾಲಯವಿರೋದು ಕರ್ನಾಟಕದ ಗೊಂಬೆ ನಗರಿ ಅನ್ನಿಸಿಕೊಂಡಿರೋ ಚೆನ್ನಪಟ್ಟಣದಲ್ಲಿ . ಚೆನ್ನಪಟ್ಟಣದ ದೊಡ್ಡ ಮಾಲೂರಿನಲ್ಲಿ ಸ್ಥಿತನಾಗಿದ್ದಾನೆ ಕೃಷ್ಣ. ಇನ್ನು ಬೆಂಗಳೂರು ಮೈಸೂರು ಹೈವೆಯಿಂದ 200 ಮೀಟರ್ ದೂರದಲ್ಲಿದೆ ದೇವಾಲಯ .ಈ ದೇವಾಲಯ ಬೆಳಗ್ಗೆ 8 ರಿಂದ 12 ಹಾಗೂ ಸಂಜೆ 5.30 ರಿಂದ 8.30 ತೆರೆದಿರುತ್ತೆ. ಸಾಧ್ಯವಾದ್ರೆ ಒಂದು ಸಾರಿ ಭೇಟಿ ನೀಡಿ
Aprameya swamy temple Channapatna Children’s fortune if they serve butter – Purandas servants were mad at Krishna here