ಸುಂದರ ದಾಂಪತ್ಯಕ್ಕೆ ಫೆಂಗ್‌ಶೂಯಿ ಸಲಹೆ : ಜೋಡಿ ಮ್ಯಾಂಡರಿನ್ ಡಕ್ ಪ್ರತಿಮೆಗಳನ್ನು ಮನೆಯ ಈ ದಿಕ್ಕಿನಲ್ಲಿಡಿ
ವೈವಾಹಿಕ ಜೀವನದಲ್ಲಿ ಪ್ರೀತಿ, ನಂಬಿಕೆಗಳೇ ಬಹಳ ಮುಖ್ಯವಾಗಿರುತ್ತದೆ. ಕೆಲವೊಮ್ಮೆ ಉಂಟಾಗುವ ಅಪನಂಬಿಕೆಗಳು ಸುಂದರ ಸಂಸಾರವನ್ನು ಒಡೆಯುತ್ತದೆ. ಫೆಂಗ್ ಶೂಯಿ ಇದಕ್ಕೊಂದು ಪರಿಹಾರ ಹೇಳಿದೆ.

ಸುಂದರ ಕುಟುಂಬದ ಅಡಿಪಾಯ ಪ್ರೀತಿ, ವಿಶ್ವಾಸ, ನಂಬಿಕೆ ಮತ್ತು ಪರಸ್ಪರ ತಿಳುವಳಿಕೆಯಾಗಿದೆ. ಮನೆಯ ಎಲ್ಲಾ ಸದಸ್ಯರು ಇದೇ ರೀತಿ ಇದ್ದಾಗ ಮಾತ್ರ ಮನೆಯೆಂಬುದು ಸ್ವರ್ಗವಾಗುತ್ತದೆ. ಕೆಲವೊಮ್ಮೆ ಸಣ್ಣ ವಿಷಯಗಳೂ ಸಹ ಸಂಬಂಧದಲ್ಲಿ ಬಿರುಕನ್ನು ಮೂಡಿಸುತ್ತದೆ. ಅದಕ್ಕೆ ಮನೆಯಲ್ಲಿ ನೆಲೆಸಿರುವ ನಕಾರಾತ್ಮಕ ಶಕ್ತಿಗಳೇ ಕಾರಣ ಎಂದು ಫೆಂಗ್ ಶೂಯಿ ವಾಸ್ತು ಶಾಸ್ತ್ರ ಹೇಳುತ್ತದೆ. ಚೀನಿ ವಾಸ್ತು ಶಾಸ್ತ್ರವಾದ ಫೆಂಗ್ ಶೂಯಿ ನೆಮ್ಮದಿಯ ಬದುಕಿಗೆ ಕೆಲವೊಂದು ಉಪಾಯಗಳನ್ನು ಸೂಚಿಸುತ್ತದೆ. ವೈವಾಹಿಕ ಜೀವನದಲ್ಲಿ ಪ್ರೀತಿ, ನಂಬಿಕೆಗಳೇ ಬಹಳ ಮುಖ್ಯವಾಗಿರುತ್ತದೆ. ಕೆಲವೊಮ್ಮೆ ಉಂಟಾಗುವ ಅಪನಂಬಿಕೆಗಳು ಸುಂದರ ಸಂಸಾರವನ್ನು ಒಡೆಯುತ್ತದೆ. ಫೆಂಗ್ ಶೂಯಿ ಇದಕ್ಕೊಂದು ಪರಿಹಾರ ಹೇಳಿದೆ. ಅದೇನೆಂದರೆ ಮ್ಯಾಂಡರಿನ್ ಡಕ್ ಪ್ರತಿಮೆಗಳು. ಫೆಂಗ್ ಶೂಯಿಯಲ್ಲಿ ಇದನ್ನು ಸುಂದರ ಸಂಸಾರದ ಪ್ರತೀಕ ಎನ್ನಲಾಗಿದೆ. ಹಾಗಾದರೆ ಇದನ್ನು ಯಾವ ದಿಕ್ಕಿನಲ್ಲಿ ಹಾಗೂ ಎಲ್ಲಿ ಇಡಬೇಕು? ಎಂದು ತಿಳಿಯೋಣ.
ಮ್ಯಾಂಡರಿನ್ ಡಕ್ ವೈಶಿಷ್ಟ್ಯ
ಫೆಂಗ್ ಶೂಯಿ ವಾಸ್ತು ಪ್ರಕಾರ ಜೋಡಿ ಮ್ಯಾಂಡರಿನ್ ಡಕ್‌ಗಳು ನಿಜವಾದ ಪ್ರೀತಿ, ನಂಬಿಕೆ ಮತ್ತು ಸುಖ ಜೀವನದ ಸಂಕೇತವೆಂದು ಪರಿಗಣಿಸಲಾಗಿದೆ. ಇವುಗಳನ್ನು ಮನೆಯಲ್ಲಿ ಇಡುವುದರಿಂದ ಸಂಬಂಧಗಳಲ್ಲಿ ಪ್ರೀತಿ, ವಿಶ್ವಾಸ ಮತ್ತು ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.
ಎಲ್ಲಿ ಮತ್ತು ಯಾವ ದಿಕ್ಕಿನಲ್ಲಿಡಬೇಕು?
ಫೇಂಗ್‌ಶೂಯಿ ಪ್ರಕಾರ ನೈಋತ್ಯ ದಿಕ್ಕನ್ನು ಸಂಬಂಧಗಳು ಮತ್ತು ಪ್ರೀತಿಗೆ ಸಂಬಂಧಿಸಿದ ಜಾಗ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಸಾಮಾನ್ಯವಾಗಿ ಮನೆಕಟ್ಟುವಾಗ ಮಲಗುವ ಕೋಣೆಯನ್ನು ನೈಋತ್ಯ ದಿಕ್ಕಿಗೆ ಅಳವಡಿಸಲಾಗುತ್ತದೆ. ಈ ದಿಕ್ಕಿನಲ್ಲಿ ಜೋಡಿ ಮ್ಯಾಂಡರಿನ್ ಡಕ್ ಪ್ರತಿಮೆಗಳನ್ನು ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಇದು ದಾಂಪತ್ಯದಲ್ಲಿನ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡುತ್ತದೆ. ಸಂಬಂಧದಲ್ಲಿ ಸಾಮರಸ್ಯ ಹೆಚ್ಚಿಸುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುವಂತೆ ಮಾಡುತ್ತದೆ.
ಇದನ್ನೂ ಓದಿ: ಹೀಗೆ ಬಂದ ಹಣ ಹಾಗೆ ಖರ್ಚಾಗ್ತಾ ಇದ್ಯಾ? ಈ ವಾಸ್ತು ಉಪಾಯ ಅಳವಡಿಸಿಕೊಳ್ಳಿ; ನಿಮ್ಮ ಜೇಬಿನ ತುಂಬ ದುಡ್ಡೋ ದುಡ್ಡು
ಯಾವ ರೀತಿ ಮ್ಯಾಂಡರಿನ್ ಡಕ್ ಖರೀದಿಸಬೇಕು?
ಮರ, ಪ್ಲಾಸ್ಟಿಕ್, ಲೋಹ, ಸ್ಫಟಿಕ, ಸೆರಾಮಿಕ್ ಮತ್ತು ಕಲ್ಲಿನಿಂದ ತಯಾರಿಸಿದ ಮ್ಯಾಂಡರಿನ್ ಡಕ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಫೆಂಗ್ ಶೂಯಿ ಪ್ರಕಾರ, ಸ್ಫಟಿಕ, ಸೆರಾಮಿಕ್ ಮತ್ತು ನೈಸರ್ಗಿಕ ಕಲ್ಲಿನಿಂದ ಮಾಡಿದ ಮ್ಯಾಂಡರಿನ್ ಡಕ್‌ಗಳನ್ನು ಹೆಚ್ಚು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪ್ಲಾಸ್ಟಿಕ್ ಅಥವಾ ಲೋಹದ ಪ್ರತಿಮೆಗಳು ಕಡಿಮೆ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ.

