clean house like this : ಮನೆಯನ್ನು ಈ ರೀತಿ ಶುಚಿಯಾಗಿಟ್ಟುಕೊಂಡರೆ ಇರುತ್ತದೆ ಲಕ್ಷ್ಮೀಯ ಕೃಪೆ

clean house like this :ಯಾವ ಮನೆಯಲ್ಲಿ ಸ್ವಚ್ಛತೆ ಇರುತ್ತದೆಯೋ ಅಂತಹ ಮನೆಗಳಲ್ಲಿ ಲಕ್ಷ್ಮೀ ನೆಲೆಸಿರುತ್ತಾಳೆ ಎಂಬ ಮಾತು ಹಿಂದೂ ಧರ್ಮದಲ್ಲಿದೆ. ಇದೇ ಕಾರಣಕ್ಕಾಗಿಯೇ ವಾಸ್ತು ಶಾಸ್ತ್ರದಲ್ಲಿ ಮನೆಯನ್ನು ಶುಚಿಯಾಗಿಟ್ಟುಕೊಳ್ಳುವ ವಿಚಾರದಲ್ಲಿಯೂ ಸಾಕಷ್ಟು ವಾಸ್ತು ನಿಯಮಗಳನ್ನು ಮಾಡಲಾಗಿದೆ. ವಾಸ್ತು ನಿಯಮಗಳ ಪ್ರಕಾರ ಯಾರಾದರೂ ಮನೆಯಿಂದ ಹೊರಡುವ ಮೊದಲೇ ಪೊರಕೆಯಿಂದ ಮನೆಯನ್ನು ಗುಡಿಸುವುದು ಉತ್ತಮ ಎಂದು ಹೇಳಲಾಗುತ್ತದೆ. ಅದನ್ನು ಬಿಟ್ಟು ಮನೆಯ ಸದಸ್ಯರು ಹೊರಗೆ ತೆರಳುವು ವೇಳೆಗೆ ಸರಿಯಾಗಿ ಅಥವಾ ಅವರು ಮನೆಯಿಂದ ಹೊರ ಬಿದ್ದ ತಕ್ಷಣವೇ ಪೊರಕೆಯಿಂದ ಮನೆ ಗುಡಿಸುವುದು ಒಳ್ಳೆಯದಲ್ಲ. ಇವೆಲ್ಲವೂ ನಿಮ್ಮ ಮನೆಯ ಸಂಪತ್ತಿನ ಮೇಲೆ ನೇರ ಪರಿಣಾಮ ಬೀರುತ್ತವೆ. ಮನೆಯನ್ನು ಸ್ವಚ್ಛವಾಗಿಟ್ಟುಕೊಂಡಷ್ಟೂ ನಮ್ಮ ಮನಸ್ಸು , ದೇಹ, ಆರೋಗ್ಯದ ಜೊತೆಗೆ ನಮ್ಮ ಪ್ರಗತಿ ಹಾಗೂ ಆರ್ಥಿಕ ಸ್ಥಿತಿಗಳ ಮೇಲೆ ಪರಿಣಾಮ ಬೀರುತ್ತದೆ.
ಇದೇ ಕಾರಣಕ್ಕಾಗಿಯೇ ಮನೆಯ ಸ್ವಚ್ಛತೆಗೆ ಎಷ್ಟು ಪ್ರಾಮುಖ್ಯತೆ ಇದೆ ಎಂಬುದನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಮನೆಯ ಸ್ವಚ್ಛತೆ ವಿಚಾರದಲ್ಲಿ ವಾಸ್ತು ಶಾಸ್ತ್ರದಲ್ಲಿ ನೀಡಲಾದ ಈ ನಿಯಮಗಳನ್ನು ಪಾಲಿಸಿದಲ್ಲಿ ನಿಮ್ಮ ಮನೆಯಲ್ಲಿ ಎಂದಿಗೂ ಹಣದ ಕೊರತೆ ಇರುವುದಿಲ್ಲ.


ಈ ಮುಹೂರ್ತಗಳಲ್ಲಿ ಮನೆಯನ್ನು ಗುಡಿಸಬೇಡಿ :
ಬ್ರಾಹ್ಮೀ ಮುಹೂರ್ತ ಅಥವಾ ಸೂರ್ಯಾಸ್ತದ ಸಮಯದಲ್ಲಿ ಮನೆಯ ಮಹಿಳೆಯು ಎಂದಿಗೂ ಮನೆಯನ್ನು ಗುಡಿಸಬಾರದು. ಬಾಹ್ಮೀಮುಹೂರ್ತದ ಬಳಿಕ ಹಾಗೂ ಸೂರ್ಯಾಸ್ತದ ಮೊದಲು ಮನೆಯನ್ನು ಗುಡಿಸುವುದು ಉತ್ತಮ.ಅಲ್ಲದೇ ರಾತ್ರಿಯ ವೇಳೆ ಕೂಡ ತಪ್ಪಾಗಿಯೂ ಪೊರಕೆ ಬಳಕೆ ಮಾಡಬಾರದು.


ಸ್ನಾನಗೃಹ – ಶೌಚಾಲಯಗಳು ಸ್ವಚ್ಛವಾಗಿರಬೇಕು :
ಮನೆಯ ಸ್ನಾನಗೃಹ ಹಾಗೂ ಶೌಚಾಲಯಗಳನ್ನು ಸ್ವಚ್ಛವಾಗಿಡಬೇಕು. ಸ್ನಾನಗೃಹಗಳಲ್ಲಿ ಎಂದಿಗೂ ಜೇಡರ ಬಲೆಗಳನ್ನು ಕಟ್ಟಲು ಅವಕಾಶ ಮಾಡಿಕೊಡಬೇಡಿ. ಮನೆಯ ಸ್ನಾನಗೃಹ ಅಥವಾ ಶೌಚಾಲಯಗಳಲ್ಲಿ ಏನಾದರೂ ವಾಸ್ತುದೋಷಗಳಿದ್ದರೆ ಒಂದು ಮೂಲೆಯಲ್ಲಿ ಉಪ್ಪು ತುಂಬಿದ ಬಟ್ಟಲನ್ನು ಇಡಿ.


ಮನೆಯ ಮೂಲೆ ಮೂಲೆಗಳು ಸ್ವಚ್ಛವಾಗಿರಲಿ :
ನಿಮ್ಮ ಮನೆಯ ನಾಲ್ಕೂ ಮೂಲೆಗಳು ಎಂದಿಗೂ ಸ್ವಚ್ಛವಾಗಿರಲಿ . ವಿಶೇಷವಾಗಿ ಎಂದಿಗೂ ಉತ್ತರ, ಈಶಾನ್ಯ ಹಾಗೂ ಪಶ್ಚಿಮ ಮೂಲೆಗಳು ಎಂದಿಗೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಮನೆಯ ಕಸವನ್ನು ಎಂದಿಗೂ ಸಂಜೆಯ ವೇಳೆಗೆ ಹೊರಗೆಸೆಯಬೇಡಿ. ಹೀಗೆ ಮಾಡಿದರೆ ಕಸದ ಜೊತೆಯಲ್ಲಿ ಲಕ್ಷ್ಮೀಯೂ ಮನೆಯಿಂದ ಹೊರ ಹೋಗುತ್ತಾಳೆ.

if you will clean house like this there will never be a shortage of money know these important rules

ಇದನ್ನು ಓದಿ : Vaastu Tips : ಮನೆಯಲ್ಲಿ ನೆಮ್ಮದಿ ನೆಲೆಸಬೇಕು ಅಂದರೆ ಈ ರೀತಿಯ ಗಡಿಯಾರ ಮನೆಗೆ ತನ್ನಿ

Comments are closed.