Omicron 5 Case Karnataka : ರಾಜ್ಯದಲ್ಲಿ ಓಮಿಕ್ರಾನ್ ಸ್ಪೋಟ : ಮತ್ತೆ ಐವರಿಗೆ ಮಾರಣಾಂತಿಕ ಸೋಂಕು

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಮೂರನೇ ಅಲೆಯ ಭೀತಿ, ಓಮಿಕ್ರಾನ್ ಭೀತಿ ಆತಂಕ ಹೆಚ್ಚುತ್ತಿರುವಾಗಲೇ ರಾಜ್ಯದಲ್ಲಿ ಓಮಿಕ್ರಾನ್ ಸ್ಪೋಟಗೊಂಡಿದೆ. ಒಂದೇ ದಿನ ಐದು ಪ್ರಕರಣಗಳು (Omicron 5 Case Karnataka) ದಾಖಲಾಗಿವೆ. ಸ್ವತಃ ಆರೋಗ್ಯ ಸಚಿವ ಡಾ.ಸುಧಾಕರ್ ಈ ಕುರಿತು ಟ್ವೀಟ್ ಮಾಡಿದ್ದು ಮಾಹಿತಿ ನೀಡಿದ್ದಾರೆ. ಯುಕೆಯಿಂದ ಹಿಂತಿರುಗಿದ 19 ವರ್ಷದ ಪುರುಷ, ದೆಹಲಿಯಿಂದ ಆಗಮಿಸಿದ 36 ವರುಷದ ಪುರುಷ, ದೆಹಲಿಯಿಂದ ಆಗಮಿಸಿದ 70 ವರ್ಷದ ಮಹಿಳೆ ಹಾಗೂ ನೈಜಿರಿಯಾದಿಂದ ಬಂದ 52 ವರ್ಷದ ಪುರುಷ ಹಾಗೂ ಸೌತ್ ಅಫ್ರಿಕಾದಿಂದ ಬಂದ 33 ವರ್ಷದ ಪುರುಷನಿಗೆ ಓಮಿಕ್ರಾನ್ ಸೋಂಕು ತಗುಲಿದೆ.

ಕಳೆದ ಎರಡು ತಿಂಗಳಿನಿಂದ ಸಾವಿರಾರು ಜನರು ನಗರಕ್ಕೆ ಆಗಮಿಸಿದ್ದಾರೆ. ಈ ಪೈಕಿ ಹೈ ರಿಸ್ಕ್ ದೇಶಗಳಿಂದ ಆಗಮಿಸಿದವರ ಮೇಲೆ ಕಣ್ಣಿಡಲಾಗಿತ್ತು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರು ಹಂತಗಳಲ್ಲಿ ತಪಾಸಣೆಗೊಳಪಡಿಸಿ ಕೊರೋನಾ ಟೆಸ್ಟ್ ನಡೆಸಿ ಹೊರಬಿಡಲಾಗುತ್ತಿತ್ತು.ಈ ಪೈಕಿ ಕೊರೋನಾ ಸೋಂಕು ಕಂಡುಬಂದವರನ್ನು ಜಿನೋಮಿಕ್ ಸಿಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಐವರಿಗೆ ಒಮಿಕ್ರಾನ್ ಸೋಂಕು ಧೃಡಪಟ್ಟಿದೆ. ಈ ಪೈಕಿ ಇಬ್ಬರು ದೆಹಲಿಯಿಂದ ಆಗಮಿಸಿದವರಾಗಿದ್ದು ಉಳಿದವರು ಹೈರಿಸ್ಕ್ ದೇಶದಿಂದ ಬೆಂಗಳೂರಿಗೆ ಬಂದಿದ್ದರು.

ಸರ್ಕಾರದ ನಿಯಮದಂತೆ ಓಮಿಕ್ರಾನ್ ಸೋಂಕಿತರನ್ನು ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಸೋಂಕಿತರ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೇ ಈ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರು ಯಾರು, ಅವರಲ್ಲಿ ಯಾರಿಗಾದರೂ ಕೊರೋನಾ ಅಥವಾ ಓಮಿಕ್ರಾನ್ ತಗುಲಿದ್ಯಾ ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಅಲ್ಲದೇ ದೆಹಲಿಯಿಂದ ಆಗಮಿಸಿದವರಿಗೆ ಕೊರೋನಾ ಟೆಸ್ಟ್ ಕಡ್ಡಾಯವಾಗಿರಲಿಲ್ಲ. ಹೀಗಾಗಿ ಈ ಪ್ರಕರಣಗಳು ವರದಿಯಾಗಿರುವುದು ಆತಂಕಕ್ಕೆ ಕಾರಣವಾಗಿದ್ದು ದೆಹಲಿಯಿಂದ ಬಂದ ಸೋಂಕಿತರು ಎಲ್ಲೆಲ್ಲಿ ಓಡಾಡಿದ್ದಾರೋ ಎಂಬ ಸಂದೇಹ ಜನರಲ್ಲಿ ಮೂಡಿದೆ. ಆದರೆ ಕೇಸ್ ಬಗ್ಗೆ ಸರ್ಕಾರವಾಗಲಿ,ಆರೋಗ್ಯ ಸಚಿವರಾಗಲಿ ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ. ಇಂದಿನ ಐದು ಪ್ರಕರಣಗಳ ಮೂಲಕ ಒಟ್ಟು ಕರ್ನಾಟಕದಲ್ಲಿ 8 ಪ್ರಕರಣಗಳು ದಾಖಲಾದಂತಾಗಿದೆ. ಈಗಾಗಲೇ ನಗರದಲ್ಲಿ ಸರ್ಕಾರ ಓಮಿಕ್ರಾನ್ ಚಿಕಿತ್ಸೆಗಾಗಿ ಎರಡು ಸರ್ಕಾರಿ ಆಸ್ಪತ್ರೆಗಳನ್ನು ಗುರುತಿಸಿದ್ದು ಒಟ್ಟು 320 ಹಾಸಿಗೆಗಳನ್ನು ಮೀಸಲಿರಿಸಿದೆ.

ಇದನ್ನೂ ಓದಿ : ಹಳೆ ತಪ್ಪಿನಿಂದ ಪಾಠ ಕಲಿತ ಬಿಬಿಎಂಪಿ : ನಗರದಲ್ಲಿ ಓಮೈಕ್ರಾನ್ ಚಿಕಿತ್ಸೆಗೆ ಆಸ್ಪತ್ರೆಗಳು ಸಿದ್ಧ

ಇದನ್ನೂ ಓದಿ : ಬ್ರಿಟನ್​​ನಲ್ಲಿ ವರದಿಯಾಯ್ತು ಮೊದಲ ಒಮಿಕ್ರಾನ್​ ಸಾವು..!

( Omicron blast Karnataka : 5 Cases found deadly infection again)

Comments are closed.