ಶುಕ್ರ–ಗುರು ಸಂಯೋಗದಿಂದ ಗಜಲಕ್ಷ್ಮಿ ರಾಜಯೋಗ : ಈ 3 ರಾಶಿಯವರಿಗೆ ತೆರೆಯಲಿದೆ ಭಾಗ್ಯದ ಬಾಗಿಲು

ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಮತ್ತು ಶುಕ್ರ ಗ್ರಹಗಳು ಪ್ರಮುಖ ಸ್ಥಾನಗಳನ್ನು ಹೊಂದಿವೆ. ಈ ಎರಡೂ ಗ್ರಹಗಳು ಜೂನ್‌ 8 ರಂದು ಕಟಕ ರಾಶಿಯಲ್ಲಿ ಸಂಧಿಸಲಿವೆ. ಇದರಿಂದ ಗಜಲಕ್ಷ್ಮಿ ರಾಜಯೋಗವು ರೂಪುಗೊಂಡು ಈ ಮೂರು ರಾಶಿಯವರಿಗೆ ಶುಭ ಫಲಗಳನ್ನು ನೀಡಲಿವೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಲಕ್ಷ್ಮಿ ದೇವಿಯನ್ನು ಸಂಪತ್ತಿನ ಅಧಿದೇವತೆ ಎಂದು ಕರೆಯುತ್ತಾರೆ. ಗ್ರಹ ನಕ್ಷತ್ರಗಳ ಪರಿವರ್ತನೆಯಿಂದ ಸಂಪತ್ತಿನ ದೇವತೆಯು ಕೆಲವು ಪ್ರಮುಖ ರಾಜಯೋಗಗಳನ್ನು ಸೃಷ್ಟಿಸುತ್ತಾಳೆ. ಇದೇ ಬರುವ ಜೂನ್‌ ತಿಂಗಳಿನಲ್ಲಿ ಅಂತಹುದ್ದೇ ಒಂದು ರಾಜಯೋಗ ರೂಪುಗೊಳ್ಳಲಿದೆ. ಶುಕ್ರ ಗ್ರಹವು ಗುರು ಗ್ರಹದ ರಾಶಿಗೆ ಪ್ರವೇಶಿಸಲಿದೆ. ಅದರಿಂದ ಸಂಯೋಗ ಅಥವಾ ಯುತಿ ರೂಪುಗೊಂಡು ಗಜಲಕ್ಷ್ಮಿ ರಾಜಯೋಗ ಸೃಷ್ಟಿಯಾಗಲಿದೆ. ಜೂನ್‌ 2 ರಿಂದ ಗುರುವು ಕಟಕ ರಾಶಿಯಲ್ಲಿ ಸಂಚರಿಸುತ್ತಾನೆ. ಅದೇ ಸಮಯಕ್ಕೆ ಅಂದರೆ ಜೂನ್ 8 ರಂದು ಶುಕ್ರನು ಸಹ ಕಟಕ ರಾಶಿಗೆ ಪ್ರವೇಶಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಶಕ್ತಿಶಾಲಿ ರಾಜಯೋಗಗಳಲ್ಲಿ ಒಂದಾದ ಗಜಲಕ್ಷ್ಮಿ ರಾಜಯೋಗದಿಂದ ಎಲ್ಲ 12 ರಾಶಿಗಳಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಈ ರಾಜಯೋಗವು ಧನ, ವೈಭವೋಪೇತ ಜೀವನ, ಸುಖ–ಸಮೃದ್ಧಿ, ವೃತ್ತಿ ಜೀವನ ಮುಂತಾದ ಬದಲಾವಣೆಗಳನ್ನು ಮಾಡುತ್ತದೆ. ಆದರೆ ಗಜಲಕ್ಷ್ಮಿ ರಾಜಯೋಗವು ಕೆಲವು ರಾಶಿಗಳ ಮೇಲೆ ಹೆಚ್ಚಿನ ಅದೃಷ್ಟವನ್ನು ದಯಪಾಲಿಸುತ್ತದೆ. ಇದರಿಂದ ಆ ರಾಶಿಯವರ ಜೀವನದಲ್ಲಿ ಅದೃಷ್ಟದ ಹೊಳೆ ಹರಿದು ಬರುತ್ತದೆ. ಅಂತಹ ಅದೃಷ್ಟ ಪಡೆದ ರಾಶಿಗಳು ಯಾವುವು ಎಂದು ನೋಡೋಣ.

ಗಜಲಕ್ಷ್ಮಿ ರಾಜಯೋಗ ಎಂದರೇನು?
ವೈದಿಕ ಜ್ಯೋತಿಷ್ಯದಲ್ಲಿ, ಸಂಪತ್ತು, ಸಂತೋಷ ಮತ್ತು ಸಮೃದ್ಧಿಗೆ ಕಾರಣವಾದ ಗ್ರಹಗಳಾದ ಗುರು ಮತ್ತು ಶುಕ್ರ ಶುಭ ಸ್ಥಾನಗಳಲ್ಲಿ ಒಟ್ಟಿಗೆ ಬಂದಾಗ ಅಥವಾ ಪರಸ್ಪರ ದೃಷ್ಟಿಯಲ್ಲಿ ಬಂದಾಗ ಗಜಲಕ್ಷ್ಮಿ ರಾಜಯೋಗವು ರೂಪುಗೊಳ್ಳುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹವು ಜ್ಞಾನ, ಅದೃಷ್ಟ, ಸಂಪತ್ತು ಪ್ರತಿನಿಧಿಸಿದರೆ, ಶುಕ್ರವು ಭೌತಿಕ ಸಂತೋಷ, ಸಮೃದ್ಧಿ, ಪ್ರೀತಿ ಮತ್ತು ಐಷಾರಾಮಿಗಳನ್ನು ಪ್ರತಿನಿಧಿಸುತ್ತದೆ. ಈ ಎರಡು ಗ್ರಹಗಳ ಸಂಯೋಗವು ಆರ್ಥಿಕ ಬಲ, ಸಮೃದ್ಧಿ ಮತ್ತು ಜೀವನದಲ್ಲಿ ಹೆಚ್ಚಿನ ಅವಕಾಶಗಳನ್ನು ತರುತ್ತದೆ ಎಂದು ನಂಬಲಾಗಿದೆ.

ಪಂಚಾಂಗದ ಪ್ರಕಾರ, ಜೂನ್ 8 ರಂದು, ಗುರು ಮತ್ತು ಶುಕ್ರರ ಸಂಯೋಗವು ಕಟಕ ರಾಶಿಯಲ್ಲಿ ಸಂಭವಿಸಲಿದೆ. ಜ್ಯೋತಿಷ್ಯದಲ್ಲಿ ಅತ್ಯಂತ ಶುಭವೆಂದು ಪರಿಗಣಿಸಲಾದ ಗಜಲಕ್ಷ್ಮಿ ರಾಜಯೋಗವನ್ನು ಸೃಷ್ಟಿಸುತ್ತದೆ. ಈ ಯೋಗವು ಕಟಕ, ಸಿಂಹ ಮತ್ತು ಕನ್ಯಾ ರಾಶಿಗಳಲ್ಲಿ ಜನಿಸಿದವರ ಮೇಲೆ ಅತ್ಯಂತ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಈ ವ್ಯಕ್ತಿಗಳು ತಮ್ಮ ವೃತ್ತಿ ಮತ್ತು ವ್ಯವಹಾರಗಳಲ್ಲಿ ಪ್ರಗತಿಯನ್ನು ಸಾಧಿಸುತ್ತಾರೆ.

ಗಜಲಕ್ಷ್ಮಿ ರಾಜಯೋಗದಿಂದ ಅದೃಷ್ಟ ಪಡೆಯುವ ರಾಶಿಗಳು

ಕಟಕ ರಾಶಿ

ಗುರು ಮತ್ತು ಶುಕ್ರ ಗ್ರಹಗಳ ಸಂಯೋಗವು ಕಟಕ ರಾಶಿಯಲ್ಲೇ ಸಂಭವಿಸುತ್ತಿರುವುದರಿಂದ ಈ ರಾಶಿಯವರಿಗೆ ಹೆಚ್ಚು ಶುಭವಾಗಲಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಉದ್ಯೋಗಿಗಳಿಗೆ ಹೊಸ ಜವಾಬ್ದಾರಿಗಳು ಅಥವಾ ಬಡ್ತಿ ಸಿಗಬಹುದು. ವ್ಯವಹಾರದಲ್ಲಿ ಲಾಭದ ಸೂಚನೆ ದೊರೆಯುತ್ತದೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷದ ವಾತಾವರಣವಿರುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ.

ಇದನ್ನೂ ಓದಿ : ಗುರು ಸಂಚಾರ 2026: ಇನ್ನು ಕೇವಲ 5 ದಿನದ ನಂತರ ಈ 6 ರಾಶಿಯವರಿಗೆ ಬರಲಿದೆ ಅದೃಷ್ಟವೋ ಅದೃಷ್ಟ

ಸಿಂಹ ರಾಶಿ

ಸಿಂಹ ರಾಶಿಯವರಿಗೆ, ಈ ರಾಜ್ಯಯೋಗವು ವಿದೇಶ ಪ್ರವಾಸ, ಹೂಡಿಕೆಗಳು ಮತ್ತು ವೃತ್ತಿಜೀವನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಶುಭ ಫಲಿತಾಂಶಗಳನ್ನು ತರುತ್ತವೆ. ಏಕೆಂದರೆ ಈ ರಾಜ್ಯಯೋಗವು ನಿಮ್ಮ ಜಾತಕದ 12 ನೇ ಮನೆಯಲ್ಲಿ ರೂಪುಗೊಳ್ಳುತ್ತಿದೆ. ಆದ್ದರಿಂದ, ಈ ಸಮಯದಲ್ಲಿ ಹೊಸ ಆದಾಯದ ಮೂಲಗಳು ಹೊರಹೊಮ್ಮುವ ಸಾಧ್ಯತೆಯಿದೆ. ಹಳೆಯ ಹೂಡಿಕೆಯಿಂದ ಹಠಾತ್ ಆರ್ಥಿಕ ಲಾಭ ಸಿಗುವ ಸಾಧ್ಯತೆಯಿದೆ.

ಕನ್ಯಾ ರಾಶಿ

ಈ ಸಮಯದಲ್ಲಿ ಕನ್ಯಾ ರಾಶಿಯವರು ವೃತ್ತಿಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಕಾಣುತ್ತಾರೆ. ಗಜಲಕ್ಷ್ಮಿ ರಾಜ್ಯಯೋಗವು ನಿಮ್ಮ ರಾಶಿಯ ಆದಾಯ ಮತ್ತು ಲಾಭ ವಲಯದಲ್ಲಿ ರೂಪುಗೊಳ್ಳುತ್ತಿದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡುವ ಸಾಧ್ಯತೆಯಿದೆ. ಹೊಸ ಆದಾಯದ ಮೂಲಗಳು ನಿಮಗೆ ಸಿಗುತ್ತವೆ. ಉದ್ಯೋಗ ಬದಲಾವಣೆ ಮಾಡಲು ಬಯಸುವವರಿಗೆ ಉತ್ತಮ ಅವಕಾಶಗಳು ಸಿಗಬಹುದು.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories