ಕರಿಕೆ, ಕಟಪಾಡಿಗೂ ಉಂಟು ಕೋಟಿ ಚೆನ್ನಯ್ಯರ ನಂಟು !

0

ತುಳುನಾಡಿನ ಅವಳಿ ವೀರರಾದ ಕೋಟಿ -ಚೆನ್ನಯರು ಇಡೀ ಕರಾವಳಿಯಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದ ವೀರರು. ಲಕ್ಷಾಂತರ ಭಕ್ತರನ್ನು ಹೊಂದಿರುವ ಕೋಟಿ ಚೆನ್ನಯ್ಯರ ಸಂಪೂರ್ಣ ಕಥಾವಳಿಗೆ ವಿವಿಧ ಪ್ರದೇಶಗಳ ಸಂಬಂಧವಿದೆ. ಆ ಎರಡು ಪ್ರದೇಶಗಳು ಕೋಟಿ ಚೆನ್ನಯ್ಯರ ಬದುಕಿನ ಬಹುಮುಖ್ಯ ಸ್ಥಳಗಳು. ಒಂದು ಕೋಟಿ ಚೆನ್ನಯ್ಯರು ವಿದ್ಯೆ ಕಲಿತ ಕಟಪಾಡಿ, ಇನ್ನೊಂದು ಕೋಟಿ ಚೆನ್ನಯ್ಯರ ಮಾವ ಸಾಯನ ಬೈದ್ಯ ನಾಟಿ ವೈದ್ಯ ಪದ್ದತಿಯ ಚಿಕಿತ್ಸೆಯನ್ನು ಕಲಿತ ಕೇರಳದ – ಕೊಡಗಿನ ಗಡಿ ಕರಿಕೆ.

ಗೆಜ್ಜೆಗಿರಿಯಲ್ಲಿ ತನ್ನ ಮಾವ ಸಾಯನ ಬೈದ್ಯರ ಆಶ್ರಯದಲ್ಲಿ ಬೆಳೆದ ಕೋಟಿ ಚೆನ್ನಯ್ಯರನ್ನು ಯುದ್ದ ವಿದ್ಯಾಭ್ಯಾಸಕ್ಕಾಗಿ ಕಟಪಾಡಿಯ ಗರಡಿಗೆ ಕಳುಹಿಸಲಾಯಿತು. ಕೇರಳದ ಗುರುಗಳಿಂದ ಅವಳಿ ವೀರರು ಯುದ್ದ ವಿದ್ಯೆಯನ್ನು ಅಭ್ಯಾಸ ಮಾಡಿದರು. ಆ ಗರಡಿಯೇ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿಯೋ ಪಾಂಗಾಳ ಗರಡಿ.

ಇದೇ ಪಾಂಗಾಳದ ಗರಡಿಯಲ್ಲಿ ಯುದ್ದ ವಿದ್ಯೆಯನ್ನು ಕರಗತ ಮಾಡಿಕೊಂಡ ಕೋಟಿ ಚೆನ್ನಯ್ಯರು ವೀರ ಪರಾಕ್ರಮಿಗಳಾಗಿ ಮಿಂಚಿದ್ದು ಈಗ ಇತಿಹಾಸ.  ಕಟಪಾಡಿಯ ಪಾಂಗಾಳ ಗರಡಿ ಜೀರ್ಣೋದ್ದಾರಗೊಂಡಿದ್ದು, ಲಕ್ಷಾಂತರ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.

ಕೋಟಿ ಚೆನ್ನಯ್ಯರಿಗೆ ಗುರು ಸಮಾನವಾಗಿದ್ದ ಮಾವ ಸಾಯನ ಬೈದ್ಯ ನಾಟಿ ವಿದ್ಯೆಯ ಮಹಾನ್ ಪಂಡಿತರು. ಈ ತನ್ನ ನಾಟಿ ವಿದ್ಯೆಯ ಪಾಂಡಿತ್ಯವನ್ನು ತನ್ನ ತಂಗಿ ದೇಯಿ ಬೈದತಿಗೆ ಸಾಯನ ಬೈದ್ಯರು ಧಾರೆ ಎರೆದಿದ್ದರು. ಸಾಯನ ಬೈದ್ಯರು ಈ ಅಪಾರ ಪಾಂಡಿತ್ಯದ ನಾಟಿ ವಿದ್ಯೆಯನ್ನು ಕಲಿತದ್ದು ಕೇರಳದ ಗಡಿ ಕೊಡಗಿನ ಭಾಗವಾಗಿರೋ ಕರಿಕೆಯಲ್ಲಿ.

ಕರಿಕೆ ಶತಮಾನಗಳಿಂದಲೂ ನಾಟಿ ವೈದ್ಯ ಪದ್ದತಿಗೆ ಹೆಸರುವಾಸಿಯಾಗಿದೆ. ಈ ಪ್ರದೇಶದಲ್ಲಿ ಸಾಯನ ಬೈದ್ಯರು ಈ ನಾಟಿ ವೈದ್ಯ ಪದ್ದತಿಯನ್ನು ಕಲಿತಿದ್ದಾರೆ ಎಂಬುದು ಪ್ರತೀತಿ.

ಈ ರೀತಿಯ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ – ಪುತ್ತೂರಿನಲ್ಲಿ ಕರ್ಮ ಭೂಮಿಯಾಗಿಸಿದ ಕೋಟಿ ಚೆನ್ನಯ್ಯರು ವಿದ್ಯೆಯ  ಮೂಲ ಎರಡು ಜಿಲ್ಲೆಗಳು ಎಂಬುದು ಒಂದು ವಿಶೇಷ.. ಒಂದು ಕೃಷ್ಣನ ನಗರಿ ಉಡುಪಿ ಜಿಲ್ಲೆಯಾಗಿದ್ದರೆ ಇನ್ನೊಂದು ಕಾಫಿಯನಾಡು ಕೊಡಗು.

Leave A Reply

Your email address will not be published.