Krishna Janmashtami : ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ, ಮಹೂರ್ತ, ಇತಿಹಾಸ ಮತ್ತು ಮಹತ್ವ

ಹಿಂದುಗಳು ಆಚರಿಸುವ ಹಬ್ಬಗಳಲ್ಲಿ ಜನ್ಮಾಷ್ಟಮಿಯು (krishna janmashatmi) ಒಂದು. ಇದು ಕೃಷ್ಣನ ಜನ್ಮದಿನವನ್ನು ಆಚರಿಸುವ ಹಬ್ಬವಾಗಿದೆ (Festival). ಕೃಷ್ಣನನ್ನು ಬಾಲ ಗೋಪಾಲ, ಬೆಣ್ಣೆ ಕೃಷ್ಣ, ಕ್ಹಾನಾ, ಲಡ್ಡು ಗೋಪಾಲ ಹೀಗೆ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಮಹಾ ವಿಷ್ಣುವಿನ ಎಂಟನೇ ಅವರತಾರವೇ ಕೃಷ್ಣಾವತಾರ. ಈ ದಿನ ಕೃಷ್ಣನ ಭಕ್ತಾದಿಗಳು ಬಹಳ ಉತ್ಸಾಹದಿಂದ ದಿನವಿಡೀ ಉಪವಾಸವಿದ್ದು ಹಬ್ಬವನ್ನು ಆಚರಿಸುತ್ತಾರೆ.

ಕೃಷ್ಣ ಜನ್ಮಾಷ್ಟಮಿಯ ದಿನಾಂಕ :
ಪ್ರತಿವರ್ಷ ಕೃಷ್ಣ ಜನ್ಮಾಷ್ಟಮಿಯನ್ನು ಶ್ರಾವಣ ಮಾಸದ, ಕೃಷ್ಣ ಪಕ್ಷದ, ರೋಹಿಣಿ ನಕ್ಷತ್ರ, ಅಷ್ಟಮಿಯ ತಿಥಿಯಂದು ಆಚರಿಸುತ್ತಾರೆ. ಈ ವರ್ಷ ಜನ್ಮಾಷ್ಟಮಿಯು ಇದೇ ವಆಗಸ್ಟ್‌ 18 ರಂದು ರಾತ್ರಿ 9.20ಕ್ಕೆ ಪ್ರಾರಂಭವಾಗಿ, ಆಗಸ್ಟ್‌ 19 ರಂದು ರಾತ್ರಿ 10.59 ರವರೆಗೆ ಆಚರಿಸಲ್ಪಡುವುದು..

ಕೃಷ್ಣ ಜನ್ಮಾಷ್ಟಮಿಯ ಇತಿಹಾಸ :
ಮಹಾ ವಿಷ್ಣವು ತನ್ನ ಎಂಟನೇ ಅವತಾರದಲ್ಲಿ ಕೃಷ್ಣನಾಗಿ ವಸುದೇವ ಮತ್ತು ದೇವಕಿಯರ ಎಂಟನೇ ಮಗನಾಗಿ ಮಥುರಾದಲ್ಲಿ ಜನಿಸಿದನು. ಆದರೆ ಕೃಷ್ಣನು ಬೆಳೆದು ದೊಡ್ಡವನಾಗಿದ್ದು ಗೋಕುಲದಲ್ಲಿ. ಯಶೋಧಾ ಮತ್ತು ನಂದನ ಮುದ್ದಿನ ಮಗನಾಗಿ. ಕೃಷ್ಣನು ಅವನ ದುಷ್ಟ ಮಾವ ಕಂಸನನ್ನು ವಧೆ ಮಾಡುವ ಸಲುವಾಗಿಯೇ ಭೂಮಿಗೆ ಅವತರಿಸಿದವನು. ನಂತರ ಕೃಷ್ಣನು ಮಹಾಭಾರತದಲ್ಲಿ ಮಹತ್ವದ ಪಾತ್ರವಹಿಸಿದನು. ಕೌರವರನ್ನು ನಾಶ ಮಾಡಲು ಪಾಂಡವರಿಗೆ ಸಹಾಯ ಮಾಡಿ, ಭಗವದ್ಗೀತೆಯನ್ನು ಜಗತ್ತಿಗೆ ಸಾರಿದನು.

ಕೃಷ್ಣ ಜನ್ಮಾಷ್ಟಮಿಯ ಮಹತ್ವ :
ಕೃಷ್ಣ ಎಂದ ತಕ್ಷಣ ನಮಗೆಲ್ಲಾ ನೆನಪಿಗೆ ಬರುವುದು ಹಳದಿ ಬಣ್ಣದ ರೇಷ್ಮೆ ಧೋತಿ ಧರಿಸಿ, ಕೈಯಲ್ಲಿ ಕೊಳಲು ಹಿಡಿದು, ನವಿಲುಗರಿಯನ್ನು ತನ್ನ ಕೀರೀಟದಲ್ಲಿ ಧರಿಸಿರುವ ಚಿತ್ರ. ಈ ಹಬ್ಬದಲ್ಲಿ ಬಾಲ ಕೃಷ್ಣನನ್ನೇ ಪೂಜೆ ಮಾಡುತ್ತಾರೆ. ಈ ಹಬ್ಬದ ವಿಶೇಷವೆಂದರೆ ಮೊಸರಿನ ಮಡಿಕೆಗಳು. ಅಲಂಕೃತವಾದ ಮೊಸರಿನ ಮಡಿಕೆಗಳನ್ನು ಎತ್ತರದ ಜಾಗದಲ್ಲಿ ಕಟ್ಟಿ, ಅದನ್ನು ಗುಂಪು ಕಟ್ಟಿಕೊಂಡು ಒಡೆಯುವ ದೃಶ್ಯ, ಈ ಹಬ್ಬದ ಅಂದವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ : Pistachios : ಪಿಸ್ತಾ : ಲಘು ಉಪಹಾರಕ್ಕೆ ಹೀಗೆ ಒಂದು ಸಣ್ಣ ಬದಲಾವಣೆ ಮಾಡಿಕೊಳ್ಳಿ

ಇದನ್ನೂ ಓದಿ : Coorg : ಪ್ರವಾಸಕ್ಕೆ ಯೋಗ್ಯವಾದ ಕೊಡಗಿನ 5 ರಮಣೀಯ ಸ್ಥಳಗಳು

ಇದನ್ನೂ ಓದಿ : Lalbagh flower show historical record : ಐತಿಹಾಸಿಕ ದಾಖಲೆ ಬರೆದ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ಒಂದೇ ದಿನ 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ

(krishna janmashatmi date and significance)

Comments are closed.