ಹೀಗಿತ್ತು ನೋಡಿ ಗಾನ ಕೋಗಿಲೆ ಲತಾ ಮಂಗೇಶ್ಕರ್​​ ಅವರಿಗಿದ್ದ ವಜ್ರದ ವ್ಯಾಮೋಹ

ಭಾರತದ ಗಾನಕೋಗಿಲೆ ಹಾಗೂ ದೀದಿ ಎಂದೇ ದೇಶವಾಸಿಗಳಿಂದ ಕರೆಯಲ್ಪಡುತ್ತಿದ್ದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (Lata Mangeshkar bought diamond ring)​ ತಮ್ಮ ಅಭಿಮಾನಿಗಳನ್ನೆಲ್ಲ ಅಗಲಿ ಬಾರದ ಲೋಕಕ್ಕೆ ತೆರಳಿದ್ದಾರೆ. 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಲತಾ ಅವರ ಸಾವಿನ ವಾರ್ತೆ ಇಡೀ ದೇಶವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ.ತಮ್ಮ ಸುಮಧುರ ಕಂಠದ ಮೂಲಕ ವಿಶ್ವಮಟ್ಟದಲ್ಲಿ ಸದ್ದು ಮಾಡಿದ್ದ ಲತಾ ಮಂಗೇಶ್ಕರ್​​ರಿಗೆ ವಜ್ರಗಳು ಅಂದರೆ ಪಂಚಪ್ರಾಣವಾಗಿತ್ತು. ಬಾಲ್ಯದಿಂದಲೂ ಅವರು ವಜ್ರಗಳು ಅಂದರೆ ತುಂಬಾನೇ ಇಷ್ಟ ಪಡುತ್ತಿದ್ದರು. ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಮಾತನಾಡಿದ್ದ ಅವರು ಮೊದಲೆಲ್ಲ ವಜ್ರವನ್ನು ಖರೀದಿ ಮಾಡುವುದು ತಮ್ಮ ಕುಟುಂಬಕ್ಕೆ ಎಷ್ಟು ಕಷ್ಟದ ವಿಚಾರವಾಗಿತ್ತು ಎಂಬುದನ್ನು ಬಹಿರಂಗಪಡಿಸಿದ್ದರು.


ವಜ್ರಗಳ ಮೇಲಿನ ತಮ್ಮ ಮೋಹದ ಬಗ್ಗೆ ಮಾತನಾಡಿದ್ದ ಲತಾ ಮಂಗೇಶ್ಕರ್​, ನಾನು ಬಾಲ್ಯದಿಂದಲೂ ವಜ್ರಗಳ ಮೇಲೆ ಅತಿಯಾದ ಮೋಹವನ್ನು ಹೊಂದಿದ್ದೆ. ನನಗೆ ಯಾವಾಗಲು ಬೆಲೆಬಾಳುವ ವಜ್ರವನ್ನು ಧರಿಸಬೇಕು ಎಂಬ ಆಸೆಯಿತ್ತು .ಆದರೆ ನಾನು ಒಬ್ಬ ವೃತ್ತಿಪರ ಹಿನ್ನೆಲೆ ಗಾಯಕಿಯಾಗುವವರೆಗೂ ನಾನು ಆಭರಣವನ್ನು ಧರಿಸಲು ನಿರಾಕರಿಸಿದ್ದೆ. ಏಕೆಂದರೆ ನಾನು ನಿರ್ಧಾರ ಮಾಡಿಬಿಟ್ಟಿದೆ. ಆಭರಣವೆಂದು ನಾನು ಧರಿಸಿದರೆ ಅದು ವಜ್ರದ್ದೇ ಆಗಿರಬೇಕೆಂದು. ನನ್ನ ಮೊದಲ ಆದಾಯದಲ್ಲಿ ನಾನು ನನ್ನ ತಾಯಿಗೆ ಚಿನ್ನದ ಆಭರಣವನ್ನು ಖರೀದಿ ಮಾಡಿದ್ದೆ. ನನಗಾಗಿ ನಾನು ವಜ್ರದ ಉಂಗುರ ಖರೀದಿ ಮಾಡಿದ್ದೆ. ಅದೊಂದು ವಿಶೇಷವಾಗಿ ತಯಾರಿಸಲಾದ ರೂಬಿ ರಿಂಗ್​ ಆಗಿತ್ತು . ನನ್ನ ಬಳಿ ಈಗಲೂ ಆ ಉಂಗುರು ಹಾಗೆಯೇ ಇದೆ. ಅದು ನನ್ನ ಜೀವನದ ಅತ್ಯಂತ ವಿಶೇಷವಾದ ಉಂಗುರವಾಗಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.


2005ರಲ್ಲಿ ತಮ್ಮ ಆಭರಣದ ಮೇಲಿನ ಮೋಹವನ್ನು ಇನ್ನೂ ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗಿದ್ದ ಲತಾ ಮಂಗೇಶ್ಕರ್​ ಅಡೋರಾ ಎಂಬ ಭಾರತೀಯ ವಜ್ರ ರಫ್ತು ಕಂಪನಿಗೆ ವಿನ್ಯಾಸ ಕಾರ್ಯ ಆರಂಭಿಸಿದರು. ಡೈಮಂಡ್​ ಜ್ಯೂವೆಲ್ಲರಿ ಬ್ರ್ಯಾಂಡ್​ ಅಗಿದ್ದ ಅಡೋರಾ ಕಂಪನಿಯ ನಿರ್ದೇಶಕರೊಂದಿಗೆ ಟೈಅಪ್​ ಮಾಡಿಕೊಂಡಿದ್ದ ಲತಾ ಬಳಿಕ ಆಭರಣ ಕ್ಷೇತ್ರದಲ್ಲಿಯೂ ತಮ್ಮ ಸೃಜನಶೀಲ ಪ್ರತಿಭೆಯನ್ನು ಪ್ರದರ್ಶಿಸಿದರು. ಲತಾ ಮಂಗೇಶ್ಕರ್​ ವಿನ್ಯಾಸಗೊಳಿಸಿದ ವಜ್ರದ ಕಲೆಕ್ಷನ್​ಗಳ ಮೇಲೆ ಗಾಯಕಿಯ ಲೇಸರ್ ಸಹಿ ಇರುತ್ತಿತ್ತು. ಈ ಕಲೆಕ್ಷನ್​ಗಳನ್ನು ಸ್ವರಾಂಜಲಿ ಎಂದು ಕರೆಯಲಾಗುತ್ತಿತ್ತು.

ಇದನ್ನು ಓದಿ : Covid Cases Drop : ಬರೋಬ್ಬರಿ 1 ತಿಂಗಳ ಬಳಿಕ ದೇಶದಲ್ಲಿ ದೈನಂದಿನ ಕೋವಿಡ್​ ಪ್ರಕರಣದಲ್ಲಿ ಭಾರೀ ಇಳಿಕೆ

ಇದನ್ನೂ ಓದಿ : Hijab Explainer: ಹಿಜಾಬ್ ಎಂದರೇನು? ಬುರ್ಖಾ, ನಿಕಾಬ್‌ಗೂ ಹಿಜಾಬ್‌ಗೂ ಇರುವ ವ್ಯತ್ಯಾಸವೇನು?

Lata Mangeshkar bought diamond ring for self with her 1st pay cheque

Comments are closed.