ಭಾನುವಾರ, ಏಪ್ರಿಲ್ 27, 2025
HomeSpecial StoryLife Styleಮಹಿಳೆಯರು ಮೂಗು ಚುಚ್ಚಿಸಿಕೊಂಡು, ಮೂಗುತಿ ಧರಿಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ ?

ಮಹಿಳೆಯರು ಮೂಗು ಚುಚ್ಚಿಸಿಕೊಂಡು, ಮೂಗುತಿ ಧರಿಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ ?

- Advertisement -

ಭಾರತದಲ್ಲಿ ಹೆಚ್ಚಿನ ಮಹಿಳೆಯರು (Women) ಮೂಗು ಚುಚ್ಚಿಸಿಕೊಳ್ಳುತ್ತಾರೆ. ಮಹಿಳೆಯರು (Nose pin benefit) ಮೂಗು ಚುಚ್ಚಿಸಿಕೊಳ್ಳುವುದರ ಹಿಂದೆ ಸಂಪ್ರದಾಯಕ ಹಿನ್ನಲೆ ಇರುವುದು ಎಷ್ಟು ಸತ್ಯವೋ, ವೈಜ್ಞಾನಿಕವಾಗಿ ಕಾರಣವಿದೆ. ಹೆಣ್ಣು ಮಕ್ಕಳು ಮೂಗು (Nose pin) ಚುಚ್ಚಿಸಿಕೊಂಡಾಗ ಮುಖದ ಸೌಂದರ್ಯ ಕೂಡ ಹೆಚ್ಚಾಗುತ್ತದೆ. ಕೆಲವರು ತಮ್ಮ ಮುಖ ಹಾಗೂ ಮೂಗಿನ ಆಕಾರಕ್ಕೆ ತಕ್ಕಂತೆ ಮೂಗುತ್ತಿಯನ್ನು ಧರಿಸುತ್ತಾರೆ. ಸಾಮಾನ್ಯವಾಗಿ ಭಾರತೀಯ ಮಹಿಳೆಯರು ಮೂಗುತಿಯನ್ನು ಹೆಚ್ಚು ಇಷ್ಟ ಪಟ್ಟು ಚುಚ್ಚಿಸಿಕೊಳ್ಳುತ್ತಾರೆ. ಅದರಲ್ಲೂ ಕರ್ನಾಟಕದವರೂ ಹದಿಹರೆಯದ ವಯಸ್ಸಿಗೆ ತಲುಪುವ ಮೊದಲೇ ಮೂಗು ಚುಚ್ಚಿಸಿಕೊಳ್ಳುತ್ತಾರೆ. ಕೆಲವು ಮನೆಗಳಲ್ಲಿ ಸಂಪ್ರದಾಯಕ ಕಾರಣದಿಂದ ಮದುವೆಯ ಮುಂಚೆ ತಪ್ಪದೇ ಹೆಣ್ಣು ಮಕ್ಕಳಿಗೆ ಮೂಗು ಚುಚ್ಚಿಸುತ್ತಾರೆ.

ನಮ್ಮ ದೇಹವು ಮೂಳೆ, ಮಾಂಸ, ನರಗಳನ್ನು ಸೇರಿದ ಸಮೂಹವಾಗಿದೆ. ನಮ್ಮ ದೇಹದಲ್ಲಿ ಪ್ರತಿಯೊಂದು ಅಂಗ ಎಲ್ಲದರ ಸಂಪರ್ಕ ಹೊಂದಿದೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಮೂಗು ಚುಚ್ಚಿಸಿಕೊಳ್ಳುವುದು (Nose pin benefit)  ಸಂಪ್ರದಾಯ ಮಾತ್ರವಲ್ಲದೇ ಆರೋಗ್ಯಕ್ಕೂ ಕೂಡ ಹಲವಾರು ಪ್ರಯೋಜನವನ್ನು ನೀಡುತ್ತದೆ. ಯಾಕೆಂದರೆ ನಮ್ಮ ಮೂಗಿನ ನರಗಳು ನಮ್ಮ ದೇಹದ ವಿವಿಧ ಭಾಗಗಳಿಗೆ ಸಂಪರ್ಕ ಹೊಂದಿದೆ. ಹೀಗಾಗಿ ಮೂಗು ಚುಚ್ಚಿಸಿಕೊಳ್ಳುವುದರಿಂದ ಹೆಣ್ಣು ಮಕ್ಕಳ ಆರೋಗ್ಯಕ್ಕೆ ಪ್ರಯೋಜನ ಸಿಗುತ್ತದೆ. ಏನೆಲ್ಲಾ ಆರೋಗ್ಯ ಪ್ರಯೋಜನ ಸಿಗುತ್ತದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

Nose pin benefit: Do you know how many benefits women have by piercing their nose and wearing a nose pin?
Image Credit To Original Source

ಇದನ್ನೂ ಓದಿ : ಹೀಗೂ ಉಂಟೆ ! ಮುಖದ ಮೇಲಿನ ಮೊಡವೆಗಳು ಹೇಳುತ್ತವೆ ಅಚ್ಚರಿಯ ಸಂಗತಿ

ಮುಟ್ಟಿನ ಸಮಯದಲ್ಲಿ ನೋವು ನಿವಾರಣೆ :
ನಮ್ಮ ದೇಹದಲ್ಲಿ ನರವ್ಯೂಹದಿಂದ ರಚಿಸಲ್ಪಟ್ಟಿದ್ದು, ಲೆಕ್ಕಿಸಲಾದ ನರನಾಡಿಗಳು ಇದೆ. ಅದರಲ್ಲೂ ಮಹಿಳೆಯರ ಮೂಗಿನ ನರಗಳು ಸಂತಾನೋತ್ಪತ್ತಿ ಅಂಗಕ್ಕೆ ಕೊಂಡಿಯಾಗಿರುತ್ತದೆ. ಸಾಮಾನ್ಯವಾಗಿ ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ ಸಹಿಸಲಾರದಷ್ಟು ನೋವು ಇರುತ್ತದೆ. ಮೂರು ದಿನ ಕಳೆಯುವುದು ತುಂಬಾ ಕಷ್ಟ ಎನಿಸುತ್ತದೆ. ಹೀಗೆ ಮೂಗು ಚುಚ್ಚಿಸಿಕೊಳ್ಳುವ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ನೋವನ್ನು ಕೂಡ ನಿವಾರಣೆ ಮಾಡುತ್ತದೆ.

Nose pin benefit: Do you know how many benefits women have by piercing their nose and wearing a nose pin?
Image Credit To Original Source

ಇದನ್ನೂ ಓದಿ : ವಾರದಲ್ಲಿ ಒಂದು ದಿನ ಬರೀ ನೀರು ಕುಡಿದು ಉಪವಾಸ ಮಾಡಿದ್ರೆ ಏನಾಗುತ್ತೆ ಗೊತ್ತಾ ?

ಹೆರಿಗೆ ಸಮಯದಲ್ಲಿ ಕಡಿಮೆ ನೋವು ಅನುಭವಿಸುತ್ತಾರೆ :
ಮಹಿಳೆಯರು ಮೂಗು ಚುಚ್ಚಿಸಿಕೊಂಡು ಮೂಗುತಿ ಧರಿಸುವುದರಿಂದ ಹೆರಿಗೆ ಸಮಯದಲ್ಲಿ ಕಡಿಮೆ ನೋವು ಅನುಭವಿಸುತ್ತಾರೆ. ಮಹಿಳೆಯರಲ್ಲಿ ಎಡ ಮೂಗಿನ ಹೊಳ್ಳೆಯ ಅನೇಕ ನರಗಳು ಮಹಿಳೆಯರ ಸಂತಾನೋತ್ಪತ್ತಿ ಅಂಗಗಳಿಗೆ ಸಂಪರ್ಕವನ್ನು ಹೊಂದಿರುತ್ತದೆ. ಹಾಗಾಗಿ ಹೆರಿಗೆ ಸಮಯದಲ್ಲಿ ಮಹಿಳೆಯಲ್ಲಿ ಕಾಣಿಸಿಕೊಳ್ಳುವ ನೋವಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೇ ಮೂಗುತಿಯನ್ನು ವಿವಿಧ ರೀತಿಯಲ್ಲಿ ಧರಿಸುತ್ತಾರೆ. ಅದರಲ್ಲೂ ಚಿನ್ನದ ಮೂಗುತಿ ನಮ್ಮ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇದನ್ನೂ ಓದಿ : ರಾತ್ರಿ ಉಳಿದ ಅನ್ನವನ್ನು ಎಸೆಯಬೇಡಿ ! ಇದ್ರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ ?

Nose pin benefit: Do you know how many benefits women have by piercing their nose and wearing a nose pin?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular