ನೀಲಕಂಠ ಶಕ್ತಿಗೆ ಬೇಕಂತೆ ರೇವತಿ ನಕ್ಷತ್ರದಂದು ಸಾವನ್ನಪ್ಪಿದ ಗರ್ಭಿಣಿಯ ತಲೆಬುರುಡೆ..! ಭಾಗ-10

0

ಗರ್ಭಿಣಿ ಹೆಂಗಸಿನ ತಲೆಬುರುಡೆಗೆ ಅಘೋರ ನೀಲಕಂಠ ಮಂತ್ರ ಉಚ್ಚರಿಸಿ ಶಕ್ತಿ ತುಂಬಿ ತಮ್ಮ ಬಳಿಯಲ್ಲಿ ಇರಿಸಿಕೊಂಡು ಆ ಬುರುಡೆಯ ಶಕ್ತಿಯಿಂದಲೇ ಮಿಕ್ಕೆಲ್ಲ ಕಾರ್ಯಗಳನ್ನು ಸಾಧಿಸ್ತೀವಿ ಅಂತ ಕೃಷ್ಣಪ್ಪ ಬುರುಡೆ ಬಿಡೋಕೆ ಶುರು ಮಾಡಿದ್ದ.

ಹಾಗೆ ನೀಲಕಂಠ ಶಕ್ತಿ ವಶೀಕರಣಕ್ಕೆ ಮುನ್ನ ನಾಲ್ಕು ನಿಗ್ರಾಣ ಶಕ್ತಿಗಳಾದ ಅಪಸ್ಮರಿ ಶಕ್ತಿ, ತೂಸ್ಮಂಡ ಶಕ್ತಿ, ಕರ್ಣ ಮಧ್ಯಸ್ಥ ಶಕ್ತಿ, ಭಾವುಕ ಶಕ್ತಿಯಂತಹ ಒಂದೊಂದೇ ನಿಗ್ರಾಣ ಮೊದಲು ವಶಪಡಿಸಿಕೊಳ್ಳುತ್ತಾರಂತೆ. ಒಂದೊಂದು ಶಕ್ತಿಯ ವಶಕ್ಕೂ ವಿವಿಧ ರೀತಿಯಲ್ಲಿ ಪೂಜೆ ಮಾಡ್ತೀವಿ ಅಂತಾನೇ…ವಿವಿಧ ರೀತಿಯ ಮಂಡಲಗಳನ್ನು ರಚಿಸಿ ಅದಕ್ಕೆಂದೇ ಇರುವ ಮಂತ್ರಗಳ ಶಕ್ತಿಯಿಂದ ಈ ನಾಲ್ಕು ನಿಗ್ರಹ ಶಕ್ತಿಗಳನ್ನು ವಶಪಡಿಸಿಕೊಂಡಿದ್ದೀನಿ ಅಂದಿದ್ದ.
ಈ ನಾಲ್ಕು ಶಕ್ತಿಗಳನ್ನು ವಶ ಪಡಿಸಿಕೊಂಡ ನಂತರವಷ್ಟೇ ಅಘೋರ ನೀಲಕಂಠ ಶಕ್ತಿಯ ವಶೀಕರಣಕ್ಕೆ ಮಾಂತ್ರಿಕ ಮುಂದಾಗುತ್ತಾನಂತೆ.ನಿಜಕ್ಕೂ ಅಘೋರ ನೀಲಕಂಠ ಶಕ್ತಿಯಿಂದ ಪ್ರಪಂಚವನ್ನೇ ಗೆಲ್ಲೋಕೆ ಸಾಧ್ಯವಾ..? ಆ ಶಕ್ತಿಯನ್ನು ವಶಪಡಿಸಿಕೊಂಡರೆ ಭೂಮಂಡಲದಲ್ಲಿ ಏನನ್ನ ಬೇಕಾದರೂ ನಾಶಪಡಿಸುವ ಶಕ್ತಿ ನಮಗಿರುತ್ತದೆ ಅಂತ ಹೇಳೋ ಕೃಷ್ಣಪ್ಪನ ಮಾತಿನಲ್ಲಿ ಎಷ್ಟು ಸತ್ಯವಿದೆ..? ಅಂದಹಾಗೆ ಈ ನೀಲಕಂಠ ಶಕ್ತಿಯನ್ನು ನೀವು ವಶಪಡಿಸಿಕೊಂಡಿಲ್ಲವಾ..? ಅಂತ ಕೇಳಿದ್ರೆ ಅದು ಸುಲಭ ಅಲ್ಲ ಕಣ್ರೀ ಅಂತಾನೆ.

ಈ ಶಕ್ತಿಯನ್ನು ಒಲಿಸಿಕೊಳ್ಳಬೇಕು ಅಂದ್ರೆ ಕಠಿಣ ತಪಸ್ಸು ಅತಿ ಮುಖ್ಯವಂತೆ.. ಮಹಾಶಕ್ತಿಯ ಕಟ್ಟುನಿಟ್ಟಿನ ಪೂಜೆಗಳು ಅವಶ್ಯಕ ವಂತೆ…ಇನ್ನು ಆ ಬುರುಡೆ ಕಥೆ. ಹೌದು ಈ ಬುರುಡೆಯನ್ನು ಪ್ರತಿ ಅಮಾವಾಸ್ಯೆಯ ಪೂರ್ಣಿಮೆಯಲ್ಲಿ ತುಂಬಿ ಹರಿಯುವ ನದಿಯ ಬಳಿ ತೆಗೆದುಕೊಂಡು ಹೋಗಿ ಮಂಡಲ ರಚಿಸಿ ಬುರುಡೆಯನ್ನು ಹರಿಯುವ ನದಿ ನೀರಿನಲ್ಲಿ ಒಂಬತ್ತು ಬಾರಿ ಮುಳುಗಿಸಿ ಮೇಲೆತ್ತಿಕೊಂಡು ನಂತರ ಅದಕ್ಕೆ ಗಂಧ ಅರಿಶಿನ ಕುಂಕುಮ ಲೇಪಿಸಿ ಎರಡು ನಿಂಬೆಹಣ್ಣನ್ನು ಮಂತ್ರಿಸಿ ಕಣ್ಣು ಇರುವ ಜಾಗದಲ್ಲಿ ಇಡುತ್ತಾರಂತೆ. ಅಂದಹಾಗೆ ಈ ಬುರುಡೆ ಯಾವುದಪ್ಪಾ ಅಂದ್ರೆ ಅದು ಓರ್ವ ಗರ್ಭಿಣಿ ಹೆಂಗಸಿನ ಬುರ್ಡೆ ಅಂತ ಹೇಳ್ತಾನೆ. ಮಾಟದ ಶಕ್ತಿಗೆ ಮಂತ್ರದಂಡ ಹಾಗೂ ಬುರುವೆ ಅತ್ಯವಶ್ಯಕ ಅಂತಲೂ ಅಂತಾನೇ.

ಇಷ್ಟಕ್ಕೂ ಈ ಬುರುಡೆಯನ್ನು ಹೇಗೆ ಸಂಪಾದಿಸುತ್ತಾರೆ ಅಂತ ಕೇಳಿದ್ರೆ ತಾವು ವಾಸಿಸುವ ಸುತ್ತ ಹತ್ತು ಹಳ್ಳಿಯಲ್ಲಿ ಹಣದ ಆಸೆ ತೋರಿಸಿ ಬಾತ್ಮೀದಾರರನ್ನು ಇಟ್ಟುಕೊಂಡಿರುತ್ತಾರಂತೆ. ಸೂರ್ಯ ಗ್ರಹಣ ಅಥವಾ ಚಂದ್ರಗ್ರಹಣದ ದಿನವಾಗಿರಬೇಕು. ಆ ದಿನವೇ ರೇವತಿ ನಕ್ಷತ್ರವಿದ್ದು, ಆ ಸಮಯದಲ್ಲಿ ಗರ್ಭಿಣಿ ಸಾವನ್ನಪ್ಪಿರಬೇಕು…ಈ ರೀತಿ ಸಾವನ್ನಪ್ಪಿದ ಗರ್ಭಿಣಿಯ ಶವವನ್ನು ಅಮಾವಾಸ್ಯೆಯ ರಾತ್ರಿಯಂದು ಸ್ಮಶಾನಕ್ಕೆ ಹೋಗಿ ದಿಗ್ಬಂಧನ ಹಾಕಿ ಗುಂಡಿಯೊಳಗೆ ಇಳಿದು ತಲೆಯನ್ನು ತರುತ್ತಾರಂತೆ…ನಂತರ ಅದನ್ನು ನದಿಯ ತೀರಕ್ಕೆ ತಂದು ಉಗ್ರವಾದ ಪೂಜೆಗೆ ಅಣಿಯಾಗುತ್ತಾರಂತೆ. ಪೂಜೆಯ ಕ್ರಮ ಕಠಿಣ ಮತ್ತಷ್ಟೇ ಭಯಾನಕವಂತೆ. ಆ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಳಿಸ್ತೀನಿ

(ಮುಂದುವರಿಯುತ್ತದೆ..)
  • ಕೆ.ಆರ್.ಬಾಬು

Leave A Reply

Your email address will not be published.