Mystery: ಶ್ಶ್! ಇದು ದುರ್ಬಲ ಮನಸ್ಸಿನವರಿಗಲ್ಲ, ಮದುವೆ ಆದೋರನ್ನ ಕೊಲ್ಲೋ ಈಕೆ ನಿಮಗೆ ಎಲ್ಲರ ಗುಟ್ಟೂ ಹೇಳ್ತಾಳೆ!!

ಹಿಂದೂ ಧರ್ಮ ಹಿರಣ್ಯ ಗರ್ಭದ ಹಾಗೆ, ಒಂದು ಜ್ಞಾನವೆಂಬ ಅಸ್ತ್ರ ಹಿಡಿದು ಅದರ ಆಳವನ್ನು ಬಗೆಯುತ್ತಾ ಹೋದಂತೆಲ್ಲಾ ಅಪ್ಪಟ ಚಿನ್ನದಂತಹ ವಿಷಯಗಳೇ ಪ್ರಾಪ್ತಿಯಾಗುತ್ತವೆ. ಆದರೆ ಚಿನ್ನವೇ ಎಲ್ಲವೂ ಅಲ್ಲ, ಕೆಲವು ಮೌಲ್ಯಯುತವಾದರೂ ಸುಡುವ ದೀಪದಂತೆ ಜ್ಞಾನವೇ ಹೌದಾದರೂ ಮುಟ್ಟಿದರೆ ಘಾಸಿ ಖಚಿತ. ಅಂತಹುದರಲ್ಲಿ ಒಂದು ಕರ್ಣ ಪಿಶಾಚಿನಿಯ ಸಾಧನೆ!
ಎಲ್ಲೆಲ್ಲಿದೆ ಈಕೆಯ ಬಗ್ಗೆ ವಿವರ?
ಕರ್ಣ ಪಿಶಾಚಿ ಭೂತ ಡಾಮರ ತಂತ್ರ ಹಾಗೂ ಉದ್ದಾಮರೇಶ್ವರ ತಂತ್ರದಂತಹ ಪುಸ್ತಕಗಳಲ್ಲಿ ಕಂಡುಬರುತ್ತದೆ. ಈಕೆಯು ಕುಬೇರನ ಪರಿಚಾರಿಕ ಯಕ್ಷಿಣಿಯರಲ್ಲಿ ಒಬ್ಬಳು, 36 ಯಕ್ಷಿಣಿಯರಲ್ಲಿ 28ನೆಯವಳು. ಬೇತಾಳವೀರ್ಯ ಎಂಬ ಮಹರ್ಷಿಯ ಮಗಳೆಂದೂ ಕೆಲವೊಮ್ಮೆ ಹೇಳಲಾಗುತ್ತದೆ.
Silver Rate: ಸಖತ್ ಖುಷಿ ಕೊಟ್ಟ ಬೆಳ್ಳಿ, ಬೆಲೆಯಲ್ಲಿ ಭಾರೀ ಪ್ರಮಾಣದ ಇಳಿಕೆ!:https://kannada.newsnext.live/namma-bengaluru/silver-price-down-drastically-india/
ತುಂಬಾ ವಿಚಿತ್ರ ಮತ್ತು ಭಯಂಕರ ಈಕೆಯ ಸಹವಾಸ
ಈಕೆಯ ಸಾಧನೆ ತುಂಬಾ ವಿಚಿತ್ರ ಮತ್ತು ಭಯಂಕರವಾದದ್ದು. ಈಕೆಯ ಕರುಣೆ ಒದಗಿ ಬಂದರೆ ಭೂತ-ಭವಿಷ್ಯ-ವರ್ತಮಾನಗಳನ್ನು ತಿಳಿದುಕೊಳ್ಳಬಹುದು! ಅಕ್ಷರಶಃ ನೀವು ಎಲ್ಲರಿಗಿಂತ ಶಕ್ತಿಶಾಲಿ ಮನುಷ್ಯರೇ ಆಗಿಬಿಡಬಹುದು. ಆದರೆ ಆ ಒಂದೇ ಒಂದು ತಪ್ಪು ಮಾಡಿದರೆ ಕಷ್ಟ ತಪ್ಪಿದ್ದಲ್ಲ! ಹಾಗಾದರೆ ಈಕೆ ಏನು? ಹೇಗೇ? ಇವಳನ್ನು ಒಲಿಸಿಕೊಳ್ಳೋದು ಹೇಗೆ? ತಿಳಿಯೋಣ ಬನ್ನಿ.
ಸಾಧನೆಯ ಬಗೆ ಹೇಗೆ?
ಕರ್ಣ ಪಿಶಾಚಿನಿಯ ಸಾಧನೆಯನ್ನು 21 ದಿನಗಳ ಕಾಲ ಅರ್ಧರಾತ್ರಿಯಲ್ಲಿ ಸ್ಮಶಾನಸ್ಥರಾಗಿ ಮಾಡಬೇಕು. ಅದೂ ಕೂಡ ಅಮಾವಾಸ್ಯೆಯ ದಿನ. ಹಾಗೆಯೇ 21 ದಿನ ಕಾಲ ಕಪ್ಪು ಬಟ್ಟೆ ಉಟ್ಟುಕೊಂಡು ಕಪ್ಪು ಎಳ್ಳು, ಕಪ್ಪು ತಿಲಕ, ಕಪ್ಪು ದಾರ ಮತ್ತು ಕಪ್ಪು ಬಣ್ಣದ ಆಸನವನ್ನು ಬಳಸಿ ಪೂಜಿಸಬೇಕು. ಕೆಂಪು ಬಟ್ಟೆ, ತೆಂಗಿನಕಾಯಿ, ಅರಿಶಿನ, ಕುಂಕುಮ, ಜೇನುತುಪ್ಪ ಮತ್ತು ವೀಳ್ಯದೆಲೆ (ತಾಂಬೂಲ) ಜೊತೆಗೆ ಹಣ್ಣು, ದಾಸವಾಳದ ಹೂವು ಹಾಗೆಯೇ ಸುಟ್ಟ ಮೀನು, ಹೆಂಡವನ್ನೂ ಪೂಜೆಯಲ್ಲಿ ಉಪಯೋಗಿಸಬೇಕು!
ಸಾಧಕನೇ ಆಕೆಯ ಪ್ರೇಮಿ
ಸಾಧಕನು ಇಷ್ಟೆಲ್ಲಾ ಉಪಯೋಗಿಸಿಕೊಂಡು ಕರ್ಣಪಿಶಾಚಿನಿಯ ಮಂತ್ರವನ್ನು 21-41 ದಿನ ಏಕಾಂತದಲ್ಲಿ ಲಕ್ಷ ಬಾರಿ ಹೇಳಿದಾಗ ಆಕೆ ಒಲಿಯುತ್ತಾಳೆ. ಆಗ ತನ್ನ ಕೈಯಿಂದ ಮನುಷ್ಯನ ಮೂಳೆಯ ಮಾಲೆಯನ್ನು ಸಾಧಕನ ಕೊರಳಿಗೆ ಹಾಕಿ ಅವನಿಗೂ ಕೊಟ್ಟು ಪೈಶಾಚಿಕ ವಿವಾಹವಾಗುತ್ತಾಳೆ. ಅದರ ನಂತರ ನೀವು ಬೇರೆ ಯಾವುದೇ ಹೆಣ್ಣಿನ ಜೊತೆ ಕಾಮಭಾವದಿಂದ ನೋಡುವಂತಿಲ್ಲ, ಪ್ರೇಮಿಸುವಂತಿಲ್ಲ! ಕರ್ಣ ಪಿಶಾಚಿನಿ ಮಾತ್ರ ಅದಕ್ಕೆ ಒಡತಿಯಾಗಿರುತ್ತಾಳೆ. ನಿಮ್ಮ ಸಂಸಾರವೆಲ್ಲಾ ಆಕೆಯ ಜೊತೆಯೇ!
ಟಿಪಿಕಲ್ ಹೆಂಡ್ತಿ ಸ್ವಭಾವ; ಆದ್ರೆ ಭಯಂಕರ ಕೆಟ್ಟ ಪರಿಣಾಮ
ಇನ್ನೂ ಕರ್ಣ ಪಿಶಾಚಿನಿಯನ್ನು ಒಲಿಸಿಕೊಂಡ ನಂತರ ಪ್ರತೀ ವಿಷಯವನ್ನೂ ನಿಮಗೆ ತಿಳಿಸುತ್ತಾಳೆ. ಅದನ್ನು ನಿಮ್ಮ ಕಿವಿಯಲ್ಲಿ ಉಸುರಿ ಹೋಗುತ್ತಾಳೆ, ಆದರೆ ಯಾವಾಗ ನೀವು ಅವಳ ಮಾತಿಗೆ ವಿರೋಧ ಮಾಡುತ್ತಿರೋ ನಿಮಗೆ ಕಷ್ಟ ಕೊಡುತ್ತಾ ಹೋಗುತ್ತಾಳೆ.
ತಂತ್ರ ಲೋಕದ ಸ್ಟಿರಾಯ್ಡ್ ಈಕೆ
ಸಾಧಕ ಈಕೆಯನ್ನು ಯಾವ ವಿಷಯಕ್ಕೆ ಬಳಸಿಕೊಳ್ಳುತ್ತಾನೆ ಅನ್ನೋದರ ಮೇಲೆ ಆಕೆಯ ವರ್ತನೆ ನಿರ್ಧರಿತ ಸ್ವಾರ್ಥಕ್ಕೆ ಈಕೆಯನ್ನು ಬಳಸಿಕೊಂಡರೆ ಹುಚ್ಚು ಹಿಡಿಯುತ್ತದೆ. ಗುರು ಉಪದೇಶವಿಲ್ಲದೇ ಈಕೆಯ ಸಾಧನೆ ಮಾಡ ಹೋದರೆ ಪ್ರಾಣವೇ ಹೋಗುತ್ತದೆ ಅನ್ನೋದನ್ನ ಗಮನಿಸಬೇಕು. ಜ್ಯೋತಿಷ್ಯ ಭೀಷ್ಮ ಬೆಂಗಳೂರು ವೆಂಕಟ ರಾಮನ್ ಈಕೆಯ ಬಗ್ಗೆ ಅಗಾಧವಾಗಿ ತಿಳಿದುಕೊಂಡಿದ್ದರು ಎನ್ನುವ ವಿಷಯದ ಗುಲ್ಲು ತುಂಬಾ ಪ್ರಸಿದ್ಧ. ಒಟ್ಟಾರೆ ಕರ್ಣ ಪಿಶಾಚಿನಿ ತಂತ್ರ ಲೋಕದ ಸ್ಟಿರಾಯಿಡ್ ಎನ್ನಬಹುದು.



