Sushmita Sen’s father answers : ಲಲಿತ್​ ಮೋದಿ ಜೊತೆಗಿನ ಪುತ್ರಿಯ ಸಂಬಂಧದ ಬಗ್ಗೆ ಸುಶ್ಮಿತಾ ಸೇನ್​ ತಂದೆ ಸ್ಪಷ್ಟನೆ

Sushmita Sen’s father answers : ಐಪಿಎಲ್​ ಮಾಜಿ ಅಧ್ಯಕ್ಷ ಲಲಿತ್​ ಮೋದಿ ಹಾಗೂ ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್​ ನಟಿ ಸುಶ್ಮಿತಾ ಸೇನ್ ನಡುವಿನ ಸಂಬಂಧ ಇದೀಗ ಗುಟ್ಟಾಗಿ ಉಳಿದಿಲ್ಲ. ವಿದೇಶಗಳಲ್ಲಿ ಸುಶ್ಮಿತಾ ಸೇನ್ ಜೊತೆ ಎಂಜಾಯ್​ ಮಾಡಿದ ಫೋಟೋಗಳನ್ನು ಸ್ವತಃ ಲಲಿತ್​ ಮೋದಿ ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ತಾವು ಸಧ್ಯ ಡೇಟಿಂಗ್​ ಮಾಡ್ತಾ ಇದ್ದು ಶೀಘ್ರದಲ್ಲಿಯೇ ಮದುವೆ ಕೂಡ ಆಗಲಿದ್ದೇವೆ ಎಂದೂ ಹೇಳಿದ್ದಾರೆ. ಸುಶ್ಮಿತಾ ಸೇನ್​ ಹಾಗೂ ಲಲಿತ್​ ಮೋದಿ ನಡುವಿನ ಪ್ರೇಮ ಸಂಬಂಧ ವೈರಲ್​ ಆದ ಬಳಿಕ ಈ ಬಗ್ಗೆ ಸುಶ್ಮಿತಾ ಸೇನ್​ ತಂದೆ ಹಾಗೂ ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ ಶುಬೀರ್​ ಸೇನ್​​ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸುಶ್ಮಿತಾ ಹಾಗೂ ಲಲಿತ್​ ಮೋದಿ ಡೇಟಿಂಗ್​ ಮಾಡುತ್ತಿದ್ದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.


ಈ ಬೆಳವಣಿಗೆಗಳ ಬಗ್ಗೆ ನನಗೆ ಯಾವುದೇ ರೀತಿಯ ಮಾಹಿತಿ ಇರಲಿಲ್ಲ. ನಾನು ಶುಕ್ರವಾರ ಮುಂಜಾನೆಯಷ್ಟೇ ನನ್ನ ಪುತ್ರಿಯ ಜೊತೆ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದೆ. ಆದರೆ ಇದರ ಬಗ್ಗೆ ಆಕೆ ನನ್ನ ಜೊತೆ ಏನನ್ನೂ ಹೇಳಿಕೊಂಡಿಲ್ಲ. ಮಾಧ್ಯಮಗಳಲ್ಲಿ ಲಲಿತ್​ ಮೋದಿ ಮಾಡಿದ ಟ್ವೀಟ್​ಗಳು ಪ್ರಸಾರವಾದ ಬಳಿಕವೇ ನನಗೆ ಈ ಬಗ್ಗೆ ಮಾಹಿತಿ ದೊರಕಿದೆ. ಹೀಗಾಗಿ ನನಗೆ ಈ ಬೆಳವಣಿಗೆಯ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲ. ಹೀಗಾಗಿ ನಾನು ಈ ಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದು ಶುಬೀರ್ ಸೇನ್​ ಹೇಳಿದ್ದಾರೆ.


ಮಗಳ ಜೊತೆ ಫೋನ್​ನಲ್ಲಿ ನಾವು ಮಾತನಾಡುತ್ತಿರುವಾಗ ಲಲಿತ್​ ಮೋದಿ ಹೆಸರನ್ನೂ ಸುಶ್ಮಿತಾ ಪ್ರಸ್ತಾಪ ಮಾಡಲಿಲ್ಲ. ಒಂದು ವೇಳೆ ಇವೆಲ್ಲವೂ ಆಕೆಯ ಜೀವನದಲ್ಲಿ ಘಟಿಸಿದಲ್ಲಿ ನಿಜಕ್ಕೂ ಇದು ಆಕೆಯ ಜೀವನದಲ್ಲಿ ಒಂದು ಟರ್ನಿಂಗ್​ ಪಾಯಿಂಟ್​ ಎನಿಸಲಿದೆ. ಭವಿಷ್ಯದಲ್ಲಿ ಈ ಬಗ್ಗೆ ನಾನು ಖಂಡಿತವಾಗಿಯೂ ತಿಳಿದುಕೊಳ್ಳುತ್ತೇನೆ. ಆದರೆ ಈಗಂತೂ ನನಗೆ ಏನೂ ತಿಳಿದಿಲ್ಲ ಎಂದು ಶುಬೀರ್​ ಸೇನ್​ ಹೇಳಿದರು.


ಸುಮಾರು 18 ತಿಂಗಳ ಹಿಂದೆ ನಮ್ಮ ಕುಟುಂಬದ ಸಮಾರಂಭವೊಂದಕ್ಕೆ ಲಲಿತ್​ ಮೋದಿ ಆಗಮಿಸಿದ್ದರು. ಆಗ ಕೂಡ ನಮ್ಮ ಪುತ್ರಿ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಟ್ವಿಟರ್​ ಮೂಲಕವೇ ನಮಗೆ ಮಾಹಿತಿ ತಿಳಿದಿದೆ ಎಂದು ಹೇಳಿದರು. ಲಲಿತ್​ ಮೋದಿ ನಿಮಗೆ ಅಳಿಯನಾಗಿ ಒಪ್ಪಿಗೆಯಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶುಬೀರ್​ ಸೇನ್​, ಲಲಿತ್​ ಮೋದಿ ಹಾಗೂ ಸುಶ್ಮಿತಾ ನಡುವಿನ ಸಂಬಂಧದ ಬಗ್ಗೆ ತಿಳಿದುಕೊಂಡ ಬಳಿಕವಷ್ಟೇ ನಾನು ಈ ಪ್ರಶ್ನೆಗೆ ಉತ್ತರ ನೀಡಬಹುದು ಎಂದಿದ್ದಾರೆ.

ಇದನ್ನು ಓದಿ : Robin Uthappa blessed with a baby girl : ರಾಬಿನ್ ಉತ್ತಪ್ಪಗೆ ಹೆಣ್ಣು ಮಗು, 2ನೇ ಮಗುವಿಗೆ ತಂದೆಯಾದ ಕೊಡಗಿನ ವೀರ

ಇದನ್ನೂ ಓದಿ : Byndur murder case : ಮಲಯಾಳಂ ಸಿನಿಮಾ ಆಧರಿಸಿ ನಡೆದಿತ್ತು ಹತ್ಯೆಗೆ ಮಾಸ್ಟರ್​ ಪ್ಲಾನ್​

Will you accept Lalit Modi as a son-in-law Sushmita Sen’s father answers

Comments are closed.