ನರಕ ಚತುರ್ದಶಿ : ಇದು ನರಕಾಸುರನನ್ನು ಕೊಂದ ದಿನ : ಈ ದಿನ ಎಣ್ಣೆ ಸ್ನಾನ ಯಾಕೆ ಮಾಡಬೇಕು ಅಂತ ನಿಮಗೆ ಗೊತ್ತಾ ?

Deepavali Naraka Chaturdashi : ನಕರ ಚತುರ್ದಶಿ , ದೀಪಾವಳಿಯ ಆರಂಭದಲ್ಲಿ ಅಂದ್ರೆ ಮುನ್ನ ದಿನ ಆಚರಿಸಲ್ಪಡುವ ಹಬ್ಬ . ಕಿರು ದೀಪಾವಳಿ ಅಂತನೂ ಇದನ್ನು ಕರೆಯಲಾಗುತ್ತೆ. […]

Deepavali Naraka Chaturdashi : ನಕರ ಚತುರ್ದಶಿ , ದೀಪಾವಳಿಯ ಆರಂಭದಲ್ಲಿ ಅಂದ್ರೆ ಮುನ್ನ ದಿನ ಆಚರಿಸಲ್ಪಡುವ ಹಬ್ಬ . ಕಿರು ದೀಪಾವಳಿ ಅಂತನೂ ಇದನ್ನು ಕರೆಯಲಾಗುತ್ತೆ. ಇಂದಿನ ದಿನ ಕತ್ತಲಿನಿಂದ ಬೆಳಕಿನ ಕಡೆಗೆ ಜೀವನ ಸಾಗುತ್ತದೆ ಅಂತಾನೂ ನಂಬಲಾಗುತ್ತೆ. ನಂತರ ಬರುವ ದೀಪಾವಳಿ, ಬೆಳಗಿನ ಹಬ್ಬವಾಗಿ ಅರಳಲು ಮುನ್ನುಡಿ ಈ ದಿನ.

ದೀಪಾವಳಿಯ ಮುನ್ನ ದಿನವಾದ ನರಕ ಚತುರ್ದಶಿಯಂದು ಮುಂಜಾನೆ ಎದ್ದು ಎಣ್ಣೆ ಸ್ನಾನ ಮಾಡುವ ಮೂಲಕ ಹಬ್ಬವನ್ನು ಸ್ವಾಗತಿಸಲಾಗುತ್ತೆ . ಹಿರಿಯರು ಮಕ್ಕಳೆನ್ನದೇ ಎಲ್ಲರಿಗೂ ಎಣ್ಣೆಯ ಅಭ್ಯಂಗವನ್ನು ಮಾಡಿ, ಬಿಸಿಯಾದ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಈ ಆಚರಣೆಯ ಹಿನ್ನಲೆ ನಮ್ಮ ಪುರಾಣದಲ್ಲಿ ಸಿಗುತ್ತೆ.

ಹೆಸರೇ ಹೇಳುವಂತೆ ಇದು ನರಕ ಎಂಬ ರಾಕ್ಷಸನಿಗೆ ಸಂಭಂದಿಸಿದ ಹಬ್ಬ . ದ್ವಾಪರ ಯುಗದಲ್ಲಿ ನರಕ ಎಂಬ ರಾಕ್ಷಸನು ಆಳುತ್ತಿದ್ದನು . ಈತ ಸ್ವತಃ ಮಹಾವಿಷ್ಣು ಹಾಗು ಭೂಮಿತಾಯಿಯ ಪುತ್ರ ಎಂದು ನಂಬಲಾಗುತ್ತೆ.

ಮಹಾವಿಷ್ಣು ವರಾಹ ಅವತಾರವನ್ನು ತಾಳಿ ಹಿರಣ್ಯಾಕ್ಷನನ್ನು ವಧಿಸುವ ವೇಳೆ, ವರಾಹ ಸ್ವಾಮಿಯ ದೇಹದಿಂದ ಬೆವರಿನ ಹನಿಯೊಂದು ಭೂಮಿಯ ಮೇಲೆ ಬಿತ್ತಂತೆ. ಆಗ ಭೂ ಗರ್ಭದಿಂದ ನರಕಾಸುರನ ಜನ್ಮವಾಯಿತು ಅಂತ ಹೇಳಲಾಗುತ್ತೆ. ದೈವೀ ಅಂಶದಿಂದ ಬಂದಿದ್ದರೂ ತಮೋಗುಣ ಹೊಂದಿದ ಕಾರಣ ದೈತ್ಯನಾಗಿ ಬೆಳೆದಿದ್ದ..

ಮುಂದೇ ಬ್ರಹ್ಮದೇವನನ್ನು ಕುರಿತು ತಪಸ್ಸು ಮಾಡಿ, ತಂದೆ ತಾಯಿಂದ ಹೊರತು ಪಡಿಸಿ ಯಾರಿಂದಲೂ ಸಾವು ಬರದಿರದಿರಲಿ ಎಂದು ವರ ಪಡೆದಿದ್ದನಂತೆ . ವರದಿಂದ ಗರ್ವಿಷ್ಠನಾದ ನರಕ, ಭೂಲೋಕದ ಹಲವು ರಾಜರನ್ನು ಗೆದ್ದು , ಅವರ ಹದಿನಾರು ಸಾವಿರ ಪುತ್ರಿಯರನ್ನು ಹೊತ್ತು ತಂದು ಸೆರೆಯಲ್ಲಿ ಇರಿಸಿದ್ದ ಎಂದು ಭಾಗವತ ಹೇಳುತ್ತೆ.

ಮುಂದೆ ದೇವಾನುದೇವತೆಗಳ ಮನವಿ ಮೇರೆಗೆ, ಶ್ರೀಕೃಷ್ಣ ಪರಮಾತ್ಮ ಹಾಗೂ ಸತ್ಯಭಾಮ ದೇವಿಯು( ಭೂಮಿ ದೇವಿಯ ಅವತಾರ) ನರಕನ್ನು ವಧಿಸಿದರು . ಜೊತೆಗೆ ಹದಿನಾರು ಸಾವಿರ ರಾಜಕುಮಾರಿಯರನ್ನು ರಕ್ಷಿಸಿರಂತೆ .

Also Read : ದೀಪಾವಳಿ ಹಬ್ಬದ ಸಂದರ್ಭದಲ್ಲಿ ಲಕ್ಷ್ಮೀ ಕೃಪಾಕಟಾಕ್ಷ ನಿಮಗೆ ದೊರೆಯಬೇಕೆ : ಹಾಗಿದ್ದಲ್ಲಿ ಈ ವಸ್ತುಗಳನ್ನು ಮನೆಯಿಂದ ದೂರವಿರಿಸಿ

ಹೀಗೆ ಕತ್ತಲಿನಲ್ಲಿ ಕಳೆದ ಈ ಹೆಣ್ಣುಮಕ್ಕಳ ಜೀವನ ಬೆಳಕಾದ ದಿನ ಎಂದು ಈ ದಿನವನ್ನು ಆಚರಿಸಲಾಗುತ್ತದೆ. ನರಕ ಅಥವಾ ಆತನ ದುಷ್ಟತನ ಕತ್ತಲಾದರೆ ಅದನ್ನು ನೀಗಿಸಿದ ದಿನ ಬೆಳಕು. ಇದು ದುಷ್ಟತನದ ಮೇಲೆ ಜಯ ಸಾಧಿಸಿದ ಸಂಕೇತ ಅಂತ ನಂಬಲಾಗುತ್ತೆ.

ಇನ್ನು ಇಂದು ಅಭ್ಯಂಗ ಸ್ನಾನ ಮಾಡುವುದಕ್ಕೂ ಇದೇ ಹಿನ್ನಲೆ ಇದೆ. ನರಕ ಮೇಲೆ ಜಯ ಸಾಧಿಸಿದ ಕೃಷ್ಣ ದ್ವಾರಕೆಗೆ ಬಂದಾಗ ಹೆಂಗಳೆಯರೆಲ್ಲರೂ ಸೇರಿ ಕೃಷ್ಣನಿಗೆ ಎಣ್ಣೆಯ ಅಭ್ಯಂಗ ಮಾಡಿ ಸ್ನಾನ ಮಾಡಿಸಿದರಂತೆ . ಇದರಿಂದ ಕೃಷ್ಣನ ದೇಹಾಲಾಸ್ಯ ದೂರವಾಯಿತು ಅನ್ನೋ ನಂಬಿಕೆ ಇದೆ. ಇದೇ ಕಾರಣಕ್ಕೆ ಎಲ್ಲರೂ ಅಭ್ಯಂಗ ಮಾಡಿ ದೇಹಾಲಾಸ್ಯ ದೂರ ಮಾಡಿಕೊಳ್ಳುತ್ತಾರೆ.

Deepavali Naraka Chaturdashi : ನರಕಚತುರ್ಥಿ ಆಚರಣೆ ಹೇಗೆ :

ನರಕಚತುರ್ಥಿಯಂದು ಮುಂಜಾನೆಯೇ ಎದ್ದು, ಮೈಗೆಲ್ಲಾ ಎಣ್ಣೆ ಹಚ್ಚಿ ಸ್ನಾನ ಮಾಡಲಾಗುತ್ತೆ. ನಂತರ ದೇವರ ಮುಂದೆ ದೀಪ ಹಚ್ಚಿ ಇಷ್ಟವಾದ ನೈವೇದ್ಯವನ್ನು ಅರ್ಪಿಸಲಾಗುತ್ತೆ. ಜೊತೆಗೆ ಹೊಸ ಬಟ್ಟೆ ತೊಟ್ಟು ಸಂಭ್ರಮಿಸುವ ಪದ್ದತಿ ಕೂಡಾ ಇದೆ.

Also Read : Deepavali : ದೀಪಾವಳಿಗೂ ಮುನ್ನ ಮನೆಯ ಈ ದಿಕ್ಕುಗಳಲ್ಲಿ ಕೈಗೊಳ್ಳಿ ಸ್ವಚ್ಚತೆ : ಲಕ್ಷ್ಮೀ ದೇವಿಯ ವಾಸ

ನರಕಚತುರ್ಥಿಗಿದೆ ವೈಜ್ಞಾನಿಕ ಹಿನ್ನಲೆ :

ಭಾರತೀಯ ಯಾವುದೇ ಹಬ್ಬಗಳು ಸುಮ್ಮನೆ ಹಾಗೇ ಆಚರಿಸುವ ಹಬ್ಬಗಳಲ್ಲ. ಬದಲಾಗಿ ಇಲ್ಲಿ ಪ್ರತಿ ಆಚರಣೆಗೂ ವೈಜ್ಞಾನಿಕವಾಗಿ ಒಂದಲ್ಲಾ ಒಂದು ಕಾರಣವಿರುತ್ತೆ. ಕಾರ್ತಿಕ ಮಾಸ ಅಂದ್ರೆನೇ ಚಳಿಗಾಲದ ಆರಂಭದ ದಿನಗಳು.

ಈ ವೇಳೆ ಹಗಲು ಸಣ್ಣದಾಗಿದ್ದು ರಾತ್ರಿ ಹೆಚ್ಚಾಗಿರುತ್ತೆ. ಹೀಗಾಗಿ ಸಂಜೆಯಾಗುತ್ತಲೇ ದೀಪದ ಅವಶ್ಯಕತೆ ಇರುತ್ತೆ. ಹಿಂದಿನ ಕಾಲದಲ್ಲಂತು ಹಣತೆ ಹಾಗೂ ದೀಪಗಳೇ ಆಧಾರವಾಗಿತ್ತು, ಮನೆಯ ಮುಂದೆ ದೀಪಹಚ್ಚಿ ಇಡೋದ್ರಿಂದ ದಾರಿ ಹೋಕರಿಗೂ ಅನುಕೂಲವಾಗುತ್ತಿತ್ತು.

ಇನ್ನು ಅಭ್ಯಂಗ ಸ್ನಾನಕ್ಕೂ ತನ್ನದೇ ಆದ ಮಹತ್ವವಿದೆ. ಚಳಿಗಾಲ ಆರಂಭವಾಗೋದ್ರಿಂದ ದೇಹದಲ್ಲಿನ ನೈಸರ್ಗಿಕ ನೀರಿನ ಹಾಗೂ ಎಣ್ಣೆ ಅಂಶ ಆರಿ ಹೋಗಿ ಚರ್ಮ ಶುಷ್ಕವಾಗುತ್ತೆ. ಜೊತೆಗೆ ಎಲುಬಿನ ಆರೋಗ್ಯದಲ್ಲೂ ಏರುಪೇರಾಗಿ ನೋವುಗಳು ಕಾಣಿಸಿಕೊಳ್ಳುತ್ತೆ.

ನಾವು ಈ ಮಾಸದಲ್ಲಿ ಎಣ್ಣೆ ಹಚ್ಚಿಕೊಳ್ಳೋದ್ರಿಂದ ಎಲುಬು ಹಾಗು ಚರ್ಮದ ಆರೋಗ್ಯ ಹೆಚ್ಚಾಗುತ್ತೆ. ಇನ್ನು ಈ ಕಾಲದಲ್ಲಿ ಕಾಳುಗಳು ಹೆಚ್ಚಾಗಿ ಬೆಳೆಯೋದ್ರಿಂದ ಈ ಕಾಳುಗಳಲ್ಲಿ ಎಣ್ಣೆಯ ಅಂಶವಿರೋದು ನಿಮಗೆ ಗೊತ್ತೆ ಇದೆ. ಇದರ ಸೇವನೆಯಿಂದ ಸಾಕಷ್ಟು ಪೋಷಕಾಂಶಗಳು ದೇಹವನ್ನು ಸೇರುತ್ತೆ ಅಂತ ವೈದ್ಯರೂ ಹೇಳುತ್ತಾರೆ.

Scroll to Top