Deepavali: ದೀಪಾವಳಿಗೂ ಮುನ್ನ ಮನೆಯ ಈ ದಿಕ್ಕುಗಳಲ್ಲಿ ಕೈಗೊಳ್ಳಿ ಸ್ವಚ್ಛತೆ : ಲಕ್ಷ್ಮೀ ದೇವಿಯ ವಾಸ ಇಲ್ಲಿದೆ

Deepavali: ದೀಪಾವಳಿ ಹಬ್ಬವು ಹಿಂದೂ ಧರ್ಮದ ಪ್ರಮುಖ ಹಬ್ಬವಾಗಿದೆ. ಬೆಳಕಿನ ಹಬ್ಬ ಎಂದೇ ಖ್ಯಾತಿ ಪಡೆದ ದೀಪಾವಳಿ ಹಬ್ಬವು ಕತ್ತಲೆಯ ವಿರುದ್ಧ ಬೆಳಕಿನ ವಿಜಯದ ಸಂಕೇತವಾಗಿದೆ. ಅಸತ್ಯದ ವಿರುದ್ಧ ಸತ್ಯದ ಹಬ್ಬ ಎಂದೂ ಕೂಡ ಕರೆಯಲಾಗುತ್ತದೆ.

ದೀಪಾವಳಿಗೂ ಮುನ್ನ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುತ್ತಾರೆ. ಇದನ್ನು ಶುಭ ಎಂದು ಪರಿಗಣಿಸಲಾಗಿದೆ. ಏಕೆಂದರೆ ಲಕ್ಷ್ಮೀ ದೇವಿಯು ಸ್ವಚ್ಛ ಇರುವ ಮನೆಗಳಿಗೆ ಮಾತ್ರ ಬರುತ್ತಾಳೆ ಎಂಬ ನಂಬಿಕೆಯಿದೆ. ವಾಸ್ತು ಶಾಸ್ತ್ರದಲ್ಲಿ ದೀಪಾವಳಿಯ ಮುನ್ನ ಮನೆ ಸ್ವಚ್ಛಗೊಳಿಸುವ ಪ್ರಕ್ರಿಯೆಗೆ ವಿಶೇಷ ನಿಯಮಗಳನ್ನು ನೀಡಲಾಗಿದೆ.

ವಾಸ್ತು ಶಾಸ್ತ್ರದಲ್ಲಿ ದೀಪಾವಳಿಗೆಂದು ಮನೆಯ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲು ಕೆಲವು ಆಯ್ದ ದಿಕ್ಕುಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಈಶಾನ್ಯ ದಿಕ್ಕು ಅತ್ಯಂತ ಪವಿತ್ರ ದಿಕ್ಕು ಎಂದು ಪರಿಗಣಿಸಲಾಗಿದೆ. ಏಕೆಂದರೆ ಈ ದಿಕ್ಕುಗಳಲ್ಲಿ ದೇವರು ನೆಲೆಸುತ್ತಾನೆ ಎಂಬ ನಂಬಿಕೆಯಿದೆ. ಈಶಾನ್ಯ ದಿಕ್ಕುಗಳಲ್ಲಿ ಇದೇ ಕಾರಣಕ್ಕೆ ದೇವರ ಕೋಣೆಗಳಿಗೆ ಸ್ಥಾನ ನೀಡಲಾಗಿದೆ.

Also Read: ಇಂದು ಧನ್ತೇರಸ್‌, ಧನ್ವಂತರಿ ಜಯಂತಿ: ಈ ದಿನದ ಮಹತ್ವ ತಿಳಿಯಿರಿ

ಹೀಗಾಗಿ ಈಶಾನ್ಯ ದಿಕ್ಕು ಎಂದಿಗೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಏಕೆಂದರೆ ಯಾವ ಮನೆಯ ಈಶಾನ್ಯ ದಿಕ್ಕು ಕೊಳಕಾಗಿ ಇರುತ್ತದೆಯೋ ಅಂತಹ ಮನೆಯಲ್ಲಿ ಲಕ್ಷ್ಮೀ ಎಂದಿಗೂ ನೆಲೆಸುವುದಿಲ್ಲ ಎಂಬ ನಂಬಿಕೆಯಿದೆ.

ಬ್ರಹ್ಮ ಸ್ಥಾನ :

ಮನೆಯ ಮಧ್ಯ ಭಾಗವನ್ನು ವಾಸ್ತು ಶಾಸ್ತ್ರದಲ್ಲಿ ಬ್ರಹ್ಮ ಸ್ಥಾನ ಎಂದು ಕರೆಯಲಾಗುತ್ತದೆ. ದೀಪಾವಳಿಗೂ ಮುನ್ನ ಮನೆಯ ಬ್ರಹ್ಮ ಸ್ಥಾನವನ್ನು ಸಂಪೂರ್ಣ ಶುಚಿತ್ವಗೊಳಿಸಿ. ಏಕೆಂದರೆ ಯಾವ ಮನೆಯ ಬ್ರಹ್ಮ ಸ್ಥಾನ ಶುಚಿಯಾಗಿರುತ್ತದೆಯೋ ಅಂತಹ ಮನೆಗಳಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚು ನೆಲೆಸುತ್ತದೆ.

ಪೂರ್ವ ದಿಕ್ಕು :

ಮನೆಗೆ ಸೂರ್ಯನ ಮೊದಲ ಕಿರಣ ಪೂರ್ವ ದಿಕ್ಕಿನ ಮೂಲಕ ಪ್ರವೇಶಿಸುತ್ತದೆ. ಹೀಗಾಗಿ ಈ ದಿಕ್ಕನ್ನು ಸ್ವಚ್ಛಗೊಳಿಸುವುದು ಅತ್ಯಂತ ಮುಖ್ಯವಾಗಿದೆ. ದೀಪಾವಳಿಗೂ ಮುನ್ನವೇ ಪೂರ್ವ ದಿಕ್ಕಿನಲ್ಲಿರುವ ಗೋಡೆ, ಕಿಟಕಿ ಬಾಗಿಲುಗಳನ್ನು ಶುದ್ಧಗೊಳಿಸಿ. ಮನೆಯಲ್ಲಿ ಸೂರ್ಯನ ಬೆಳಕು ಪ್ರವೇಶಿಸಲು ಅವಕಾಶ ಮಾಡಿಕೊಡಿ. ಇದರಿಂದ ಮನೆಯಲ್ಲಿ ಸಕಾರಾತ್ಮಕತೆ ನೆಲೆಸುತ್ತದೆ.

Also Read: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಲಕ್ಷ್ಮೀ ಕೃಪಾಕಟಾಕ್ಷ ನಿಮಗೆ ದೊರೆಯಬೇಕೆ : ಹಾಗಿದ್ದಲ್ಲಿ ಈ ವಸ್ತುಗಳನ್ನು ಮನೆಯಿಂದ ದೂರದಲ್ಲಿರಿಸಿ

ಉತ್ತರ ದಿಕ್ಕು ( ಧನ ಹಾಗೂ ಸಮೃದ್ಧಿಯ ದಿಕ್ಕು ):

ಉತ್ತರ ದಿಕ್ಕನ್ನು ಕುಬೇರನ ದಿಕ್ಕು ಎಂದು ಕರೆಯಲಾಗುತ್ತದೆ. ಕುಬೇರನು ಸಂಪತ್ತು ಹಾಗೂ ಸಮೃದ್ಧಿಗೆ ಅಧಿಪತಿಯಾಗಿದ್ದಾನೆ. ಹೀಗಾಗಿ ದೀಪಾವಳಿಗೂ ಮುನ್ನ ಕುಬೇರನ ದಿಕ್ಕನ್ನು ಸ್ವಚ್ಛವಾಗಿಡುವುದು ಅತ್ಯಂತ ಮುಖ್ಯವಾಗಿದೆ. ಇದರಿಂದ ಮನೆಯಲ್ಲಿ ಹಣದ ಹೊಳೆ ಹರಿಯುತ್ತದೆ ಎಂಬ ನಂಬಿಕೆಯಿದೆ. ಆರ್ಥಿಕವಾಗಿ ಸ್ಥಿರತೆಯನ್ನು ಹೊಂದಲು ಸಾಧ್ಯವಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories