ನಿಟ್ಟೆ ಅಭಿಷೇಕ್‌ ಆಚಾರ್ಯ ಹನಿಟ್ರ್ಯಾಪ್‌ ಪ್ರಕರಣ : ನರ್ಸ್ ನಿರೀಕ್ಷಾ ಅರೆಸ್ಟ್‌

ಮಂಗಳೂರು : ಕಾರ್ಕಳದ ನಿಟ್ಟೆಯ ಅಭಿಷೇಕ್‌ ಆಚಾರ್ಯ ಹನಿಟ್ರ್ಯಾಪ್‌ ಪ್ರಕರಣದ ಆರೋಪಿ ನರ್ಸ್‌ ನಿರೀಕ್ಷಾಳನ್ನು ( Nurse Niriksha arrest) ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿಗಷ್ಟೆ ಕಾರ್ಕಳದ ನಿಟ್ಟೆ ಗ್ರಾಮದ ಅಭಿಷೇಕ್‌ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ್ಮಹತ್ಯೆಗೂ ಮೊದಲು ಬರೆದಿಟ್ಟ ಡೆತ್‌ನೋಟ್‌ ನಲ್ಲಿ ಆರೋಪಿ ನಿರೀಕ್ಷಾ ಸೇರಿದಂತೆ ಹಲವರ ಹೆಸರುಗಳನ್ನು ಉಲ್ಲೇಖಿಸಿದ್ದ.

ಡೆತ್‌ನೋಟ್‌ ನಲ್ಲಿ ನಿರೀಕ್ಷಾ ತನ್ನ ರೂಮಿನಲ್ಲಿದ್ದ ಇತರ ಹುಡುಗಿಯರ ಪೋಟೋ ಮತ್ತು ವಿಡಿಯೋಗಳನ್ನು ಗುಪ್ತ ಕ್ಯಾಮರಾದಲ್ಲಿ ತೆಗೆದಿಟ್ಟು ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದಾಳೆ ಎಂದು ಅಭಿಷೇಕ್‌ ಬರೆದಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಯುವತಿಯರು ಕದ್ರಿ ಠಾಣೆಗೆ ದೂರು ನೀಡಿದ್ದಾರೆ.

ನಿರೀಕ್ಷಾ ತಮ್ಮ ವಿಡಿಯೋಗಳನ್ನು ಸೆರೆ ಹಿಡಿದು ಇತರರಿಗೆ ಹಂಚಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ನರ್ಸ್‌ ಆಗಿದ್ದ ನಿರೀಕ್ಷಾಳನ್ನು ಕಂಕನಾಡಿಯ ಬಾಡಿಗೆಯ ಮನೆಯಿಂದ ಅರೆಸ್ಟ್‌ ಮಾಡಿದ್ದಾರೆ.

ಕಾರ್ಕಳದ ಅಭಿಷೇಕ್‌ ಹನಿಟ್ರ್ಯಾಪ್‌ ವಿಚಾರಕ್ಕೆ ಸಂಬಂಧಿಸಿದಂತೆ ನಿರೀಕ್ಷಾ, ರಾಕೇಶ್‌, ತಸ್ಲೀಂ ವಿರುದ್ದ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ವಿಶ್ವಕರ್ಮ ಸಮಾಜದ ಮುಖಂಡರು ಉಡುಪಿ ಎಸ್ಪಿ ಮಾತ್ರವಲ್ಲದೇ ಗೃಹ ಸಚಿವರು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ.

Nurse Niriksha arrest : 14 ದಿನಗಳ ಕಾಲ ನ್ಯಾಯಾಂಗ ಬಂಧನ

ಕದ್ರಿ ಠಾಣೆಯ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ನಿರೀಕ್ಷಾಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಸದ್ಯ ಪೊಲೀಸರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆದರೆ ಅಭಿಷೇಕ್‌ ಆಚಾರ್ಯ ಹನಿಟ್ರ್ಯಾಪ್‌ ಪ್ರಕರಣದಲ್ಲಿಯೂ ಈಕೆಯೂ ಬಂಧನಕ್ಕೆ ಒಳಗಾಗುವ ಸಾಧ್ಯತೆಯಿದೆ.

Nitte Abhishek Acharya honeytrap case: Nurse Niriksha arrest

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories