Mole Astrology: ನಮ್ಮ ದೇಹದ ಮೇಲಿರುವ ಮಚ್ಚೆಗಳು ಕೇವಲ ಚರ್ಮದ ಗುರುತುಗಳಲ್ಲ, ಅವು ನಮ್ಮ ವ್ಯಕ್ತಿತ್ವ ಮತ್ತು ಭವಿಷ್ಯದ ಬಗ್ಗೆ ಹಲವು ವಿಷಯಗಳನ್ನು ತಿಳಿಸುತ್ತವೆ ಎಂಬ ನಂಬಿಕೆ ಜ್ಯೋತಿಷ್ಯ ಶಾಸ್ತ್ರದಲ್ಲಿದೆ. ಇದನ್ನು ‘ಸಾಮುದ್ರಿಕ ಶಾಸ್ತ್ರ’ ಎಂದು ಕರೆಯಲಾಗುತ್ತದೆ. ಇದರ ಪ್ರಕಾರ ವಿವಿಧ ಭಾಗಗಳಲ್ಲಿರುವ ಮಚ್ಚೆಗಳ ಅರ್ಥ ಹೀಗಿದೆ:
- ಹಣೆಯ ಮೇಲೆ: ಹಣೆಯ ಮಧ್ಯಭಾಗದಲ್ಲಿ ಮಚ್ಚೆಯಿದ್ದರೆ ಜಾಣ್ಮೆ ಮತ್ತು ಶಾಂತ ಸ್ವಭಾವವನ್ನು ಸೂಚಿಸುತ್ತದೆ. ಬಲಬದಿಯಲ್ಲಿದ್ದರೆ ಸಂಪತ್ತು, ಎಡಬದಿಯಲ್ಲಿದ್ದರೆ ಸ್ವಲ್ಪ ಸ್ವಾರ್ಥ ಮನೋಭಾವವಿರಬಹುದು.
- ಕಣ್ಣು ಮತ್ತು ಹುಬ್ಬು: ಹುಬ್ಬಿನ ಮಧ್ಯಭಾಗದಲ್ಲಿ ಮಚ್ಚೆಯಿದ್ದರೆ ನಾಯಕತ್ವದ ಗುಣವಿರುತ್ತದೆ. ಬಲಗಣ್ಣಿನ ಮೇಲಿದ್ದರೆ ಪ್ರಾಮಾಣಿಕತೆ, ಎಡಗಣ್ಣಿನ ಮೇಲಿದ್ದರೆ ನಕಾರಾತ್ಮಕ ಚಿಂತನೆಗಳನ್ನು ಇದು ಸೂಚಿಸುತ್ತದೆ.
- ಮೂಗು: ಮೂಗಿನ ತುದಿಯಲ್ಲಿ ಮಚ್ಚೆಯಿದ್ದರೆ ಮುಂಗೋಪಿ ಹಾಗೂ ಯೋಚಿಸದೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಮೂಗಿನ ಬಲಬದಿಯ ಮಚ್ಚೆ ಸುಲಭವಾಗಿ ಹಣ ಬರುವುದನ್ನು ಸೂಚಿಸುತ್ತದೆ.
- ಕೆನ್ನೆ ಮತ್ತು ಕಿವಿ: ಬಲ ಕೆನ್ನೆಯ ಮಚ್ಚೆ ಆರ್ಥಿಕ ಜಾಣ್ಮೆಯನ್ನು ತೋರಿಸಿದರೆ, ಎಡ ಕೆನ್ನೆಯ ಮಚ್ಚೆ ಖರ್ಚು ಮಾಡುವ ಸ್ವಭಾವವನ್ನು ತೋರಿಸುತ್ತದೆ. ಕಿವಿಯ ಮೇಲಿರುವ ಮಚ್ಚೆ ಐಷಾರಾಮಿ ಜೀವನದ ಸಂಕೇತ.
- ತುಟಿ ಮತ್ತು ನಾಲಿಗೆ: ಕೆಳತುಟಿಯ ಮಚ್ಚೆ ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡುತ್ತದೆ. ನಾಲಿಗೆಯ ತುದಿಯಲ್ಲಿ ಮಚ್ಚೆಯಿದ್ದರೆ ಅವರು ಮಾತಿನಲ್ಲಿ ಚತುರರು ಮತ್ತು ರಾಜತಾಂತ್ರಿಕ ಗುಣವುಳ್ಳವರು.
- ಕುತ್ತಿಗೆ ಮತ್ತು ಭುಜ: ಕುತ್ತಿಗೆಯ ಮುಂಭಾಗದ ಮಚ್ಚೆ ಅದೃಷ್ಟ ಮತ್ತು ಕಲಾತ್ಮಕ ಆಸಕ್ತಿಯನ್ನು ತೋರಿಸುತ್ತದೆ. ಬಲ ಭುಜದ ಮೇಲಿದ್ದರೆ ಧೈರ್ಯವಂತರು, ಎಡ ಭುಜದ ಮೇಲಿದ್ದರೆ ಹಠಮಾರಿ ಸ್ವಭಾವವಿರುತ್ತದೆ.
- ಕೈ ಮತ್ತು ಪಾದಗಳು: ಅಂಗೈಯ ಮಚ್ಚೆ ಜೀವನದ ಸವಾಲುಗಳನ್ನು ಸೂಚಿಸಿದರೆ, ಮಣಿಕಟ್ಟಿನ ಮಚ್ಚೆ ಸೃಜನಶೀಲತೆಯನ್ನು ತೋರಿಸುತ್ತದೆ. ಬಲ ಪಾದದ ಮಚ್ಚೆ ಸುಖಮಯ ವೈವಾಹಿಕ ಜೀವನದ ಸಂಕೇತವಾಗಿದೆ.
ಫ್ಲೈಟ್ ಮೋಡ್‌ನಲ್ಲಿ ಫೋನ್ ವೇಗವಾಗಿ ಚಾರ್ಜ್ ಆಗುತ್ತದೆಯೇ? ಇಲ್ಲಿದೆ ಅಸಲಿ ಸತ್ಯ!
ಗಮನಿಸಿ: ಇವುಗಳು ಕೇವಲ ಸಾಮುದ್ರಿಕ ಶಾಸ್ತ್ರ ಅಥವಾ ಜ್ಯೋತಿಷ್ಯದ ನಂಬಿಕೆಗಳಾಗಿದ್ದು, ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಮಚ್ಚೆಗಳ ಗಾತ್ರ ಅಥವಾ ಬಣ್ಣದಲ್ಲಿ ಹಠಾತ್ ಬದಲಾವಣೆಯಾದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.


