ಸಿಎಂ ಪುತ್ರ ಯತೀಂದ್ರ ಹಸ್ತಕ್ಷೇಪಕ್ಕೆ ವಿರೋಧ : ಕಾಂಗ್ರೆಸ್‌ ಪಕ್ಷದಲ್ಲಿ ಶುರುವಾಯ್ತು ಕಂಪನ

Karnataka CM Siddaramaiah : ಬೆಂಗಳೂರು : ಕರ್ನಾಟಕದ ಕಾಂಗ್ರೆಸ್‌ ಸರಕಾರದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ಜೋರಾಗಿದೆ. ಸಿಎಂ ಪಟ್ಟಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ನಡುವೆ ಪೈಪೋಟಿ ನಡೆಯುತ್ತಿದೆ. ಈ ನಡುವಲ್ಲೇ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪಕ್ಕೆ ಕೈ ನಾಯಕರು ಮುನಿಸಿಕೊಂಡಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯ ಅವರು ಅತ್ಯಾಪ್ತರಾಗಿರುವ ಸಚಿವ ಕೆಜೆ ಜಾರ್ಜ್‌ ಕೂಡ ರಾಜೀನಾಮೆಗೆ ಮುಂದಾಗಿದ್ದರು. ಇದೀಗ ಕಾಂಗ್ರೆಸ್‌ನ ಮತ್ತೋರ್ವ ಶಾಸಕ ತನ್ವೀರ್‌ ಸೇಠ್‌ ಕೂಡ ಯತೀಂದ್ರ ವಿರುದ್ದ ಮುನಿಸಿಕೊಂಡಿದ್ದಾರೆ. ನರಸಿಂಹರಾಜ ಕ್ಷೇತ್ರದ ಶಾಸಕರಾಗಿರುವ ತನ್ವೀರ್‌ ಸೇಠ್‌ ಬಹಿರಂಗವಾಗಿಯೇ ಯತೀಂದ್ರ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ.

ಇದನ್ನೂ ಓದಿ : Bahubhai Prajapati : 20 ರೂಪಾಯಿ ಲಂಚಕ್ಕೆ 30 ವರ್ಷಕಾಲ ಶಿಕ್ಷೆ : ನಿರಪರಾಧಿ ತೀರ್ಪಿನ ಬೆನ್ನಲ್ಲೇ ಕಾನ್‌ಸ್ಟೇಬಲ್‌ಗೆ ಹೃದಯಾಘಾತ

ತನ್ನ ಕ್ಷೇತ್ರದಲ್ಲಿರುವ ಅಧಿಕಾರಿಗಳು ಶಾಸಕರ ಮಾತುಗಳನ್ನು ಕೇಳುತ್ತಿಲ್ಲ. ಶಂಖದಿಂದ ಮಾತ್ರವೇ ಕೇಳ್ತಾ ಇದ್ದಾರೆ ಅನ್ನೋ ಮಾತನ್ನು ಸ್ವತಃ ತನ್ವೀರ್‌ ಸೇಠ್‌ ಹೇಳಿಕೊಂಡಿದ್ದಾರೆ. ಮೈಸೂರಿನಲ್ಲಿ ಪೊಲೀಸ್‌ ಠಾಣೆಯ ಉದ್ಘಾಟನೆಯ ಸಂದರ್ಭದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್‌ ಅವರನ್ನು ಸಮ್ಮುಖದಲ್ಲಿಯೇ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Shivamogga Air Quality :ಶಿವಮೊಗ್ಗದಲ್ಲಿ ಏರ್‌ ಕ್ವಾಲಿಟಿ ದಿಢೀರ್‌ ಕುಸಿತ : ಕರಾವಳಿಯಲ್ಲಿಯೂ ಮುಂದುವರಿದ ಆತಂಕ

ಕರ್ನಾಟಕದಲ್ಲಿ ಸಿಎಂ ಬದಲಾವಣೆ ಆಗೋದಿಲ್ಲ, ತನ್ನ ತಂದೆಯೇ ಐದು ವರ್ಷ ಸಿಎಂ ಆಗಿ ಇರ್ತಾರೆ ಅನ್ನೋ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಇದೀಗ ಕಾಂಗ್ರೆಸ್‌ ನಾಯಕರನ್ನು ಕೆರಳಿಸಿದೆ. ಕಾಂಗ್ರೆಸ್‌ ನಾಯಕರಾದ ದಿನೇಶ್‌ ಗುಂಡೂರಾವ್‌, ಜಿ.ಪರಮೇಶ್ವರ್‌, ಎಂಬಿ ಪಾಟೀಲ್‌ ಸೇರಿದಂತೆ ಹಲವು ನಾಯಕರು ಪರೋಕ್ಷವಾಗಿ ನಾಯಕತ್ವ ಬದಲಾವಣೆ ಪರ ಬ್ಯಾಟಿಂಗ್‌ ನಡೆಸಿದ್ದಾರೆ.

Opposition to Karnataka CM Siddaramaiah son Yathindra intervention Tremors begin in Congress party Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories