ಇಂದಿನಿಂದ ಇಂಡೋ ಆಸಿಸ್ ಕದನ ರಾಹುಲ್, ಧವನ್ ಗೆ ಸ್ಥಾನಬಿಟ್ಟುಕೊಟ್ಟ ಕೊಯ್ಲಿ

0

ಮುಂಬೈ: ಶ್ರೀಲಂಕಾ ವಿರುದ್ದ ಸರಣಿಯ ಬೆನ್ನಲ್ಲೇ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ದ ಸರಣಿಗೆ ಸಜ್ಜಾಗಿದೆ. ಇಂದಿನಿಂದ ಆಸ್ಪ್ತ್ರೇಲಿಯಾ ವಿರುದ್ದದ ಏಕದಿನ ಸರಣಿ ಆರಂಭಗೊಳ್ಳಲಿದೆ. ಭರ್ಜರಿ ಫಾರ್ಮ್ ನಲ್ಲಿರೋ ಕೆ.ಎಲ್.ರಾಹುಲ್ ಹಾಗೂ ಶಿಖರ್ ಧವನ್ ಗಾಗಿ ನಾಯಕ ಕೊಯ್ಲಿ ತನ್ನ ಸ್ಥಾನ ತೊರೆಯುವುದು ಖಚಿತವಾಗಿದೆ.

ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಂ ಇಂಡಿಯಾ ಆಡಲಿದ್ದು, ತಂಡದಲ್ಲಿ ಕೆಎಲ್ ರಾಹುಲ್, ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಸ್ಥಾನಪಡೆದಿದ್ದಾರೆ. ಇನ್ನು ರೋಹಿತ್ ಶರ್ಮಾ ತಂಡಕ್ಕೆ ವಾಪಸ್ ಆಗಿರುವುದರಿಂದ ಆರಂಭಿಕ ಬ್ಯಾಟ್ಸ್ ಮನ್ ಸ್ಥಾನಕ್ಕೆ ಶಿಖರ್ ಧವನ್ ಮತ್ತು ಕೆಎಲ್ ರಾಹುಲ್ ನಡುವೆ ಪೈಪೋಟಿ ಶುರುವಾಗಿದೆ. ಟೀಂ ಇಂಡಿಯಾದ ಆರಂಭಿಕರಾದ ಕೆಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವುದರಿಂದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಬದಲಿಸಿಕೊಂಡಿದ್ದಾರೆ. ಈ ಗೊಂದಲ ನಿವಾರಣೆಗೆ ನಾಯಕ ಕೊಹ್ಲಿ ಪರಿಹಾರವೊಂದನ್ನು ಕಂಡುಕೊಂಡಿದ್ದು ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನೇ ಬದಲಿಸಿಕೊಂಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದ ಕೊಹ್ಲಿ ಇದೀಗ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದು ಕೆಎಲ್ ರಾಹುಲ್ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ.
ಶ್ರೀಲಂಕಾ ಸರಣಿಯನ್ನು ಕೈವಶ ಮಾಡಿಕೊಂಡಿರೋ ವಿರಾಟ್ ಕೊಯ್ಲಿ ನಾಯಕತ್ವದ ಟೀಂ ಇಂಡಿಯಾ ಗೆಲುವಿನ ಭರವಸೆಯಲ್ಲಿದೆ. ವಿಶ್ವಕಪ್ ಬಳಿಯ ಆಸ್ಟ್ರೇಲಿಯಾ ವಿರುದ್ದ ಆಡಿದ್ದ ನಾಲ್ಕು ಪಂದ್ಯಗಳ ಪೈಕಿ ಭಾರತ ಕೇವಲ 1 ಪಂದ್ಯವನ್ನಷ್ಟೇ ಗೆದ್ದುಕೊಂಡಿದೆ. ಇಂದು ಮುಂಬೈನಲ್ಲಿ ನಡೆಯಲಿರೋ ಪಂದ್ಯದಲ್ಲಿ ರನ್ ಹೊಳೆ ಹರಿಯೋ ನಿರೀಕ್ಷೆಯಿದೆ.

Leave A Reply

Your email address will not be published.