AB de Villiers for RCB in IPL 2024 : ಎಬಿಡಿ… ಈ ಹೆಸರು ಕೇಳಿದ್ರೆ ಸಾಕು ಐಪಿಎಲ್ ಪ್ರಿಯರಿಗೆ ನೆನಪಾಗೋದು ಆರ್‌ಸಿಬಿ (RCB) ತಂಡ. ಹಲವು ವರ್ಷಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League ) ನಲ್ಲಿ ಪ್ರತಿನಿಧಿಸಿರುವ ಎಬಿ ಡಿವಿಲಿಯರ್ಸ್ (AB De Villiers) ಮತ್ತೆ ತಂಡವನ್ನು ಸೇರ್ಪಡೆ ಆಗುವ ಸಾಧ್ಯತೆಯಿದೆ. ಈ ಕುರಿತು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಎಬಿಡಿಗೆ ಭರ್ಜರಿ ಆಫರ್ ಕೊಟ್ಟಿದ್ದಾರೆ.

ಕೆಲವೇ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲಿದೆ. ಈಗಾಗಲೇ ಐಪಿಎಲ್‌ನ ಹತ್ತು ತಂಡಗಳು ತರಬೇತಿಯನ್ನು ಆರಂಭಿಸಿವೆ. ಇದುವರೆಗೂ ಐಪಿಎಲ್ ಟ್ರೋಫಿ ಜಯಿಸದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಈ ಬಾರಿ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಈ ನಡುವಲ್ಲೇ ಸ್ಪೋಟಕ ಆಟಗಾರ ಎಬಿ ಡಿವಿಲಿಯರ್ಸ್ ತಂಡಕ್ಕೆ ಸೇರ್ಪಡೆ ಆಗುವ ಸಾಧ್ಯತೆಯಿದೆ.
ಎಬಿ ಡಿವಿಲಿಯರ್ಸ್ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 156 ಪಂದ್ಯಗಳನ್ನು ಆಡಿದ್ದಾರೆ. ಈ ಬಾರಿ ಎಬಿ ಡಿವಿಲಿಯರ್ಸ್ ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮರಳಬಹುದು. ದಕ್ಷಿಣ ಆಫ್ರಿಕಾದ ಮಾಜಿ ನಾಯಕನಿಗೆ ಆಪ್ತ ಗೆಳೆಯ ವಿರಾಟ್ ಕೊಹ್ಲಿ ಆರ್‌ಸಿಬಿ ಸೇರುವಂತೆ ಆಫರ್ ಕೊಟ್ಟಿದ್ದಾರೆ. ಎಲ್ಲವೂ ಎಣಿಕೆಯಂತೆ ನಡೆದ್ರೆ ಎಬಿಡಿ ಐಪಿಎಲ್ 2024ರ ಮೊದಲೇ ಆರ್‌ಸಿಬಿ ತಂಡ ಸೇರಿಕೊಳ್ಳಲಿದ್ದಾರೆ.
ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಅಷ್ಟಕ್ಕೂ ಎಬಿಡಿ ಆರ್‌ಸಿಬಿ ಸೇರ್ಪಡೆ ಆಗ್ತಾ ಇರೋದು ಆಟಗಾರನಾಗಿ ಅಲ್ಲ. ಬದಲಾಗಿ ಕೋಚ್ ಆಗಿದೆ. ಹೌದು, ಮೆಂಟರ್ ಆಗಿ ನೇಮಕವಾಗುವ ಸಾಧ್ಯತೆಯೂ ಇದೆ. ಆರಂಭದಲ್ಲಿ ಎಬಿ ಡಿವಿಲಿಯರ್ಸ್ ಬ್ಯಾಟಿಂಕ್ ಕೋಚ್ ಆಗಿ ಕೆಲಸ ಮಾಡಲಿದ್ದಾರೆ. ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.

ಒಂದೊಮ್ಮೆ ಆರ್‌ಸಿಬಿ ಸೇರ್ಪಡೆ ಆದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಕೋಚ್ ಆಂಡಿ ಫ್ಲವರ್ ಅವರ ಜೊತೆ ಸೇರಿ ಬ್ಯಾಟ್ಸ್‌ಮನ್ ಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಆದರೆ ಸದ್ಯ ಎಬಿಡಿ ಕಾಮೆಂಟರಿ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ನಾನು ಐಪಿಎಲ್‌ನ ಮೊದಲ ಕೆಲವು ವಾರ ಮುಂಬೈನಲ್ಲಿ ಇರಲಿದ್ದೇನೆ. ನಾನು ಸ್ವಲ್ಪ ಕಾಮೆಂಟರಿ ಮಾಡುತ್ತಿದ್ದೇನೆ ಆದ್ದರಿಂದ ನಮ್ಮ ಲೈವ್ ಸ್ಟ್ರೀಮ್‌ಗಳನ್ನು ವೀಕ್ಷಿಸಿ ಎಂದಿದ್ದಾರೆ.
ಆರ್‌ಸಿಬಿ ತಂಡ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಅವರು ಯಾವಾಗ ಆರ್‌ಸಿಬಿ ಸೇರ್ತಾರೆ ಅನ್ನೋದು ಅಭಿಮಾನಿಗಳ ಕಾತರವಾಗಿದೆ. ವಿರಾಟ್ ಕೊಹ್ಲಿ ಅವರು ಮಗ ಅಕಾಯ್ ಆರೈಕೆಯಲ್ಲಿದ್ದಾರೆ. ಇದೇ ಕಾರಣದಿಂದಾಗಿಯೇ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಕೆಲವು ಸಮಯಗಳಿಂದಲೂ ವಿರಾಮ ಪಡೆದುಕೊಂಡಿದ್ದಾರೆ.
ಕಳೆದ ಇಂಗ್ಲೆಂಡ್ ಹಾಗೂ ಭಾರತ ವಿರುದ್ದ ಟೆಸ್ಟ್ ಸರಣಿಯಲ್ಲಿಯೂ ವಿರಾಟ್ ಕೊಹ್ಲಿ ಕಾಣಿಸಿಕೊಂಡಿಲ್ಲ. ಆದರೆ ಅವರು ಯಾವಾಗ ಆರ್‌ಸಿಬಿ ಸೇರ್ಪಡೆ ಆಗುತ್ತಾರೆ ಅನ್ನೋದು ಇನ್ನೂ ಖಚಿತವಾಗಿಲ್ಲ. ಸದ್ಯ ಕೊಹ್ಲಿ ಪತ್ನಿಯೊಂದಿಗೆ ಯುಕೆಯಲ್ಲಿದ್ದಾರೆ. ಆದರೆ ಮುಂದಿನ ವಾರ ಅವರು ಆರ್‌ಸಿಬಿ ಶಿಬಿರವನ್ನು ಸೇರ್ಪಡೆ ಆಗಿ ತರಬೇತಿ ಆರಂಭಿಸುವ ಸಾಧ್ಯತೆಯಿದೆ.
AB de Villiers for RCB in IPL 2024: Virat Kohli invited to the team