Siddaramaiah: ಓಮಿಕ್ರಾನ್​ ಸೋಂಕಿತರು ವಿದೇಶಕ್ಕೆ ಹಾರೋದಕ್ಕೆ ಏರ್​ಪೋರ್ಟ್ ಭ್ರಷ್ಟಾಚಾರವೇ ಕಾರಣ: ಧಮ್​ ಇದ್ರೆ ತನಿಖೆ ನಡೆಸಿ – ಸರ್ಕಾರಕ್ಕೆ ಸಿದ್ದರಾಮಯ್ಯ ಸವಾಲ್​

ರಾಜ್ಯದಲ್ಲಿ ಓಮಿಕ್ರಾನ್​ ವೈರಸ್​ ಪತ್ತೆಯಾಗಿರೋದು ಒಂದೆಡೆ ಆತಂಕ ಸೃಷ್ಟಿಸಿದರೆ ಮತ್ತೊಂದೆಡೆ ವಿದೇಶಿ ಪ್ರಜೆಗಳು ಕಾಣೆಯಾಗುತ್ತಿರೋದು ಕೂಡ ಮತ್ತೊಂದು ಕಳವಳಕ್ಕೆ ಕಾರಣವಾಗಿದೆ. ಶಿವಮೊಗ್ಗದಲ್ಲಿ ಈ ವಿಚಾರವಾಗಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ವಿಮಾನ ನಿಲ್ದಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕುಟುಕಿದ್ದಾರೆ.
ಏರ್​ಪೋರ್ಟ್​ನಲ್ಲಿ ಭ್ರಷ್ಟಾಚಾರ ನಡೆಯುತ್ತಿರೋದಕ್ಕೆ ಪ್ರಯಾಣಿಕರು ಮಿಸ್ಸಿಂಗ್​ ಆಗುತ್ತಿದ್ದಾರೆ. ಈ ಸರ್ಕಾರದ ಮೇಲೆ ಮೊದಲೇ ಯಾವ ನಿರೀಕ್ಷೆ ಇಲ್ಲ.ಬಿಜೆಪಿ ಸರ್ಕಾರವು ಆಡಳಿತ ನಡೆಸೋದರಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಇದೊಂದು 40 ಪರ್ಸೆಂಟ್​ ಸರ್ಕಾರ. ಈ ವಿಚಾರದಲ್ಲಿ ನ್ಯಾಯಾಂಗ ತನಿಖೆ ಆಗಬೇಕೆಂದು ಮೋದಿಗೆ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿದ್ದೇವೆ . ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ಬರಬೇಕು. ಆದರೆ ಬಿಜೆಪಿಯವರಿಗೆ ಧಮ್​ ಇಲ್ಲ ಅದಿಕ್ಕೆ ತನಿಖೆ ಮಾಡುತ್ತಿಲ್ಲ. ತನಿಖೆ ಮಾಡಿದರೆ ಬಿಜೆಪಿಯವರು ಬೆತ್ತಲಾಗುತ್ತಾರೆ ಎಂದು ಹೇಳಿದ್ರು.
ಸಿಎಂ ಬದಲಾವಣೆ ಬಗ್ಗೆ ಸಚಿವ ಈಶ್ವರಪ್ಪರೇ ದನಿ ಎತ್ತಿದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ. ಅವರಿಗೆ ತಮ್ಮ ಮುಖ್ಯಮಂತ್ರಿ ಮೇಲೆ ನಂಬಿಕೆ ಇಲ್ಲ. ಅದಕ್ಕಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ. ಈಶ್ವರಪ್ಪ ಒಮ್ಮೊಮ್ಮೆ ಬಾಯಿ ತಪ್ಪಿ ಸತ್ಯ ಮಾತನಾಡಿಬಿಡ್ತಾರೆ ಅಂತಾ ವ್ಯಂಗ್ಯವಾಡಿದ್ರು.
ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಹಾಗೂ ಪ್ರಧಾನಿ ಮೋದಿ ಭೇಟಿ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಜೆಪಿಗೆ ಜೆಡಿಎಸ್​ ಬೆಂಬಲ ನೀಡುತ್ತಿದೆ. ಆದರೆ ಸ್ಥಳೀಯ ಜೆಡಿಎಸ್​ ನಾಯಕರು ಕಾಂಗ್ರೆಸ್​ಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಈ ಬಾರಿಯ ವಿಧಾನಪರಿಷತ್​ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಗೆಲುವು ಪಕ್ಕಾ ಎಂತಲೂ ವಿಶ್ವಾಸ ವ್ಯಕ್ತಪಡಿಸಿದರು.

Siddaramaiah’s outrage against BJP government

ಇದನ್ನು ಓದಿ : H VISHWANATH:ಸ್ವಪಕ್ಷೀಯರ ವಿರುದ್ಧವೇ ಮತ್ತೊಮ್ಮೆ ಗುಡುಗಿದ ಹೆಚ್​. ವಿಶ್ವನಾಥ್​ : ಯಡಿಯೂರಪ್ಪ, ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ

ಇದನ್ನು ಓದಿ : Omicron Meeting : ಓಮಿಕ್ರಾನ್‌ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಪ್ರಕಟ









Comments are closed.