Kohli Breaks Dravid Record : ರಾಹುಲ್ ದ್ರಾವಿಡ್ ಎದುರಲ್ಲೇ ದಿ ವಾಲ್ ರೆಕಾರ್ಡ್ ಬ್ರೇಕ್ ಮಾಡಿದ ವಿರಾಟ್ ಕೊಹ್ಲಿ

ಹೈದರಾಬಾದ್: (Kohli Breaks Dravid Record) “ದಿ ಗ್ರೇಟ್ ವಾಲ್ ಆಫ್ ಇಂಡಿಯಾ” ಖ್ಯಾತಿಯ ರಾಹುಲ್ ದ್ರಾವಿಡ್ (Rahul Dravid) ಅವರ ದಾಖಲೆಯೊಂದನ್ನು ವಿರಾಟ್ ಕೊಹ್ಲಿ (Virat Kohli), ಸ್ವತಃ ದ್ರಾವಿಡ್ ಅವರ ಎದುರಲ್ಲೇ ಪುಡಿಗಟ್ಟಿದ್ದಾರೆ. ಆಸ್ಟ್ರೇಲಿಯಾ (India vs Australia) ವಿರುದ್ಧ ಹೈದರಾಬಾದ್’ನಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ 50 ರನ್ ಗಳಿಸುತ್ತಾ ಇದ್ದಂತೆಯೇ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಸಾಲಿನಲ್ಲಿ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದರು. ಟೀಮ್ ಇಂಡಿಯಾ ಹಾಲಿ ಕೋಚ್ ದ್ರಾವಿಡ್ 504 ಅಂತಾರಾಷ್ಟ್ರೀಯ ಪಂದ್ಯಗಳಿಂದ 24,064 ರನ್ ಗಳಿಸಿದ್ದರೆ, ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದ ಅಂತ್ಯಕ್ಕೆ ವಿರಾಟ್ ಕೊಹ್ಲಿ 471 ಪಂದ್ಯಗಳಿಂದ 24,078 ರನ್ ಗಳಿಸಿದ್ದಾರೆ. 664 ಪಂದ್ಯಗಳಿಂದ 34,357 ರನ್ ಗಳಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿ ಇದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಅತೀ ಹೆಚ್ಚು ರನ್’ಗಳ ವಿಶ್ವದಾಖಲೆಯನ್ನು ಪುಡಿಗಟ್ಟಲು ವಿರಾಟ್ ಕೊಹ್ಲಿ ಅವರಿಗೆ 10279 ರನ್’ಗಳ ಅವಶ್ಯಕತೆಯಿದೆ.

ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ರನ್ (ಟಾಪ್-5)
34357: ಸಚಿನ್ ತೆಂಡೂಲ್ಕರ್, 664 ಪಂದ್ಯ, 782 ಇನ್ನಿಂಗ್ಸ್, 48.52 ಸರಾಸರಿ, 100 ಶತಕ, 164 ಅರ್ಧಶತಕ
24078: ವಿರಾಟ್ ಕೊಹ್ಲಿ, 471ಪಂದ್ಯ, 525 ಇನ್ನಿಂಗ್ಸ್, 53.62 ಸರಾಸರಿ, 71 ಶತಕ, 125 ಅರ್ಧಶತಕ
24064: ರಾಹುಲ್ ದ್ರಾವಿಡ್, 504 ಪಂದ್ಯ, 599 ಇನ್ನಿಂಗ್ಸ್, 45.57 ಸರಾಸರಿ, 48 ಶತಕ, 145 ಅರ್ಧಶತಕ
18433: ಸೌರವ್ ಗಂಗೂಲಿ, 421 ಪಂದ್ಯ, 485 ಇನ್ನಿಂಗ್ಸ್, 41.42 ಸರಾಸರಿ, 38 ಶತಕ, 106 ಅರ್ಧಶತಕ
17092: ಎಂ.ಎಸ್ ಧೋನಿ, 535 ಪಂದ್ಯ, 523 ಇನ್ನಿಂಗ್ಸ್, 44.74 ಸರಾಸರಿ, 15 ಶತಕ, 108 ಅರ್ಧಶತಕ

ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್’ನಲ್ಲಿ 12,344 ರನ್, ಟೆಸ್ಟ್ ಕ್ರಿಕೆಟ್’ನಲ್ಲಿ 8074 ರನ್ ಹಾಗೂ ಟಿ20 ಕ್ರಿಕೆಟ್’ನಲ್ಲಿ 3660 ರನ್ ಕಲೆ ಹಾಕಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ 48 ಎಸೆತಗಳಲ್ಲಿ ಸ್ಫೋಟಕ 63 ರನ್ ಗಳಿಸಿ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಗೆಲ್ಲಲು ಆಸೀಸ್ ಒಡ್ಡಿದ 187 ರನ್’ಗಳ ಗುರಿಯನ್ನು 19.5 ಓವರ್’ಗಳಲ್ಲಿ 4 ವಿಕೆಟ್ ನಷ್ಟದಲ್ಲಿ ತಲುಪಿದ ಭಾರತ 3 ಪಂದ್ಯಗಳ ಸರಣಿಯನ್ನು 2-1ರಲ್ಲಿ ಕೈವಶ ಮಾಡಿಕೊಂಡಿತು. ವಿರಾಟ್ ಕೊಹ್ಲಿ ಜೊತೆ ಸಿಡಿಲಬ್ಬರದ ಶತಕದ ಜೊತೆಯಾಟವಾಡಿ ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ಸ್ ನೆರವಿನಿಂದ 69 ರನ್ ಬಾರಿಸಿ ಪಂದ್ಯಶ್ರೇಷ್ಠರಾಗಿ ಮೂಡಿಬಂದರು. ಆಸ್ಟ್ರೇಲಿಯಾ ವಿರುದ್ಧದ ಸರಣಿ ಕೈವಶ ಮಾಡಿಕೊಂಡಿರುವ ಭಾರತ, ಸೆಪ್ಟೆಂಬರ್ 28ರಿಂದ ಆರಂಭವಾಗಲಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : ಭಾರತ Vs ಆಸೀಸ್ ಟಿ20 ಪಂದ್ಯದಲ್ಲಿ “ಆರ್‌ಸಿಬಿ, ಆರ್‌ಸಿಬಿ” ಎಂದು ಕೂಗಿದವರ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ

ಇದನ್ನೂ ಓದಿ : Ajinkya Rahane: ಅಶಿಸ್ತು ತೋರಿದ ಯಶಸ್ವಿ ಜೈಸ್ವಾಲ್‌ನನ್ನು ಮೈದಾನದಿಂದ ಹೊರಗಟ್ಟಿದ ಅಜಿಂಕ್ಯ ರಹಾನೆ

Virat Kohli Breaks Rahul Dravid Record India vs Australia

Comments are closed.