ಹೋಟೆಲ್‌ಗಳಲ್ಲೂ ಇನ್ಮುಂದೆ ಐಸೋಲೇಷನ್‌ : ಒಂದು ದಿನದ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತಿರಿ !

0

ಬೆಂಗಳೂರು : ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದಂತೆಯೇ ರಾಜ್ಯ ಸರಕಾರ ಖಾಸಗಿ ಆಸ್ಪತ್ರೆಗಳ ಬೆಡ್ ನೀಡುವಂತೆ ಸೂಚನೆಯನ್ನು ನೀಡಿತ್ತು. ತದನಂತರದಲ್ಲಿ ರೋಗಿಗಳಿಗೆ ಮನೆಯಲ್ಲಿಯೇ ಐಸೋಲೇಶನ್ ಮಾಡುವುದಾಗಿಯೂ ಹೇಳಿತ್ತು. ಇದೀಗ ಹೋಟೆಲ್ ಗಳಲ್ಲಿಯೂ ಕೋವಿಡ್ ಕೇರ್ ಕೇಂದ್ರ ತೆರೆಯಲು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಕೊರೊನಾ ಸೋಂಕಿತರಲ್ಲಿ ಬಹುತೇಕರಿಗೆ ಕೊರೊನಾ ರೋಗ ಲಕ್ಷಣಗಳೇ ಇರುವುದಿಲ್ಲ. ಹೀಗಾಗಿ ಇಂತಹ ರೋಗ ಲಕ್ಷಣ ಇಲ್ಲದವರನ್ನು ಮನೆಯಲ್ಲಿ ಐಸೊಲೇಶನ್ ಮಾಡುವುದರ ಜೊತೆಗೆ ಖಾಸಗಿ ಹೋಟಲ್ ನಲ್ಲೂ ಐಸೊಲೇಶನ್ ಮಾಡಬಹುದಾಗಿದೆ.

ಹೋಟೆಲ್‌ನಲ್ಲಿ‌ ಐಸೊಲೇಶನ್ ಆಗುವ ಸೋಂಕಿತ ವ್ಯಕ್ತಿಯ ಆರೋಗ್ಯ ತಪಾಸಣೆ ಸೇರಿದಂತೆ ಇತರ ಎಲ್ಲ ವ್ಯವಸ್ಥೆ ಬಿಬಿಎಂಪಿ ಮತ್ತು ಆರೋಗ್ಯ ‌ಇಲಾಖೆ ನೋಡಿಕೊಳ್ಳಬೇಕೆಂದು ರಾಜ್ಯ ಸರಕಾರ ಸೂಚನೆಯನ್ನು ನೀಡಿದೆ. ಇನ್ನು ಹೋಟೆಲ್ ಐಸೋಯೇಶನ್ ದರ ದುಬಾರಿಯಾಗಿದೆ. ರಾಜ್ಯ ಸರಕಾರ ಮೂರು ವಿಭಾಗಗಳಲ್ಲಿ ಹೋಟೆಲ್ ಐಸೋಲೇಷನ್ ಪ್ರತ್ಯೇಕಿಸಿದೆ.

ಪ್ರಮುಖವಾಗಿ ಸಾಮಾನ್ಯ ಹೋಟೆಲ್ ಗಳಲ್ಲಿ ಒಂದು ದಿನಕ್ಕೆ 8,000 ರೂಪಾಯಿ, 3ಸ್ಟಾರ್ ಹೋಟೆಲ್ ಗೆ 10,000ರೂ. ಹಾಗೂ 5 ಸ್ಟಾರ್ ಹೋಟೆಲ್ ಗೆ 12,0000 ರೂಪಾಯಿ ದರವನ್ನು ನಿಗದಿ ಪಡಿಸಿದೆ. ಇಷ್ಟು ದಿನ ಹೋಟೆಲ್ ಗಳಲ್ಲಿ ಕ್ವಾರಂಟೈನ್ ಮಾಡುತ್ತಿದ್ದ, ರಾಜ್ಯ ಸರಕಾರ ಇದೀಗ ಐಸೋಲೇಷನ್ ಗೂ ಕೂಡ ಹೋಟೆಲ್ ರೂಂಗಳನ್ನು ಬಳಸಿಕೊಳ್ಳುತ್ತಿದೆ.

Leave A Reply

Your email address will not be published.