Bengaluru Bulls : ಭರತ್ ಭರ್ಜರಿ ದಾಳಿ, ಗೂಳಿ ಗುದ್ದಿಗೆ ದಬಾಂಗ್ ಡೆಲ್ಲಿ ಢಮಾರ್; ಪ್ಲೇ ಆಫ್‌ಗೆ ಬೆಂಗಳೂರು ಬುಲ್ಸ್

(Bengaluru Bulls)ಹೈದರಾಬಾದ್: ಆರನೇ ಆವೃತ್ತಿಯ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ, ಪ್ರೊ ಕಬಡ್ಡಿ ಲೀಗ್ (Pro Kabaddi League) 9ನೇ ಆವೃತ್ತಿಯಲ್ಲಿ ಪ್ಲೇ ಆಫ್ ಹಂತದಲ್ಲಿ ತನ್ನ ಸ್ಥಾನವನ್ನು ಖಚಿತ ಪಡಿಸಿಕೊಂಡಿದೆ.ಹೈದರಾಬಾದ್’ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ, ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ವಿರುದ್ಧ 52-49ರ ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು.

(Bengaluru Bulls)ಪ್ರಥಮಾರ್ಥದಲ್ಲಿ 10 ಅಂಕಗಳ ಹಿನ್ನಡೆಯಲ್ಲಿದ್ದ ಕೆಂಪುಗೂಳಿಗಳು ದ್ವಿತೀಯಾರ್ಧದಲ್ಲಿ ಅಕ್ಷರಶಃ ಗೂಳಿಗಳಂತೆ ಅಬ್ಬರಿಸಿದರು. ಯುವ ರೇಡರ್ ಭರತ್ ಹೂಡ ಅವರ ಭರ್ಜರಿ ದಾಳಿಗಳಿಗೆ ದಬಾಂಗ್ ಡೆಲ್ಲಿ ಬೆಂದರಿ ಬೆಂಡಾಗಿ ಹೋಯಿತು. ಪಂದ್ಯದಲ್ಲಿ 24 ರೇಡ್’ಗಳ ಪೈಕಿ 23 ರೇಡ್ ಪಾಯಿಂಟ್ಸ್ ಕಲೆ ಹಾಕಿದ ಭರತ್ ಹೂಡ ಬೆಂಗಳೂರು ಬುಲ್ಸ್’ಗೆ 3 ಅಂಕಗಳ ರೋಚಕ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಬುಲ್ಸ್ ಬಳಗ ಲೀಗ್’ನಲ್ಲಿ 11ನೇ ಗೆಲುವು ದಾಖಲಿಸಿ 63 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.

ಕಳೆದೆರಡು ಪಂದ್ಯಗಳಲ್ಲಿ ಪುಣೇರಿ ಪಲ್ಟನ್ ಮತ್ತು ಬೆಂಗಾಲ್ ವಾರಿಯರ್ಸ್ ವಿರುದ್ಧ ಸೋಲು ಕಂಡಿದ್ದ ಬುಲ್ಸ್, ದಬಾಂಗ್ ಡೆಲ್ಲಿಯನ್ನು ಮಣಿಸುವ ಮೂಲಕ ಗೆಲುವಿನ ಹಾದಿಗೆ ಮರಳಿತು. ಮತ್ತೊಂದೆಡೆ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಲೀಗ್’ನಲ್ಲಿ 9ನೇ ಸೋಲು ಕಂಡು 6ನೇ ಸ್ಥಾನಕ್ಕೆ ಕುಸಿಯಿತು.ದಿನದ ಮತ್ತೊಂದು ರೋಚಕ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಮೂರು ಅಂಕಗಳಿಂದ (42-39) ಮಣಿಸಿದ ತಮಿಳ್ ತಲೈವಾಸ್, ಲೀಗ್’ನಲ್ಲಿ 8ನೇ ಗೆಲುವಿನೊಂದಿಗೆ 53 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಸೋಮವಾರ ನಡೆಯುವ ಮೊದಲ ಪಂದ್ಯದಲ್ಲಿ ಯುಪಿ ಯೋಧಾ ಮತ್ತು ಬೆಂಗಾಲ್ ವಾರಿಯರ್ಸ್ ಮುಖಾಮುಖಿಯಾಗಲಿದ್ರೆ, 2ನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಆತಿಥೇಯ ತೆಲುಗು ಟೈಟನ್ಸ್ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ:Guinness record: ಐಪಿಎಲ್ ಪಂದ್ಯದ ಮೂಲಕ ಗಿನ್ನೆಸ್ ದಾಖಲೆ ಸೃಷ್ಟಿಸಿದ ನರೇಂದ್ರ ಮೋದಿ ಸ್ಟೇಡಿಯಂ

ಇದನ್ನೂ ಓದಿ:MS Dhoni Dance : ಬರ್ತ್‌ಡೇ ಪಾರ್ಟಿಯಲ್ಲಿ ಪಾಂಡ್ಯ ಬ್ರದರ್ಸ್ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ ಧೋನಿ

ಇದನ್ನೂ ಓದಿ:Baba Ramdev: ‘ಮಹಿಳೆಯರು ಬಟ್ಟೆ ಧರಿಸದೇ ಇದ್ರೂ’.. ವಿವಾದದ ಕಿಡಿ ಹೊತ್ತಿಸಿದ ಯೋಗ ಗುರು ಹೇಳಿಕೆ

Bengaluru Bulls : ಪ್ರೊ ಕಬಡ್ಡಿ ಲೀಗ್-9: ಸೋಮವಾರ ಪಂದ್ಯಗಳು

  1. ಯು.ಪಿ ಯೋಧಾ Vs ಬೆಂಗಾಲ್ ವಾರಿಯರ್ಸ್
  2. ಜೈಪುರ ಪಿಂಕ್ ಪ್ಯಾಂಥರ್ಸ್ Vs ತೆಲುಗು ಟೈಟನ್ಸ್

ಸ್ಥಳ: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Bangalore Bulls won against defending champion Dabang Delhi.

Comments are closed.