Big test for KL Rahul : ಆಗಸ್ಟ್ 18ರಂದು ರಾಹುಲ್’ಗೆ ದೊಡ್ಡ ಅಗ್ನಿಪರೀಕ್ಷೆ, ಆ ಪರೀಕ್ಷೆ ಗೆದ್ದರಷ್ಟೇ ವಿಶ್ವಕಪ್ ಟಿಕೆಟ್!

ಬೆಂಗಳೂರು: Big test for KL Rahul : ಭಾರತ ತಂಡಕ್ಕೆ ಪುನಗಾಮನ ಮಾಡಲು ರೆಡಿಯಾಗಿರುವ ಕರ್ನಾಟಕದ ಕ್ರಿಕೆಟ್ ತಾರೆ ಕೆ.ಎಲ್ ರಾಹುಲ್ (KL Rahul) ಆಗಸ್ಟ್ 18ರಂದು ದೊಡ್ಡ ಅಗ್ನಿಪರೀಕ್ಷೆ ಎದುರಿಸಲಿದ್ದಾರೆ. ಆಗಸ್ಟ್ 18ರ ಅಗ್ನಿಪರೀಕ್ಷೆಯನ್ನು ಗೆದ್ದರಷ್ಟೇ ರಾಹುಲ್, ವಿಶ್ವಕಪ್’ನಲ್ಲಿ (ICC World Sup 2023) ಆಡಲಿರುವ ಟೀಮ್ ಇಂಡಿಯಾದಲ್ಲಿ ಮತ್ತು ಏಷ್ಯಾ ಕಪ್ (Asia Cup 2023) ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಳೆದ ಐಪಿಎಲ್ ವೇಳೆ ಬಲತೊಡೆಯ ಸ್ನಾಯು ಸೆಳೆತಕ್ಕೊಳಗಾಗಿದ್ದ ರಾಹುಲ್, ನಂತರ ಲಂಡನ್’ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿರುವ (NCA) ರಾಹುಲ್, ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಎನ್’ಸಿಎನಲ್ಲಿ ರಾಹುಲ್ ಪ್ರತೀ ದಿನ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಅಭ್ಯಾಸ ನಡೆಸುತ್ತಿದ್ದು, ತಾವು ಫಿಟ್ ಆಗಿರುವ ಸಂದೇಶವನ್ನು ಬಿಸಿಸಿಐ ಆಯ್ಕೆ ಸಮಿಗೆ ರವಾನಿಸಿದ್ದಾರೆ. ಆದರೆ ರಾಹುಲ್ ಫಿಟ್ನೆಸ್ ಬಗ್ಗೆ ಎನ್’ಸಿಎ ಇನ್ನಷ್ಟೇ ಸರ್ಟಿಫಿಕೇಟ್ ಕೊಡಬೇಕಿದೆ.

ರಾಹುಲ್ ಅವರ ಫಿಟ್ನೆಸ್ ಟೆಸ್ಟ್ ಆಗಸ್ಟ್ 18ರಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯಲಿದೆ. ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆದ್ರೆ ಮಾತ್ರ ರಾಹುಲ್ ಏಷ್ಯಾ ಕಪ್ ಟೂರ್ನಿಗೆ ಲಭ್ಯರಾಗಲಿದ್ದಾರೆ. ಫಿಟ್ನೆಸ್ ಟೆಸ್ಟ್ ಜೊತೆಗೆ ರಾಹುಲ್ ಮ್ಯಾಚ್ ಫಿಟ್ನೆಸ್ ಕೂಡ ಸಾಬೀತು ಪಡಿಸಬೇಕಿರುವುದರಿಂದ ಸದ್ಯದಲ್ಲೇ ಅಭ್ಯಾಸ ಪಂದ್ಯವೊಂದನ್ನು ಆಡಲಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಪೂರ್ತಿ 50 ಓವರ್ ವಿಕೆಟ್ ಕೀಪಿಂಗ್ ಮತ್ತು 30 ಓವರ್ ಬ್ಯಾಟಿಂಗ್ ನಡೆಸಬೇಕಿದೆ. ನಂತರವಷ್ಟೇ ರಾಹುಲ್ ಅವರ ಫಿಟ್ನೆಸ್ ಬಗ್ಗೆ ಬಿಸಿಸಿಐಗೆ ಎನ್’ಸಿಎ ಅಂತಿಮ ವರದಿ ನೀಡಲಿದೆ. ಏಷ್ಯಾ ಕಪ್ ಟೂರ್ನಿಯಲ್ಲೇ ರಾಹುಲ್ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಲಿದ್ದಾರಾ ಎಂಬುದು ಎನ್’ಸಿಎ ನೀಡಲಿರುವ ವರದಿಯನ್ನಾಧರಿಸಿದೆ.

ಇದನ್ನೂ ಓದಿ : Asia Cup 2023 : ಕೋಚ್ ಇಲ್ಲದೆ ಐರ್ಲೆಂಡ್ ಪ್ರವಾಸಕ್ಕೆ ತೆರಳಲಿದೆ ಟೀಮ್ ಇಂಡಿಯಾ, ಕಾರಣ ಗೊತ್ತೇ?

ಏಷಶ್ಯಾ ಕಪ್ ಟೂರ್ನಿ ಆಗಸ್ಟ್ 31ರಂದು ಶ್ರೀಲಂಕಾದಲ್ಲಿ ಆರಂಭವಾಗಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಹೈವೋಲ್ಟೇಜ್ ಪಂದ್ಯ ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ತಂಡಗಳು ಭಾಗವಹಿಸಲಿವೆ.

ಏಷ್ಯಾ ಕಪ್ 2023 ಟೂರ್ನಿಯ ಲೀಗ್ ಪಂದ್ಯಗಳ ವೇಳಾಪಟ್ಟಿ (Asia Cup 2023 schedule) :

  • ಆಗಸ್ಟ್ 30: ಪಾಕಿಸ್ತಾನ Vs ನೇಪಾಳ (ಬೆಳಗ್ಗೆ 10ಕ್ಕೆ, ಮುಲ್ತಾನ್)
  • ಆಗಸ್ಟ್ 31: ಶ್ರೀಲಂಕಾ Vs ಬಾಂಗ್ಲಾದೇಶ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
  • ಸೆಪ್ಟೆಂಬರ್ 2: ಭಾರತ Vs ಪಾಕಿಸ್ತಾನ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
  • ಸೆಪ್ಟೆಂಬರ್ 3: ಅಫ್ಘಾನಿಸ್ತಾನ Vs ಬಾಂಗ್ಲಾದೇಶ (ಬೆಳಗ್ಗೆ 9.30ಕ್ಕೆ, ಲಾಹೋರ್)
  • ಸೆಪ್ಟೆಂಬರ್ 4: ಭಾರತ Vs ನೇಪಾಳ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
  • ಸೆಪ್ಟೆಂಬರ್ 5: ಅಫ್ಘಾನಿಸ್ತಾನ Vs ಶ್ರೀಲಂಕಾ (ಬೆಳಗ್ಗೆ 9.30ಕ್ಕೆ, ಲಾಹೋರ್)

Big test for KL Rahul: Big test for Rahul on August 18, world cup ticket only if he wins that test!

Comments are closed.