IND Vs SCO T20 World Cup : ಕೆ.ಎಲ್.‌ ರಾಹುಲ್‌ – ರೋಹಿತ್‌ ಶರ್ಮಾ ಆರ್ಭಟ : ದಾಖಲೆಯ ಗೆಲುವು ದಾಖಲಿಸಿ ಟೀಂ ಇಂಡಿಯಾ

ದುಬೈ : ಟಿ20 ವಿಶ್ವಕಪ್‌ (T20 world Cup) ನಲ್ಲಿ ಭಾರತ ಹಾಗೂ ಸ್ಕಾಟ್ಲೆಂಡ್ (India vs Scotland ) ನಡುವಿನ ಪಂದ್ಯದಲ್ಲಿ ಭಾರತ ದಾಖಲೆಯ ಗೆಲುವು ದಾಖಲಿಸಿದೆ. ಸ್ಕಾಟ್ಲೆಂಡ್‌ ಬೌಲರ್‌ಗಳನ್ನು ಕಟ್ಟಿ ಹಾಕಿದ್ದ ಭಾರತೀಯ ಬೌಲರ್‌ಗಳು ಸುಲಭದ ಗುರಿಯನ್ನು ಪಡೆದಿದ್ದರು. ನಂತರದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಅವರ ಅಮೋಘ ಆಟದ ಪ್ರದರ್ಶನದಿಂದಾಗಿ ಕೇವಲ 6.3 ಓವರ್‌ಗಳಲ್ಲಿ 86 ರನ್‌ ಗಳಿಸುವ ಮೂಲಕ ಗೆಲುವು ದಾಖಲಿಸಿದೆ.

ದುಬೈನ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಸ್ಕಾಟ್ಲೆಂಡ್‌ ವಿರುದ್ದ ಪಂದ್ಯದಲ್ಲಿ ಟಾಸ್‌ ಗೆದ್ದ ವಿರಾಟ್‌ ಕೊಯ್ಲಿ ಮೊದಲು ಬೌಲಿಂಗ್‌ ಆಯ್ಕೆ ಮಾಡಿದ್ದರು. ಬೃಹತ್‌ ಮೊತ್ತವನ್ನು ಪೇರಿಸುವ ವಿಶ್ವಾಸದಲ್ಲಿ ಸ್ಕಾಟ್ಲೆಂಡ್‌ ತಂಡಕ್ಕೆ ಆರಂಭದಲ್ಲೇ ಬೂಮ್ರಾ ಆಘಾತವನ್ನು ನೀಡಿದ್ರು. ನಂತರ ಮೊಹಮ್ಮದ್‌ ಸೆಮಿ ಕೂಡ ಮಾರಕ ದಾಳಿಯನ್ನು ಸಂಘಟಿಸಿದ್ರು. ಸ್ಪಿನ್ನರ್‌ ರವೀಂದ್ರ ಜಡೇಜಾ ಸ್ಕಾಟ್ಲೆಂಡ್‌ ಆಟರರಿಗೆ ಸತತವಾಗಿ ಫೆವಿಲಿಯನ್‌ ಹಾದಿ ತೋರಿಸಿದ್ದಾರೆ.

ಜಾರ್ಜ್‌ ಮುಸ್ಲಿ 24, ಮೈಕಲ್‌ ಲಿಸ್ಕ್‌ 21, ಕಾಲಂ ಮ್ಯಾಕ್ಲಿಯೋಡ್‌ 16 ಹಾಗೂ ಮಾರ್ಕ್‌ ವ್ಯಾಟ್‌ 14ರನ್‌ ಹೊರತು ಪಡಿಸಿ, ಉಳಿದ್ಯಾವುದೇ ಆಟಗಾರರು ಎರಡಂಕಿ ಸ್ಕೋರ್‌ ದಾಟಲೇ ಇಲ್ಲ. 4 ಓವರ್‌ ಬೌಲಿಂಗ್‌ ಮಾಡಿದ ರವೀಂದ್ರ ಜಡೇಜಾ ಕೇವಲ 15 ರನ್‌ನೀಡಿ 3 ವಿಕೆಟ್‌ ಕಬಳಿಸಿದ್ರೆ, ಮೊಹಮ್ಮದ್‌ ಸೆಮಿ 3 ಓವರ್‌ ಗಳಲ್ಲಿ 1 ಮೇಡನ್‌ ಓವರ್‌ ಸಹಿತ 15 ರನ್‌ ನೀಡಿ 3 ವಿಕೆಟ್‌ ಕಬಳಿಸಿದ್ದಾರೆ. ಇನ್ನು ಜಸ್ಪ್ರಿತ್‌ ಬೂಮ್ರಾ 10 ರನ್‌ ನೀಡಿ 2 ವಿಕೆಟ್‌ ಪಡೆದುಕೊಂಡ್ರೆ, ರವಿಚಂದ್ರನ್‌ ಅಶ್ಚಿನ್‌ 29 ರನ್‌ ನೀಡಿ 1 ವಿಕೆಟ್‌ ಪಡೆದುಕೊಂಡಿದ್ದಾರೆ.

ಸ್ಕಾಟ್ಲೆಂಡ್‌ ನೀಡಿದ್ದ ೮೬ ರನ್‌ ಬೆನ್ನತ್ತಲು ಹೊರಟ ಟೀಂ ಇಂಡಿಯಾಕ್ಕೆ ಕೆ.ಎಲ್.‌ ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಉತ್ತಮ ಆರಂಭ ಒದಗಿಸಿದ್ದಾರೆ. ಕೇವಲ 19 ಎಸೆತಗಳನ್ನು ಎದುರಿಸಿದ ಕೆ.ಎಲ್.ರಾಹುಲ್‌ ಭರ್ಜರಿ ಮೂರು ಸಿಕ್ಸರ್‌ ಹಾಗೂ 6ಬೌಂಡರಿ ನೆರವಿನಿಂದ ಆಕರ್ಷಕ ಅರ್ಧ ಶತಕ ಬಾರಿಸಿದ್ದಾರೆ. ಇನ್ನೊಂದೆಡೆಯಲ್ಲಿ ರೋಹಿತ್‌ ಶರ್ಮಾ ಕೂಡ ಆಕ್ರಮಣಕಾರಿ ಬ್ಯಾಟಿಂಗ್‌ ಪ್ರದರ್ಶನವನ್ನು ನೀಡಿದ್ದಾರೆ. 16 ಎಸೆತಗಳನ್ನು ಎದುರಿಸಿದ್ದ ರೋಹಿತ್‌ ಶರ್ಮಾ 1 ಸಿಕ್ಸರ್‌ ಹಾಗೂ 5 ಬೌಂಡರಿ ನೆರವಿನಿಂದ ೩೦ರನ್‌ ಸಿಡಿಸಿದ್ದಾರೆ. ಭಾರತ ಕೇವಲ 6.3 ಓವರ್‌ಗಳಲ್ಲಿ ಗೆಲುವಿನ ನಗೆಯನ್ನು ಬೀರಿದೆ. ಭಾರತ ಬರೋಬ್ಬರಿ 81 ಎಸೆತಗಳು ಬಾಕಿ ಇರುವಂತೆಯೇ ಗೆಲುವನ್ನು ದಾಖಲಿಸುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ.

ಇದನ್ನೂ ಓದಿ : ಯುವಿ ಅಭಿಮಾನಿಗಳಿಗೆ ಸಿಹಿ ಸುದ್ದಿ : ಟೀಂ ಇಂಡಿಯಾಗೆ ವಾಪಾಸಾಗ್ತಾರೆ ಯುವರಾಜ್‌ ಸಿಂಗ್

ಇದನ್ನೂ ಓದಿ : ರಾಹುಲ್‌ ದ್ರಾವಿಡ್‌ ಟೀಂ ಇಂಡಿಯಾ ಮುಖ್ಯ ಕೋಚ್‌ : ಬಿಸಿಸಿಐ ಆದೇಶ

ಟೀಂ ಇಂಡಿಯಾ ಸ್ಕಾಟ್ಲೆಂಡ್ ವಿರುದ್ಧ ದಾಖಲೆಯ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ. ಭಾರತವು 4 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ 4 ಅಂಕಗಳ ಜೊತೆಗೆ +1.619 ರನ್‌ ರೇಟ್‌ ಹೊಂದಿದೆ. ಅಫ್ಘಾನಿಸ್ತಾನ ಕೂಡ 4 ಅಂಕಗಳನ್ನುಗಳಿಸಿದೆ. ಆದರೆ ಭಾರತಕ್ಕಿಂತ ಕಡಿಮೆ ರನ್‌ರೇಟ್‌ ಹೊಂದಿದೆ. ಮೊದಲ ಸ್ಥಾನದಲ್ಲಿರುವ ಪಾಕಿಸ್ತಾನ ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿದ್ದರೆ, ನ್ಯೂಜಿಲೆಂಡ್ ತಂಡ 3 ಗೆಲುವಿನೊಂದಿಗೆ ಎರಡನೇ ಸ್ಥಾನದಲ್ಲಿದೆ.

Comments are closed.