Horoscope : ದಿನಭವಿಷ್ಯ: ಹಣಕಾಸಿನ ವಿಚಾರದಲ್ಲಿ ಹೊಸ ಅವಕಾಶಗಳು ದೊರೆಯಲಿದೆ

ಮೇಷರಾಶಿ
ಆರೋಗ್ಯದ ಬಗ್ಗೆ ಚಿಂತೆ ಬಿಡಿ, ತಪ್ಪು ಮನೋಭಾವ ನಿಮ್ಮನ್ನು ಸೋಲಿಸಲಿದೆ, ಹೊಸ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಿ, ಹಣಕಾಸಿನ ವಿಚಾರದಲ್ಲಿ ಲಾಭಗಳಿಸುವಿರಿ, ಕುಟುಂಬ ಸದಸ್ಯರ ಜೊತೆಗೆ ಶಾಂತಿಯುತವಾಗಿ ವರ್ತಿಸಿ, ಇತರರನ್ನು ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ, ಆಸ್ತಿ ಮಾರಾಟದಿಂದ ಸಂತಸ.

ವೃಷಭರಾಶಿ
ನಿಮ್ಮ ಶಕ್ತಿಯ ಗುಣಮಟ್ಟ ಅಧಿಕವಾಗಿರುತ್ತದೆ, ಹಣಕಾಸಿನ ವಿಚಾರದಲ್ಲಿ ಗ್ರಹಗಳ ಅನುಕೂಲತೆ ಕಾಣಿಸುತ್ತಿಲ್ಲ, ಹಣವನ್ನು ಸಂರಕ್ಷಣೆ ಮಾಡುವತ್ತ ಗಮನ ಹರಿಸಿ, ಹಿಂದಿನ ಕನಸುಗಳಲ್ಲಿ ಮುಳುಗಲಿದ್ದೀರಿ, ಬಿಡುವಿಲ್ಲದ ಕೆಲಸ ನಡೆಯೂ ಮನೆಯವರಿಗೆ ಸಮಯ ನೀಡಿ, ಜೀವನ ಸಂಗಾತಿಯ ಜೊತೆ ಹೊಂದಾಣಿಕೆ ಅಗತ್ಯ.

ಮಿಥುನರಾಶಿ
ಕೆಲಸದ ವೇಳಾಪಟ್ಟಿಯನ್ನು ಬದಲಾಯಿಸಿಕೊಳ್ಳಿ, ದಿನ ಕಳೆದಂತೆ ಆರ್ಥಿಕ ಸಮಸ್ಯೆ ಪರಿಹಾರವಾಗಲಿದೆ, ಹಳೆಯ ಸ್ನೇಹಿತರು ನಿಮಗೆ ಕಿರಿಕಿರಿಯನ್ನು ಉಂಟು ಮಾಡಲಿದ್ದಾರೆ, ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿ, ದೂರದ ಊರುಗಳಿಗೆ ಪ್ರಯಾಣ ಸಾಧ್ಯತೆ, ಮನೆಯಲ್ಲಿ ನೆಮ್ಮದಿ ಹಾಳಾಗುವ ಘಟನೆ ನಡೆಯುವ ಸಾಧ್ಯತೆ, ಹೊಂದಾಣಿಕೆ ಅಗತ್ಯ.

ಕರ್ಕಾಟಕರಾಶಿ
ಮನೆಯಲ್ಲಿ ಸಮಸ್ಯೆಗಳು ನಿಮ್ಮನ್ನು ಚಿಂತೆಗೀಡು ಮಾಡಲಿದೆ, ಸ್ನೇಹಿತರ ಜೊತೆ ಉತ್ತಮ ಸಮಯವನ್ನು ಕಳೆಯುವಿರಿ, ವಾಹನ ಚಾಲನೆ ಮಾಡುವಾಗಿ ಎಚ್ಚರಿಕೆಯಿಂದಿರಿ, ದೂರ ಪ್ರವಾಸಕ್ಕೆ ಹೋಗುವ ಸಾಧ್ಯತೆಯಿದೆ, ಸಂಗಾತಿಯೊಂದಿಗೆ ಸಮಯವನ್ನು ಕಳೆಯುವಿರಿ.

ಸಿಂಹರಾಶಿ
ಕೆಲಸದಲ್ಲಿ ಆಸಕ್ತಿ ಹೊಂದಿದ್ದರೂ ಒತ್ತಡ ನಿಮ್ಮನ್ನು ಕೆರಳಿಸುವಂತೆ ಮಾಡುತ್ತದೆ, ಸಮಸ್ಯೆಗಳು ಪರಿಹಾರವಾಗಲಿದೆ, ಹಣಕಾಸಿನ ಪ್ರಯೋಜನ ಪಡೆಯಬಹುದು, ಹಳೆಯ ಸ್ನೇಹಿತರು ನಿಮಗೆ ಸಹಾಯ ಮಾಡಲಿದ್ದಾರೆ, ವಿವಾದಗಳಿಂದ ದೂರವಿರಲು ಪ್ರಯತ್ನಿಸಿ, ಭವಿಷ್ಯದ ಯೋಜನೆಗಳನ್ನು ರೂಪಿಸುವಿರಿ.

ಕನ್ಯಾರಾಶಿ
ತಾಯಂದಿರ ಪಾಲಿಗೆ ಉತ್ತಮ ದಿನವಲ್ಲ, ವಾಕಿಂಗ್‌ ಮಾಡುವಾಗ ಹೆಚ್ಚು ಎಚ್ಚರವಾಗಿರಿ, ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ನೆರೆಹೊರೆಯವರ ವಿಶ್ವಾಸವನ್ನು ಗಳಿಸುವಿರಿ, ದೈಹಿಕ ವ್ಯಾಯಾಮದಿಂದ ಮನಸಿಗೆ ನೆಮ್ಮದಿ, ನಿಮ್ಮ ಜೀವನವು ಇಂದು ಅದ್ಬುತವಾಗಿ ಇರಲಿದೆ, ಸ್ನೇಹಿತರೊಂದಿಗೆ ಕಾಲ ಕಳೆಯುವಿರಿ.

ತುಲಾರಾಶಿ
ನೀವು ಇಂದು ತುಂಬಾ ಚುರುಕಾಗಿರುತ್ತೀರಿ, ನಿಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ಹರಿಸಿ, ಆದಾಯದಲ್ಲಿ ಏರಿಕೆಯಾಗಲಿದೆ, ಸಂಗಾತಿಯನ್ನು ಸಂತೋಷವಾಗಿಡಲು ಯತ್ನಿಸುವಿರಿ, ಅನಗತ್ಯವಾಗಿ ದೂರ ಪ್ರಯಾಣ, ಕುಟುಂಬದೊಂದಿಗೆ ಸಮಯ ಕಳೆಯುವಿರಿ, ಸಂಬಂಧಿಕರ ಮನೆಗೆ ಭೇಟಿ ಸಾಧ್ಯತೆ.

ವೃಶ್ಚಿಕರಾಶಿ
ಮಾನಸಿಕ ಚಿಂತೆ, ಅನಾರೋಗ್ಯ ಕಾಡಲಿದೆ, ಆಹಾರ ಸೇವನೆಯಲ್ಲಿ ಎಚ್ಚರಿಕೆ ವಹಿಸಿ, ಕೆಲಸದಲ್ಲಿ ಬಿಡುವು ಮಾಡಿಕೊಳ್ಳಿ, ಅದೃಷ್ಟ ನಿಮಗೆ ಆರ್ಥಿಕ ಪ್ರಯೋಜನವನ್ನು ನೀಡಲಿದೆ, ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿಬರಲಿದೆ, ಇತರರು ಸಹಕಾರವನ್ನು ಮಾಡಲಿದ್ದಾರೆ, ಉದ್ಯೋಗದಲ್ಲಿ ಮೇಲಾಧಿಕಾರಿಗಳ ಪ್ರಶಂಸೆ ದೊರೆಯಲಿದೆ.

ಧನಸುರಾಶಿ
ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಲು ಯತ್ನಿಸಿ, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ, ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ, ಹಣಕಾಸಿನ ಕೊರತೆ ಸಮಸ್ಯೆಯನ್ನು ಉಂಟು ಮಾಡಲಿದೆ, ಭವಿಷ್ಯದ ಯೋಜನೆಯ ಬಗ್ಗೆ ಚಿಂತೆ ಮಾಡಬೇಡಿ, ಹಳೆಯ ಸ್ನೇಹಿತರ ಭೇಟಿಯಿಂದ ಮನಸಿಗೆ ನೆಮ್ಮದಿ ದೊರೆಯಲಿದೆ.

ಮಕರರಾಶಿ
ಸಣ್ಣ ವಿಚಾರಕ್ಕೆ ಮನಸ್ಸು ಹಾಳು ಮಾಡಿಕೊಳ್ಳಬೇಡಿ, ಮನರಂಜನೆಗಾಗಿ ಸಾಕಷ್ಟು ಸಮಯ ಹಾಗೂ ಹಣವನ್ನು ಖರ್ಚು ಮಾಡಬೇಡಿ, ಜನರೊಂದಿಗೆ ಸಂವಹನ ನಡೆಸಲು ಉತ್ತಮ ದಿನ, ಅನಿರೀಕ್ಷಿತ ಮೂಲಗಳಿಂದ ಆರ್ಥಿಕ ಸಹಾಯ ದೊರೆಯಲಿದೆ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ಮದಿ, ಸಹೋದ್ಯೋಗಿಗಳ ಜೊತೆಗೆ ಹೊಂದಾಣಿಕೆ ಅಗತ್ಯ.
ಕುಂಭರಾಶಿ

ತುಲಾರಾಶಿ
ಆರ್ಥಿಕವಾಗಿ ಸದೃಢರಾಗುತ್ತೀರಿ, ನಿಮ್ಮ ಸ್ವಭಾವದಿಂದಾಗಿ ಹಲವು ಸಂತೋಷದ ಕ್ಷಣಗಳು ಎದುರಾಗಲಿದೆ, ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಅವಕಾಶಗಳು ದೊರೆಯಲಿದೆ, ಕುಟುಂಬ ಸದಸ್ಯರ ಜೊತೆಗೆ ಹೊಂದಾಣಿಕೆ ಅಗತ್ಯ, ಸಾಮಾಜಿಕವಾಗಿ ಗೌರವ ದೊರೆಯಲಿದೆ, ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಮೀನರಾಶಿ
ಹಾಸ್ಯಮಯ ನಡವಳಿಕೆ ಉದ್ವೇಗವನ್ನು ಕಡಿಮೆ ಮಾಡಲಿದೆ, ಮನೆಯ ವಿಚಾರಕ್ಕಾಗಿ ಸಾಕಷ್ಟು ಹಣವನ್ನು ವ್ಯಯ ಮಾಡಲಿದ್ದೀರಿ, ಹಣಕಾಸಿನ ವಿಚಾರದಲ್ಲಿ ಮಾನಸಿಕ ಒತ್ತಡ ಎದುರಾಗಲಿದೆ, ಪತ್ನಿಯೊಂದಿಗೆ ದೂರ ಪ್ರಯಾಣಕ್ಕೆ ಇದು ಸಕಾಲ, ಮಾತನಾಡುವಾಗ ತಪ್ಪುಗ್ರಹಿಕೆ ಅನಾಹುತಕ್ಕೆ ಕಾರಣವಾಗಲಿದೆ, ಎಲ್ಲರೊಂದಿಗೆ ಅನ್ಯೋನ್ಯತೆಯಿಂದಿರಿ.

ಇದನ್ನೂ ಓದಿ : ಇಲ್ಲಿಗೆ ಬಂದ್ರೆ ಸಂಕಷ್ಟಗಳು ದೂರ : ವರ್ಷಕ್ಕೊಮ್ಮೆ 36 ಗಂಟೆ ದರ್ಶನ ನೀಡುತ್ತಾಳೆ ಚೌಡೇಶ್ವರಿ

ಇದನ್ನೂ ಓದಿ : ಕತ್ತಲ ರಾತ್ರಿ ಆ ಗ್ರಾಮಕ್ಕೆ ಹೋದವರು ಹಿಂತಿರುಗಿ ಬಂದ ಮಾತೇ ಇಲ್ಲಾ : ಕುಲಧರ ಗ್ರಾಮವೆಂದ್ರೆ ರಾಜಸ್ತಾನದ ಜನ ಬೆಚ್ಚಿ ಬೀಳೋದ್ಯಾಕೆ !

ಇದನ್ನೂ ಓದಿ : Viral Video : ಮೊಟ್ಟೆ ತಿನ್ನೋಕೆ ಬಂದಿದ್ದ ಹಾವಿಗೆ ಬಿಗ್‌ ಶಾಕ್‌ : ಹಾವನ್ನೇ ಅಟ್ಟಾಡಿಸಿ ಓಡಿಸಿದ ಕೋಳಿ !

(Horoscope today astrological prediction for September 18)

Comments are closed.