Team India : ಶಾರ್ದೂಲ್‌ ಠಾಕೂರ್‌, ವಿರಾಟ್‌ ಕೊಯ್ಲಿ ಆಕರ್ಷಕ ಅರ್ಧ ಶತಕ

ಲಂಡನ್‌ : ಇಂಗ್ಲೆಂಡ್‌ ವಿರುದ್ದದ ಐದು ಪಂದ್ಯಗಳ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ಅಲ್ಪ ಮೊತ್ತಕ್ಕೆ ಕುಸಿತವನ್ನು ಕಂಡಿದೆ. ಆದ್ರೆ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬೌಲರ್‌ ಶಾರ್ದೂಲ್‌ ಠಾಕೂರ್‌ ಹಾಗೂ ನಾಯಕ ವಿರಾಟ್‌ ಕೊಯ್ಲಿ ಆಕರ್ಷಕ ಅರ್ಧ ಶತಕ ಬಾರಿಸಿದ್ದಾರೆ.

ಲಂಡನ್‌ನ ಕೆನ್ನಿಂಗ್ಟನ್‌ ಓವಲ್‌ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಬೌಲರ್‌ ಶಾರ್ದೂಲ್‌ ಠಾಕೂರ್‌ ತಂಡಕ್ಕೆ ನೆರವಾಗಿದ್ದಾರೆ. ಕೇವಲ 36 ಎಸೆತಗಳನ್ನು ಎದುರಿಸಿದ್ದ ಶಾರ್ದೂಲ್‌ ಠಾಕೂರ್‌ 57 ರನ್‌ ಬಾರಿಸುವ ಮೂಲಕ ಆಕರ್ಷಕ ಅರ್ಧಶತಕ ಬಾರಿಸಿದ್ದಾರೆ. ಇದರಲ್ಲಿ 7 ಬೌಂಡರಿ ಹಾಗೂ 3 ಆಕರ್ಷಕ ಸಿಕ್ಸರ್‌ ಒಳಗೊಂಡಿದೆ.

ಇದಕ್ಕೂ ಮೊದಲು ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾಕ್ಕೆ ವಿರಾಟ್‌ ಕೊಯ್ಲಿ ಆಸರೆಯಾಗಿದ್ದರು. 96 ಎಸೆತಗಳನ್ನು ಎದುರಿಸಿದ್ದ ವಿರಾಟ್‌ ಕೊಯ್ಲಿ 8 ಬೌಂಡರಿ ನೆರವಿನಿಂದ 50 ರನ್‌ಗಳಿಸಿದ್ದಾರೆ.

ಇನ್ನು ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ಇಂಗ್ಲೆಂಡ್‌ ತಂಡಕ್ಕೆ ಭಾರತದ ವೇಗಿಗಳಾದ ಬೂಮ್ರಾ ಹಾಗೂ ಉಮೇಶ್‌ ಯಾದವ್‌ ಆಘಾತವನ್ನು ನೀಡಿದ್ದಾರೆ. ಜೋಸೆಫ್‌ ಬರ್ನ್ಸ್‌, ಹಸೀಬ ಹಮೀದ್‌ ಹಾಗೂ ನಾಯಕ ಜೋ ರೂಟ್‌ಗೆ ಫೆವಿಲಿಯನ್‌ ಹಾದಿ ತೋರಿಸಿದ್ದಾರೆ. ಬೂಮ್ರಾ ಎರಡು ವಿಕೆಟ್‌ ಪಡೆದ್ರೆ, ಉಮೇಶ್‌ ಯಾದವ್‌ ಒಂದು ವಿಕೆಟ್‌ ಕಬಳಿಸಿದ್ದಾರೆ.

(India vs England Test Series : Shardhul Takur and Virat Kohili Half Centrury )

Comments are closed.